ಭಾರತ ಭವಿಷ್ಯದಲ್ಲಿ ವಿಶ್ವ ಗುರು ಸ್ಥಾನಕ್ಕೇರಲು ಕಾರ್ಮಿಕರ ಸೇವೆ ಸಹಕಾರಿ ಎಂ.ನರೇಂದ್ರ

KannadaprabhaNewsNetwork | Published : May 2, 2024 12:19 AM

ಸಾರಾಂಶ

ವಿವಿಧತೆಯಲ್ಲಿ ಐಕ್ಯತೆ ಮತ್ತು ಸಮಗ್ರತೆ ಕಂಡುಕೊಂಡಿರುವ ಭಾರತ ಭವಿಷ್ಯದಲ್ಲಿ ವಿಶ್ವಗುರು ಸ್ಥಾನಕ್ಕೇರಲು ಕಾರ್ಮಿಕರ ಹಾಗೂ ರೈತರ ಸೇವೆ ಅಪಾರವಾಗಿ ಬೇಕಾಗಿದೆ. ಅವರೇ ಈ ದೇಶದ ಭವಿಷ್ಯಕ್ಕೆ ಸಹಕಾರಿ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಗು ಯುವ ಪ್ರಶಸ್ತಿ ಪುರಸ್ಕೃತ ಎಂ. ನರೇಂದ್ರ ಹೇಳಿದ್ದಾರೆ.

ತರೀಕೆರೆಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿವಿಧತೆಯಲ್ಲಿ ಐಕ್ಯತೆ ಮತ್ತು ಸಮಗ್ರತೆ ಕಂಡುಕೊಂಡಿರುವ ಭಾರತ ಭವಿಷ್ಯದಲ್ಲಿ ವಿಶ್ವಗುರು ಸ್ಥಾನಕ್ಕೇರಲು ಕಾರ್ಮಿಕರ ಹಾಗೂ ರೈತರ ಸೇವೆ ಅಪಾರವಾಗಿ ಬೇಕಾಗಿದೆ. ಅವರೇ ಈ ದೇಶದ ಭವಿಷ್ಯಕ್ಕೆ ಸಹಕಾರಿ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಗು ಯುವ ಪ್ರಶಸ್ತಿ ಪುರಸ್ಕೃತ ಎಂ. ನರೇಂದ್ರ ಹೇಳಿದ್ದಾರೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ವಾಹನಗಳ ರಿಪೇರಿ ಕಾರ್ಮಿಕರ ಸಂಘಟನೆ ಹಾಗೂ ಆಟಮೊಬೈಲ್ಸ್ ಕಾರ್ಮಿಕರ ಸಂಘಟನೆಗಳು ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶ ಕಾರ್ಮಿಕರ ಶ್ರಮದ ಮೇಲೆ ನಿಂತಿದ್ದು ರೈತ ಕಾರ್ಮಿಕರು, ಗುಡಿಕಾರ್ಮಿಕರು , ಕೈಗಾರಿಕಾ ಕಾರ್ಮಿಕರು, ಕೂಲಿ ಕಾರ್ಮಿಕರ ಪರಿಶ್ರಮದಿಂದ ಸಮಗ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿ, ಈ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕಾರ್ಮಿಕರ ಭವಿಷ್ಯ ಉಜ್ಜಲಗೊಳ್ಳಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇ ಶ್ರಮ ಯೋಜನೆ ಹಾಗೂ ಕಾರ್ಮಿಕರ ಕಾರ್ಡ್ ಪ್ರತಿಯೊಬ್ಬರು ಹೊಂದಲೇಬೇಕು ಎಂದು ಹೇಳಿದರು.

ರಾಜಕಾರಣಿ, ಬಂಡವಾಳಶಾಹಿಗಳಿಂದಾಗಲಿ ಈ ದೇಶವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ಶ್ರಮ ಪಡುವ ಕಾರ್ಮಿಕರಿದ್ದರೆ ಮಾತ್ರ ಯಾವ ದೇಶವಾಗಲಿ ಮುಂದುವರಿಯಲು, ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಆದ್ದರಿಂದ ಅವರ ಕುಟುಂಬದ ಭದ್ರತೆಗೆ ಸರ್ಕಾರ ವಿವಿಧ ಯೋಜನೆಗಳ ಮುಖೇನಾ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಟುಂಬ ವರ್ಗದವರ ರಕ್ಷಣೆಗೆ ಸರ್ಕಾರ ಮುಂದಾಗ ಬೇಕೆಂದು ಆಗ್ರಹಿಸಿದರು.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು. ಫಾರೂಕ್ ಮಾತನಾಡಿ ಕಾರ್ಮಿಕ ವರ್ಗದವರು ದುಶ್ಚಟಗಳಿಂದ ದೂರವಾಗಿ ಶಿಸ್ತು ಹಾಗೂ ಸಮಯ ಪಾಲನೆಯಿಂದ ದುಡಿದ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮಾ ಮಾತನಾಡಿ ಕಾರ್ಮಿಕ ಸಂಘಟನೆಗೆ ಒಂದು ನಿವೇಶನವನ್ನು ಸರ್ಕಾರದ ವತಿಯಿಂದ ನಿಗದಿತ ದರದಲ್ಲಿ ಕೊಡಿಸುವುದಕ್ಕೆ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಮುಂದಾಗುತ್ತೇನೆ ಎಂದು ಹೇಳಿದರು.ಸಂಘದ ಅಧ್ಯಕ್ಷ ಶಫೀಕ್, ವಾಸು, ಜಯ್ಯಣ್ಣ, ರೋನಕ್ ಅವರು ಉಪಸ್ಥಿತರಿದ್ದರು. ಇಮ್ರಾನ ಪಾಷಾ ಸ್ವಾಗತಿಸಿ ವಂದಿಸಿದರು.1ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಕಾರ್ಮಿಕರ ಸಂಘಟನೆ ಹಾಗೂ ಆಟಮೊಬೈಲ್ಸ್ ಕಾರ್ಮಿಕರ ಸಂಘಟನೆಗಳು ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಹಾಗು ಯುವ ಪ್ರಶಸ್ತಿ ಪುರಸ್ಕೃತ ಎಂ ನರೇಂದ್ರ ಮಾತನಾಡಿದರು. ತರೀಕೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಚ್.ಯು.ಫಾರೂಕ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮತ್ತಿತರರು ಇದ್ದರು.

Share this article