-ಸಂಸದ ಬಿ ವೈ ರಾಘವೇಂದ್ರ ಪ್ರಶಂಸೆ । ನೂತನ ಧ್ವಜಸ್ತಂಭ ಉದ್ಘಾಟನೆ । ದ್ವಜಾರೋಹಣ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ನಾಡಿನ ನೆಲ, ಜಲ, ಭಾಷೆ ಸಂಸ್ಕೃತಿಗೆ ಧಕ್ಕೆಯಾದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ರಾಜಕೀಯ ಪಕ್ಷಗಳಿಗಿಂತ ಮೊದಲು ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಪ್ರಶಂಸಿಸಿದರು.ಬಿ.ಎಸ್ ಯಡಿಯೂರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಸಮಸ್ತ ಕನ್ನಡಿಗರ ಒತ್ತಾಸೆಯಂತೆ ನಿರ್ಮಾಣವಾದ ನೂತನ ಧ್ವಜಸ್ತಂಭ ಉದ್ಘಾಟಿಸಿ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡದ ಪ್ರಥಮ ದೊರೆ ಮಯೂರ ವರ್ಮ ಜನಿಸಿದ ಈ ಪುಣ್ಯ ಭೂಮಿಯಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾದ ಅಲ್ಲಮಪ್ರಭು, ಅಕ್ಕಮಹಾದೇವಿ,ಸತ್ಯಕ್ಕ ಸಹಿತ ಕವಿಶ್ರೇಷ್ಠ ಜಿ.ಎಸ್ ಶಿವರುದ್ರಪ್ಪ ಸಹಿತ ಹಲವರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಈ ಮಣ್ಣಿಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯೆ ಭಾರತೀ ಶೆಟ್ಟಿ,ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಣಿ ಸದಸ್ಯ ಎನ್ ವಿ ಈರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್, ಕನ್ನಡ ಯುವಕ ಸಂಘದ ಅಧ್ಯಕ್ಷ ಪಚ್ಚಿ ಸಂದೀಪ್, ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಸಂಚಾಲಕರಾದ ಸ್ನೇಹಕ್ಕ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ, ಮಾಲತೇಶ ಮಟ್ಟಿಕೋಟೆ, ರಾಜು, ರಾಕೇಶ್, ಮುಕ್ರಂ, ರೋಷನ್, ವಕೀಲ ಮುಕ್ತಿಯಾರ್ ಅಹಮದ್, ರಾಜು ನಾಯಕ್, ಅಕ್ಬರ್ ಖಾನ್, ತಾ.ಕಸಾಪ ಅದ್ಯಕ್ಷ ಎಚ್ ಎಸ್ ರಘು, ಪತ್ರಕರ್ತ ವೇಣುಗೋಪಾಲ್, ಸಹಕಾರಿ ಧುರೀಣ ಬಿ.ಡಿ ಭೂಕಾಂತ್, ಬೆಣ್ಣೆ ಪ್ರವೀಣ್, ರೈತ ಸಂಘದ ಸತೀಶ್, ಮಾಜಿ ಯೋಧ ರವಿ ಕಪ್ಪನಹಳ್ಳಿ, ಮಂಜುನಾಥ್ ಬಾಳೆಕಾಯಿ, ವೀರಶೈವ ಜಂಗಮ ಅರ್ಚಕ ಪುರೋಹಿತ ಸಂಘದ ಪ್ರಭುಸ್ವಾಮಿ ಹಾಜರಿದ್ದರು.
ಶಿಕಾರಿಪುರದ ಖಾಸಗಿ ಬಸ್ ನಿಲ್ದಾಣದಲ್ಲಿನ ನೂತನ ದ್ವಜಸ್ತಂಭವನ್ನು ಸಂಸದ ರಾಘವೇಂದ್ರ ಉದ್ಘಾಟಿಸಿ ದ್ವಜಾರೋಹಣ ನೆರವೇರಿಸಿದರು.
ಶಿಕಾರಿಪುರದಲ್ಲಿ ನೂತನ ಧ್ವಜಸ್ತಂಭ ಉದ್ಘಾಟನೆ ನೆರವೇರಿಸಿದ ಸಂಸದ ಬಿ ವೈ ರಾಘವೇಂದ್ರ.