ನರಗುಂದ: ಆಡಳಿತ, ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಕಚ್ಚಾಡಿದರೂ ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಂತಹ ಬಾಬಾಸಾಹೇಬರ ಅರಮನೆಯನ್ನು ಹಾಗೆ ಉಳಿಸಿ ಮ್ಯೂಸಿಯಂ (ವಸ್ತು ಸಂಗ್ರಹಾಲಯ) ಆಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಸ್ಥಾನದ ಪುನರುತ್ಥಾನದ ಅವಶ್ಯಕತೆ ಇದೆ. ಕೆಲವು ಅಂಶಗಳು ಮಾರ್ಪಾಡಾಗಬೇಕಿದೆ. ಆದ್ದರಿಂದ ಗದಗನ ವೀರನಾರಾಯಣನ ಗುಡಿಯ ರೀತಿಯಲ್ಲಿ ಈ ವೆಂಕಟೇಶ್ವರ ದೇವಾಲಯದ ನೀಲನಕ್ಷೆ ತಯಾರಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ವಿಶೇಷ ಮುತುವರ್ಜಿ ವಹಿಸಬೇಕು. ಅದರ ಜೀರ್ಣೋದ್ಧಾರಕ್ಕೆ ಪ್ರವಾಸೋದ್ಯಮ ಇಲಾಖೆ ಸಿದ್ಧವಿದೆ ಎಂದರು.
ನರಗುಂದದ ರೈತ ಹೋರಾಟ ಸ್ಮಾರಕ ನಿರ್ಮಾಣಕ್ಕೆ ಜುಲೈ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಿದ್ದೇವೆ. ಒಂದು ತಿಂಗಳೊಳಗೆ ರೈತ ಸ್ಮಾರಕ ಕಾಮಗಾರಿ ಆರಂಭವಾಗುವಂತೆ ಕ್ರಮ ವಹಿಸುವಂತೆ ತಹಸೀಲ್ದಾರರರಿಗೆ ಸೂಚನೆ ನೀಡಿದರು.ನ. 2ಕ್ಕೆ ಪರಿಹಾರ ಜಮೆ: ಈಗಾಗಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿದೆ. ಬೆಳೆ ಹಾನಿ ಪರಿಹಾರ ಜಮೆ ಮಾಡಲು ಅಗತ್ಯ ಇರುವ ಕಾರ್ಯವನ್ನು ಎರಡು ದಿನದಲ್ಲಿ ಮುಗಿಸಿ ನ. 2ರಂದು ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಅಡಟೋರಿಯಂನಲ್ಲಿ ಪರಿಹಾರ ಜಮಾಕ್ಕೆ ಚಾಲನೆ ನೀಡಲಾಗುವುದು. ಇದರಿಂದ ಗದಗ ಜಿಲ್ಲೆಯ 1 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಶ್ರೀ ವೆಂಕಟೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆಗಬೇಕಾಗಿದೆ. ನಗರದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹25 ಲಕ್ಷ ಬೇಕಾಗಿದೆ. ಕೊಣ್ಣೂರ ಭಾಗದಲ್ಲಿನ ಅನೇಕ ಪುರಾತನ ದೇವಸ್ಥಾನಗಳನ್ನು ಸಚಿವರ ಅನುದಾನದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ನೂತನ ಪುರಸಭೆ ಕಟ್ಟಡಕ್ಕೆ ಅಗತ್ಯ ಇರುವ ಪೀಠೋಪಕರಣಗಳ ಖರೀದಿಗೆ ₹50 ಲಕ್ಷ ನೀಡಲಾಗುವುದು ಎಂದು ಹೇಳಿದರು.ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಯೋಜನಾಧಿಕಾರಿ ಬಸನಗೌಡ, ಸಿದ್ದು ಪಾಟೀಲ, ರಾಜುಗೌಡ ಕೆಂಚನಗೌಡ, ಎಸ್.ಆರ್. ಪಾಟೀಲ, ಉಮೇಶಗೌಡ ಪಾಟೀಲ, ದೇಸಾಯಿಗೌಡ ಪಾಟೀಲ, ಗದಗ ಜಿಲ್ಲಾಧಿಕಾರಿ ಸಿ.ಎಸ್. ಶ್ರೀಧರ, ತಹಸೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪುರಸಭೆ ಸದಸ್ಯರಾದ ಸುನೀಲ ಕುಷ್ಟಗಿ, ಮಂಜುಳಾ ಪಟ್ಟಣಶೆಟ್ಟಿ, ದಿವಾನಸಾಬ ಕಿಲ್ಲೇದಾರ, ದೇವಪ್ಪ ಕಟ್ಟಿಮನಿ, ರಾಜೇಶ್ವರಿ ಹವಾಲ್ದಾರ, ರಜೀಯಾಬೇಗಂ ಹವಾಲ್ದಾರ, ಅನ್ನಪೂರ್ಣಾ ಯಲಿಗಾರ, ಗಂಗವ್ವ ಬಿದರಗಡ್ಡಿ, ಪ್ರಶಾಂತ ಜೋಶಿ, ಫಕೀರಪ್ಪ ಸವದತ್ತಿ, ಭಾವನಾ ಪಾಟೀಲ, ರಾಚನಗೌಡ ಪಾಟೀಲ, ಮಹೇಶ ಬೋಳಶೆಟ್ಟಿ, ದೇವರಾಜ ಕಲಾಲ, ಫಕೀರಪ್ಪ ಹಾದಿಮನಿ, ಕವಿತಾ ಆರ್ಭಾಣದ, ಯಲ್ಲಪ್ಪಗೌಡ ನಾಯ್ಕರ, ಕಾಶವ್ವ ಮಳಗಿ, ಹುಸೇನಸಾಬ ಗೋಟೂರ, ರೇಣುಕಾ ಕಲಾರಿ, ರಾಜೇಶ್ವರಿ ವೀರನಗೌಡ್ರ, ವಿಜಯ ಚಲವಾದಿ, ರಾಜಾರಾಮ ಮುಳಿಕ, ಬಸೀರಸಾಬ ಕಿಲ್ಲೇದಾರ, ಬಸನಗೌಡ ಪಾಟೀಲ, ಬಿ.ಬಿ. ಐನಾಪುರ, ಗುರುಪ್ಪ ಆದಪ್ಪನವರ, ಅಜ್ಜಪ್ಪ ಹುಡೇದ, ಮಲ್ಲಪ್ಪ ಮೇಟಿ, ಚಂದ್ರಶೇಖರ ದಂಡಿನ, ಶಿವಾನಂದ ಮುತ್ತವಾಡ, ಗಿರೀಶ ದಾಸರ ಇದ್ದರು.