ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ । ತಾಲೂಕು ಕಚೇರಿ ಬಳಿ ಜೆಡಿಎಸ್ ಪ್ರತಿಭಟನೆ
ಶೃಂಗೇರಿ ಕ್ಷೇತ್ರ ಜೆ.ಡಿ.ಎಸ್ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧವಾಗಿ ಸೋಮವಾರ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು
ತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿಯವರು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂಧ್ಯಾ ಸುರಕ್ಷಾ ಸೇರಿದಂತೆ ಪ್ರತಿ ಪಿಂಚಣಿ ಸೌಲಭ್ಯಗಳ ವಿಳಂಬದಿಂದ ಇದನ್ನೇ ನಂಬಿದ್ದ ವಯೋವೃದ್ಧರು ಔಷಧಿ ಮಾತ್ರೆಗಳಿಲ್ಲದೆ ಹೈರಾಣಗಿದ್ದಾರೆ ಎಂದು ಹೇಲಬಡವರು,ವೃದ್ಧರು, ವಿಧವೆಯರು, ನಿರ್ಗತಿಕರು ಹಾಗೂ ದುರ್ಲಭ ವರ್ಗದವರಿಗೆ ಅಶ್ರಯವಾಗಿದ್ದ ಸಾಮಾಜಿಕ ಯೋಜನೆಗಳಿಗೆ ಸರ್ಕಾರ ಹೊಸ ನಿರ್ಬಂಧ ಗಳನ್ನು ಹೇರುವ ಮೂಲಕ ಫಲಾನುಭವಿಗಳ ಬದುಕಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಆರೋಪಿಸಿದರು.
ಕ್ಷೇತ್ರ ಅಧ್ಯಕ್ಷ ಬಿ.ಎಚ್. ದಿವಕರ್ ಭಟ್ ಬಂಡಿಗಡಿ, ಜೆಡಿಎಸ್ ಪಕ್ಷದ ಶೃಂಗೇರಿ ಕೇತ್ರ ಸಂಚಾಲಕ ಎಚ್,ಎಸ್ ಕಳಸಪ್ಪ ಬಡವರು, ವೃದ್ದರು, ವಿಧವೆಯರು, ಕೊಪ್ಪ ತಾಲೂಕು ಅಧ್ಯಕ್ಷ ಎ,ಎನ್ ರಾಮಸ್ವಾಮಿ,ತಾಲೂಕು ಸಂಚಾಲಕ ವಿಕ್ರಮ್, ಸುಧಾಕರ ಶೆಟ್ಟಿಯವರ ಮಾದ್ಯಮ ವಕ್ತಾರ ಹೆಚ್,ಕೆ ವಿಶ್ವ,ಮುಖಂಡರಾದ ಕೃಷ್ಣ ಶೆಟ್ಟಿ, ಪೂರ್ಣೇಶ್,ವಾಸಪ್ಪ ಕುಂಚೂರು ಇತರರಿದ್ದರು.