ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಉರುಳಲಿದೆ: ಹಾಲಪ್ಪ ಆಚಾರ

KannadaprabhaNewsNetwork |  
Published : May 06, 2024, 12:35 AM IST
5ಕೆಕೆಆರ್1:ಕುಕನೂರು ಪಟ್ಟಣದಲ್ಲಿ ಶನಿವಾರ ರಾತ್ರಿ ಜರುಗಿದ ಬಿಜೆಪಿ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಉರುಳುವುದು ಗ್ಯಾರಂಟಿ.

ಕನ್ನಡಪ್ರಭ ವಾರ್ತೆ ಕುಕನೂರು

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಉರುಳುವುದು ಗ್ಯಾರಂಟಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದಲ್ಲಿ ಜರುಗಿದ ಬಿಜೆಪಿ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಸಿಎಂ ಆಗಿರಬೇಕಾದರೆ ನನ್ನ ತಂದೆಗೆ ಮತ ನೀಡಿ ಎನ್ನುವ ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಂದೆ ನಾನೇ ಸಿಎಂ ಅನ್ನುವ ಡಿಕೆಶಿ ನಡವಳಿಕೆಗಳು ಸರ್ಕಾರ ಉರುಳುವುದರ ಪ್ರತೀಕವಾಗಿದೆ ಎಂದರು.

2014ರ ಮುಂಚೆ ಭಾರತದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ ಹೆಚ್ಚಿತ್ತು. ಆದರೆ ಮೋದಿ ಪ್ರಧಾನಿ ಆದ ನಂತರ ಭಾರತ ಭಯೋತ್ಪಾದನೆ, ಭ್ರಷ್ಟಾಚಾರ ಮುಕ್ತ ಆಗಿದೆ. ಮೋದಿಯಿಂದ ಜಗತ್ತು ಭಾರತವನ್ನು ತಿರುಗಿ ನೋಡುವಂತೆ ಆಗಿದೆ ಎಂದರು.

ಜಿ-20 ಶೃಂಗಸಭೆ ಭಾರತದಲ್ಲಿ ಮೊದಲಿಗೆ ಜರುಗಿತು. ಗ್ಯಾರಂಟಿ ಯೋಜನೆ ನೀಡಿರುವುದಕ್ಕೆ ಖುಷಿ ಇದೆ. ಆದರೆ ಗ್ಯಾರಂಟಿ ಯೋಜನೆಗೆ ಬೇರೇ ಬೆರೆ ಮೂಲಗಳಿಂದ ಬೆಲೆ ಏರಿಕೆ ದುಪ್ಪಟ್ಟು ಮಾಡಿದ್ದಾರೆ. ಬಿಜೆಪಿಯ ವಿದ್ಯಾ ನಿಧಿ ಯೋಜನೆ, ಪಿಎಂ ಕಿಸಾನ್ ನ ₹4000 ನೀಡುವ ಯೋಜನೆ ರದ್ದು ಮಾಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಹತ್ತು ವರ್ಷಗಳ ಕಾಲ ಮೋದಿ ಒಂದು ದಿನ ಸಹ ರಜೆ ತೆಗೆದುಕೊಂಡಿಲ್ಲ. ರಾಹುಲ್ ಗಾಂಧಿ ಸ್ವ ಕ್ಷೇತ್ರ ಅಮೇಥಿಯಲ್ಲಿ ಸ್ಪರ್ಧಿಸಲು ಆಗಲಿಲ್ಲ. ಇಡೀ ದೇಶದ ಜನ ಮೋದಿ ಪ್ರಧಾನಿ ಆಗುವ ಆಸೆ ವ್ಯಕ್ತಪಡಿಸುತ್ತಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಯಾಕ್ರೀ ಮತ ನೀಡಬೇಕು. ಕ್ಯಾವಟರಿಗೆ ಮತ ನೀಡಿ ಸುಭದ್ರ ಸರ್ಕಾರ ರಚಿಸಲು ಮೋದಿ ಆಡಳಿತ ಬಯಸೋಣ ಎಂದರು.

ಅಭ್ಯರ್ಥಿ ಬಸವರಾಜ ಕ್ಯಾವಟರ್ ಮಾತನಾಡಿ, ಪ್ರಧಾನಿ ಮೋದಿಯಿಂದ ವಿಶ್ವದ ಔಷಧಾಲಯ ಭಾರತ ಆಗಿದೆ. ಭಾರತ ವಿಕಸಿತ ಆಗಲು ಮೋದಿ ಶ್ರಮ ಹೆಚ್ಚಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ನನಗೆ ಆಶೀರ್ವಾದ ಮಾಡಿ, ಜನ ಸೇವೆಗೆ ಅವಕಾಶ ನೀಡಬೇಕು ಎಂದರು.

ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿದರು.

ಬಿಜೆಪಿ ಮಂಡಳದ ಅಧ್ಯಕ್ಷ ಮಾರುತಿ ಗಾವರಾಳ, ವಕೀಲ ಶಂಕರಪ್ಪ ಸುರಪೂರು ಮಾತನಾಡಿದರು. ಸಿ.ಎಚ್. ಪೊಪಾ, ಬಸಲಿಂಗಪ್ಪ ಭೂತೆ, ದ್ಯಾಮಣ್ಣ ಜಮಖಂಡಿ, ವಕೀಲ ಶಂಕರಪ್ಪ ಸುರಪೂರು, ಫೀರಹುಸೇನ ಹೊಸಳ್ಳಿ, ಶಿವಕುಮಾರ ಗುಳಗಣ್ಣನವರ್, ವಿಶ್ವನಾಥ್ ಮರಿಬಸಪ್ಪನವರ್ ಇತರರಿದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ