ಎಸ್ಸೆಸ್ಸೆಂ ಸಾಧನೆ ರಾಜ್ಯವೇ ನೋಡುತ್ತಿದೆ

KannadaprabhaNewsNetwork | Published : May 1, 2024 1:25 AM

ಸಾರಾಂಶ

ಇಡೀ ರಾಜ್ಯವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ತಕ್ಷಣ‍ವೇ ಅನುದಾನ ಬಿಡುಗಡೆ ಮಾಡಿ, ಎಲ್ಲರ ನಿರೀಕ್ಷೆಗೆ ಅಭಿವೃದ್ಧಿಗೆ ಸ್ಪಂದಿಸುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅಭಯ ನೀಡಿದ್ದಾರೆ.

- ನಿರೀಕ್ಷೆಗೆ ತಕ್ಕಂತೆ ಎಸ್ಸೆಸ್ಸೆಂ ಜೊತೆ ಸೇರಿ ಕೆಲಸ: ಡಾ.ಪ್ರಭಾ ಅಭಯ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಇಡೀ ರಾಜ್ಯವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ತಕ್ಷಣ‍ವೇ ಅನುದಾನ ಬಿಡುಗಡೆ ಮಾಡಿ, ಎಲ್ಲರ ನಿರೀಕ್ಷೆಗೆ ಅಭಿವೃದ್ಧಿಗೆ ಸ್ಪಂದಿಸುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅಭಯ ನೀಡಿದರು.

ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮತಯಾಚಿಸಿ ಮಾತನಾಡಿದ ಅವರು, ಮಾಯಕೊಂಡ ಕ್ಷೇತ್ರದಲ್ಲಿ ಅಡಕೆ ಬೆಳೆಗಾರರಿಗೆ ಅನುಕೂಲ ಆಗುವಂತೆ ಸಂಸ್ಕರಣಾ ಮತ್ತು ಸಂಗ್ರಹಣಾ ಕೇಂದ್ರ ಸ್ಥಾಪಿಸಲಿದ್ದು, ರೈತರು, ಯುವಕರು, ಮಹಿಳೆಯರ ಅಭಿವೃದ್ಧಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದರು.

ಮಾಯಕೊಂಡ ನೂತನ ತಾಲೂಕು ಘೋಷಣೆಗೆ ಪ್ರಯತ್ನಿಸುವೆ. ಗ್ರಾಮೀಣ ಪ್ರದೇಶದಲ್ಲಿ ಒಳಚರಂಡಿ, ಚರಂಡಿ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಪ್ರಥಮಾದ್ಯತೆ ಮೇಲೆ ಕಲ್ಪಿಸುತ್ತೇವೆ. ಶಾಸಕ ಕೆ.ಎಸ್. ಬಸವಂತಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೀಗೆ ಡಬಲ್ ಎಂಜಿನ್ ವ್ಯವಸ್ಥೆ ಇದೆ. ಇನ್ನು ತಮ್ಮನ್ನು ದಾವಣಗೆರೆ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಮಾಡಿದರೆ, ಟ್ರಿಪಲ್ ಎಂಜಿನ್ ಶಕ್ತಿ ಬಂದು, ಅಭಿವೃದ್ಧಿ ವೇಗ ಪಡೆಯುತ್ತದೆ ಎಂದು ತಿಳಿಸಿದರು.

ಶಾಸಕ ಕೆ.ಎಸ್‌.ಬಸವಂತಪ್ಪ ಮಾತನಾಡಿ, 5 ಗ್ಯಾರಂಟಿಗಳು ಬಡವರು, ದಲಿತರ ಬದುಕನ್ನು ಸುಧಾರಿಸಿವೆ. ಉದ್ಯೋಗ ಖಾತರಿ, ಸಾಲ ಮನ್ನಾದಂತಹ ಯೋಜನೆಗಳನ್ನು ತಮ್ಮ ಸರ್ಕಾರ ಜಾರಿಗೆ ತಂದಿದೆ. ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮತ ನೀಡಿ, ಭಾರಿ ಮತಗಳ ಅಂತರದಿಂದ ಗೆಲ್ಲಿಸಲು ಮನವಿ ಮಾಡಿದರು.

ಪಕ್ಷದ ಬ್ಲಾಕ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಅಣಜಿ ಚಂದ್ರಣ್ಣ, ಗುಮ್ಮನೂರು ಶಂಭಣ್ಣ, ಗುಡಾಳ ಲೋಕೇಶ, ಸಿದ್ದನೂರು ಪ್ರಕಾಶ, ಜಿಪಂ ಮಾಜಿ ಸದಸ್ಯ ಮಾಯಕೊಂಡ ಎಸ್.ವೆಂಕಟೇಶ, ಎಸ್.ಜಿ.ರುದ್ರೇಶ, ಗೋಪಾಲ, ಹುಚ್ಚವ್ವನಹಳ್ಳಿ ಕಂಬರಾಜ, ವಿ.ಜಿ.ರುದ್ರೇಶ, ರವಿಕುಮಾರ, ನಲ್ಕುಂದ ಹಾಲೇಶ, ಅಣಬೇರು ಶಿವಣ್ಣ, ಊರ ಮುಂದಲ ಶಿವಣ್ಣ, ಬಾಡಾ ರವಿ, ಸುರೇಶ, ರುದ್ರಸ್ವಾಮಿ ಇತರರು ಇದ್ದರು.

- - - -30ಕೆಡಿವಿಜಿ17, 18:

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಯಾಚಿಸಿದರು. ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.

Share this article