- ಹಿಂದುಗಳು ಬಳೆ ತೊಟ್ಟಿಲ್ಲ, ತಲ್ವಾರ್, ಮಚ್ಚುಗಳ ಬಳಸೋದೂ ಗೊತ್ತಿದೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರವಿದೆಯೇ ಹೊರತು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಲಭೆಪೀಡಿತ ಆನೆಕೊಂಡ, ಮಟ್ಟಿಕಲ್ಲು ಪ್ರದೇಶಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ, ಸಂತ್ರಸ್ತ ಹಿಂದು ಕುಟುಂಬಗಳ ಮಹಿಳೆಯರು, ವಯೋವೃದ್ಧರು, ಮಕ್ಕಳ ಅಹವಾಲು ಆಲಿಸಿದರು. ಬಳೀಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಪ್ರತಿಯೊಬ್ಬ ಹಿಂದುಗಳು ಪಕ್ಷಾತೀತವಾಗಿ ಒಂದಾಗಬೇಕಾಗಿದೆ. ಹಿಂದು, ಮುಸ್ಲಿಂ, ಕ್ರೈಸ್ತರು ಭಾರತಾಂಬೆ ಮಕ್ಕಳಾಗಬೇಕು. ಪಾಕಿಸ್ತಾನ, ಬಾಂಗ್ಲಾದೇಶಗಳ ಪರ ಜೈಕಾರ ಕೂಗುವವರು ಭಾರತ ವಿರೋಧಿಗಳು. ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಜಯಕಾರ ಹಾಕಿದವನ ವಿರುದ್ಧ ಇದೇ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.
ಸತೀಶ ಪೂಜಾರಿ ಕಾರಣವಲ್ಲ:ನಾಗಮಂಗಲದಲ್ಲಿ ಹಿಂದು ವಿರೋಧಿಗಳು ವ್ಯವಸ್ಥಿತವಾಗಿ ಪೆಟ್ರೋಲ್ ಬಾಂಬ್ ಎಸೆದರು. ಅಸಮರ್ಥ ಗೃಹ ಸಚಿವ ಡಾ.ಜಿ.ಪರಮೇಶ್ವರ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಕೆಲ ದುಷ್ಟಶಕ್ತಿಗಳು ಮಾಡುತ್ತಿವೆ. ದಾವಣಗೆರೆ ಗಲಭೆಗೆ ಹಿಂದು ಜಾಗರಣಾ ವೇದಿಕೆ ಮುಖಂಡ ಸತೀಶ ಪೂಜಾರಿ ಕಾರಣ ಅಲ್ಲ. ಹಿಂದು ಯುವ ಮುಖಂಡ ಸತೀಶ ಪೂಜಾರಿ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿ, ವಾಸ್ತವಾಂಶ ಮಾತನಾಡಿದ್ದಾರೆ. ಅದನ್ನು ಎಸ್‌ಪಿ ಪ್ರಚೋದನಾಕಾರಿ ಭಾಷಣ ಅಂದಿದ್ದಾರೆ. ಆದರೆ, ನಿನ್ನೆ ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಡಿ.ಕೆ. ಶಿವಕುಮಾರ ಅಂತಹರಿಗೆ ಬ್ರದರ್ಸ್ ಎನ್ನುತ್ತಾರೆ. ಹಿಂದುಗಳ ಮೇಲೆ ಬೇಕಾಬಿಟ್ಟಿ ಕೇಸ್ ದಾಖಲಿಸಿ, ಬಂಧಿಸುತ್ತಿದ್ದೀರಿ. ನಾವು ಹಿಂದುಗಳು ಕೈಗೆ ಬಳೆ ತೊಟ್ಟಿಲ್ಲ. ನೀವು ಇದೇ ರೀತಿ ಬಂಧಿಸಿದರೆ, ಹಳ್ಳಿ ಹಳ್ಳಿಗಳಿಂದ ಬರುತ್ತೇವೆ. ಸಂದರ್ಭ ಬಂದರೆ, ತಲ್ವಾರ್, ಮಚ್ಚುಗಳನ್ನು ಬಳಸುವುದು ನಮಗೂ ಗೊತ್ತಿದೆ ಎಂದು ರೇಣುಕಾಚಾರ್ಯ, ಸರ್ಕಾರದ ಗುಲಾಮರಾಗಿ ಯಾರೂ ಕೆಲಸ ಮಾಡಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಬಾರದು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಧನಂಜಯ ಕಡ್ಲೇಬಾಳು, ಪಿ.ಸಿ.ಶ್ರೀನಿವಾಸ ಭಟ್ ಇತರರು ಇದ್ದರು.- - - ಬಾಕ್ಸ್ * ಮೂವರು ಯುವಕರ ಬಿಡಿಸಿದ ರೇಣುಕಾಚಾರ್ಯ ದಾವಣಗೆರೆಯಲ್ಲಿ ಕಲ್ಲು ತೂರಾಟ, ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದ ಇಲ್ಲಿನ ಮಟ್ಟಿಕಲ್ಲು ಪ್ರದೇಶದ ವಾಸಿಗಳಾದ ಅಮಾಯಕ ಯುವಕರಾದ ಸುಮಂತ್, ಗಣೇಶ, ಅಮಿತ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರ ಗೊತ್ತಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಕ್ಷಣ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ, ಅಮಾಯಕ ಯುವಕರನ್ನು ಬಿಡುಗಡೆ ಮಾಡಿಸಿದರು. ಅಷ್ಟೇ ಅಲ್ಲ, ಅಲ್ಲಿ ಭಯಭೀತರಾಗಿದ್ದ ಹಿಂದು ಕುಟುಂಬಗಳು, ಮಹಿಳೆಯರು, ಯುವತಿಯರು, ವಯೋವೃದ್ಧರಿಗೆ ನಿಮ್ಮೊಂದಿಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂಬುದಾಗಿ ಧೈರ್ಯ ಮೂಡಿಸಿದರು. - - -
-20ಕೆಡಿವಿಜಿ16, 17:ದಾವಣಗೆರೆಯ ಆನೆಕೊಂಡ, ಮಟ್ಟಿಕಲ್ಲು ಪ್ರದೇಶಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಡಾಳ ಮಲ್ಲಿಕಾರ್ಜುನ, ಧನಂಜಯ ಕಡ್ಲೇಬಾಳು ಇತರರು ಭೇಟಿ ನೀಡಿ, ನಿವಾಸಿಗಳು, ಮಹಿಳೆಯರಿಗೆ ಧೈರ್ಯ ಹೇಳಿದರು.