ಬೆಳಗಾವಿ : ಅಖಾಡಕ್ಕಿಟ್ಟ ಹೆಜ್ಜೆ ಹೊಸದು, ಬೇರು ಮಾತ್ರ ಹಳೆಯದು

KannadaprabhaNewsNetwork |  
Published : Mar 31, 2024, 02:16 AM ISTUpdated : Mar 31, 2024, 06:31 AM IST
ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದಲ್ಲಿ ಬೆಳಗಾವಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪ್ರಚಾರ ನಡೆಸಿದರು | Kannada Prabha

ಸಾರಾಂಶ

ಚಿಕ್ಕೋಡಿ ಲೋಕಸಭೆ‌ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಅಗಸಗಾ, ಹಂದಿಗನೂರು, ಕೇದನೂರು ಗ್ರಾಮದಲ್ಲಿ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿದರು.

 ಬೆಳಗಾವಿ :   ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಹೆಜ್ಜೆ ಇಟ್ಟಿರುವುದು ಹೊಸದಾಗಿರಬಹುದು. ಆದರೆ, ಬೇರು ಮಾತ್ರ ಹಳೆಯದು. ತಂದೆಯವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತದಾರರು ಮತ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಕೋರಿದರು.

ಚಿಕ್ಕೋಡಿ ಲೋಕಸಭೆ‌ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಅಗಸಗಾ, ಹಂದಿಗನೂರು, ಕೇದನೂರು ಗ್ರಾಮದಲ್ಲಿ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಂದೆಯವರು ಭಾಷಣ ಮಾಡುವವರಲ್ಲ, ಅವರ ಅಭಿವೃದ್ಧಿಗಳ ಕಾರ್ಯಗಳು ಮಾಡಿ ಹೆಸರುವಾಸಿಯಾದವರು. ಇಲ್ಲಿಂದ ಆಯ್ಕೆಯಾದರೆ ಕೇಂದ್ರದಿಂದ ಅನುದಾನದ ತರಲು ಹಾದಿ ಸುಗಮವಾಗಲಿದೆ. ಜತೆಗೆ ಚಿಕ್ಕೋಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ದೇಶದ ಹಿತ ಕಾಪಾಡಲು, ದೇಶದ ಅಭಿವೃದ್ಧಿಗಾಗಿ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ನಿಮ್ಮ ಸಹೋದರರಿಗೆ ಮತದಾರರು ತಮ್ಮ ಮತ ನೀಡಬೇಕು. ಜನಸೇವೆ ಮಾಡಲು ಅವಕಾಶ ಸಿಕ್ಕಿದೆ. ನಿಮ್ಮ ಮನೆ-ಮಗಳನ್ನು ಕೈ ಹಿಡಿದು ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಈ ಕ್ಷೇತ್ರದಿಂದ ಆಯ್ಕೆಯಾದರೆ ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ವಿಧಾನಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿನ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಈ ಯೋಜನೆಗಳಿಂದ ರಾಜ್ಯದ ಜನತೆ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಅರುಣ ಕಟಾಂಬಳೆ, ಜಯಶ್ರೀ ಮಾಳಗಿ, ಗ್ರಾಪಂ‌ ಅಧ್ಯಕ್ಷ ‌ಅಮೃತ ಮುದ್ದನ್ನವರ, ಉಪಾಧ್ಯಕ್ಷ ಶೋಭಾ ಕುರೆನ್ನವರ, ಉಮಾ ಕೋಲಕಾಲ, ಯಲ್ಲಪ್ಪ ಪಾಟೀಲ್, ಬಸನಗೌಡ ಪಾಟೀಲ್, ಮಾರುತಿ ಕಂಗ್ರಾಳಕರ್, ಸಾಗರ ಪಿಂಜಟ, ಪರಶುರಾಮ ರೆಡೆಕರ್, ಶೆಟ್ಟು ಗೆವಡೆ, ಜ್ಯೋತಿಬಾ ಜೋವಡೆ, ಲಕ್ಷ್ಮ ಣ ಕಂಗ್ರಾಳಕರ್ ಹಾಗೂ ಗ್ರಾಮಸ್ಥರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ
ರೈತ ಭವನ ಶಿಥಿಲ, ವಾಸಿಸಲು ಜಟಿಲ!