ಕನ್ನಡಪ್ರಭ ವಾರ್ತೆ ಧಾರವಾಡ
ಧಾರವಾಡ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಆಡಳಿತಾತ್ಮಕವಾಗಿ ವಿಶಿಷ್ಟ ಸ್ಥಾನಮಾನ ಹೊಂದಿರುವ ನಗರ. ನಾಗರಿಕರ ಮೂಲಭೂತ ಸೌಲಭ್ಯ, ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಬೀದಿ ದೀಪ ಹಾಗೂ ಇತರ ನಾಗರಿಕ ಸೇವೆಗಳ ಸಮರ್ಪಕ ನಿರ್ವಹಣೆಗಾಗಿ ಪ್ರತ್ಯೇಕ ಮಹಾನಗರ ಪಾಲಿಕೆಯ ಅವಶ್ಯಕತೆ ಇದೆ. ಸರ್ಕಾರ ಇದನ್ನು ಮನಗಂಡು ಧಾರವಾಡ ಜನರ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.
ಸಂಸ್ಥೆಯ ಕಾರ್ಯದರ್ಶಿ ಅಜಿತ ಪ್ರಸಾದ, ಹೋರಾಟಗಾರ ಬಿ.ಡಿ. ಹಿರೇಮಠ, ಗುರುರಾಜ ಹುಣಸೀಮರದ, ಮನೋಜ ಪಾಟೀಲ, ಮಹಾವೀರ ಉಪಾಧ್ಯೆ, ಸುರೇಶ ಬೆದರೆ, ಶಂಕರ ಶೇಳಕೆ, ವಿಜಯಾನಂದ ಶೆಟ್ಟಿ, ಮೋಹನ ರಾಮದುರ್ಗ, ಶಿವಾನಂದ ಕವಳಿ, ಸಂತೋಷ ತಿಗಡಿ, ಸಂಕಲ್ಪ ಕಲ್ಯಾಣ ಶೆಟ್ಟರ, ಆನಂದ ಹೂಗಾರ, ಶಿವಲಿಂಗಯ್ಯ ಹಿರೇಮಠ ಮತ್ತಿತರರು ಇದ್ದಾರೆ. 20ನೇ ದಿನದ ಸರತಿ ಉಪವಾಸದಲ್ಲಿ ಆನಂದ ಹೂಗಾರ, ಶಾಂತಾ ಪವಾರ, ಭಾರತಿ ದಳವಾಯಿ, ಶಕುಂತಲಾ ಕಟ್ಟಿ, ಪುಷ್ಪಾ ನವಲಗುಂದ ಇದ್ದರು.