ಹಿರೇಕೆರೂರ: ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದಾಗಬೇಕು, ಸಿರಿಗೆರೆಯ ಶ್ರೀಮದ್ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಕಾರಿಗಳ ನೇಮಕ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಸಭೆಯಲ್ಲಿ ದಾವಣಗೆರೆಯ ಖ್ಯಾತ ಉದ್ಯಮಿ ಅಣಬೇರು ರಾಜಣ್ಣನವರು ಮಾತನಾಡಿ, ವೈಚಾರಿಕ ಪರಂಪರೆಗೆ ನಾಂದಿ ಹಾಡಿದ ಹಾಗೂ ಬಸವೇಶ್ವರರು ಕಟ್ಟ ಬಯಸಿದ ಸಮಸಮಾಜ ನಿರ್ಮಾಣವಾಗಬೇಕು. ನಾವು ಈಗಿರುವ ಪೂಜ್ಯರ ಧೋರಣೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಒಪ್ಪುವುದಾದರೆ ಈಗಿರುವ ಪೂಜ್ಯರು ತಾವೇ ಸ್ವತಃ ರಚಿಸಿಕೊಂಡ ಡೀಡ್ ರದ್ದು ಪಡಿಸಬೇಕು, ಬೃಹನ್ ಮಠದ ಹಳೆಯ ಡೀಡಿನ ಪ್ರಕಾರ ನೂತನ ಪೀಠಾಧಿಪತಿಯನ್ನು ಆಯ್ಕೆ ಮಾಡಬೇಕು ಹಾಗೂ ಪೂಜ್ಯರು ನಿವೃತ್ತಿ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ ಎಚ್ಚರಿಸಿದರು.ಸಭೆಯಲ್ಲಿ ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ್, ಶಿಕಾರಿಪುರ ತಾಲೂಕಿನ ಸಾಧು ಸಮಾಜದ ಅಧ್ಯಕ್ಷರಾದ ಚಂದ್ರಪ್ಪ ಜಂಬೂರ, ರಾಣಿಬೆನ್ನೂರು ತಾಲೂಕಿನ ಸಮಾಜದ ಮಾಜಿ ಅಧ್ಯಕ್ಷರಾದ ಮಲ್ಲೇಶಪ್ಪ ಅರಿಕೇರಿ, ರಟ್ಟಿಹಳ್ಳಿ ತಾಲೂಕಿನ ಸಮಾಜದ ಅಧ್ಯಕ್ಷರಾದ ಮಾಲತೇಶ್ ಗಂಗೋಳ, ಸಮಾಜದ ಮುಖಂಡರಾದ ಎಸ್.ಬಿ. ತಿಪ್ಪಣ್ಣನವರ್, ಬಿ.ಎನ್. ಬಣಕಾರ್, ಜಟ್ಟಪ್ಪ ಕರೆಗೌಡ್ರು, ಕೆ.ಬಿ. ಬಾಳಿಕಾಯಿ, ಪ್ರಕಾಶ್ ಗೌಡ ಗೌಡರ್, ಜಯಣ್ಣ ಹೊಳೆ ಅನ್ವೇರಿ, ಆರ್.ಎನ್. ಗಂಗೋಳ್, ಆರ್.ಎನ್. ಬಾಳಿಕಾಯಿ, ದೊಡ್ಡ ಗೌಡ್ರು ಪಾಟೀಲ್ ಹಾಗೂ ಹಿರೇಕೆರೂರು, ರಾಣಿಬೆನ್ನೂರು, ಬ್ಯಾಡಗಿ, ಶಿಕಾರಿಪುರ ತಾಲೂಕುಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.