ಒಣಗುತ್ತಿದೆ ತೊಗರಿ, ರೈತರಲ್ಲಿ ಆತಂಕ

KannadaprabhaNewsNetwork |  
Published : Nov 23, 2024, 12:30 AM IST
ಚಿತ್ರ ಶೀರ್ಷಿಕೆ - ಡ್ರೈ ತೊಗರಿಆಳಂದ ತಾಲೂಕಿನ ಕಡಗಂಚಿ ವ್ಯಾಪ್ತಿಯಲ್ಲಿನ ಹೊಲಗಳಲ್ಲಿ ಒಣಗಿದ ತೊಗರಿಯನ್ನು ಶಾಸಕ ಬಿ.ಆರ್. ಪಾಟೀಲ ಅವರು ಭೇಟಿ ನೀಡಿ ವೀಕ್ಷಿಸಿದರು. ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮತ್ತು  ರೈತರಿದ್ದರು.  | Kannada Prabha

ಸಾರಾಂಶ

ಏಕಾಏಕಿ ತೊಗರಿ ಫಸಲು ಆಳಂದದ ಸುತ್ತಮುತ್ತ ಒಣಗಲು ಶುರು ಮಾಡಿದ್ದರಿಂದ ಬಂಪರ್‌ ತೊಗರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳವಳ ಉಂಟಾಗಿದೆ. ತಾಲೂಕಿನ ಹಲವಡೆ ತೊಗರಿ ಅಪಾರ ಪ್ರಮಾಣದಲ್ಲಿ ಒಣಗಿದ್ದು, ಕೆಲವಡೆ ಇನ್ನೂ ಒಣಗಲಾರಂಭಿಸಿದೆ. ಈ ಕುರಿತು ಕೃಷಿ ಇಲಾಖೆ ಸರ್ವೆ ಮೂಲಕ ಅಂಕಿಅಂಶಗಳ ಮಾಹಿತಿ ಕಲೆಹಾಕಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಆಳಂದಏಕಾಏಕಿ ತೊಗರಿ ಫಸಲು ಆಳಂದದ ಸುತ್ತಮುತ್ತ ಒಣಗಲು ಶುರು ಮಾಡಿದ್ದರಿಂದ ಬಂಪರ್‌ ತೊಗರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳವಳ ಉಂಟಾಗಿದೆ. ತಾಲೂಕಿನ ಹಲವಡೆ ತೊಗರಿ ಅಪಾರ ಪ್ರಮಾಣದಲ್ಲಿ ಒಣಗಿದ್ದು, ಕೆಲವಡೆ ಇನ್ನೂ ಒಣಗಲಾರಂಭಿಸಿದೆ. ಈ ಕುರಿತು ಕೃಷಿ ಇಲಾಖೆ ಸರ್ವೆ ಮೂಲಕ ಅಂಕಿಅಂಶಗಳ ಮಾಹಿತಿ ಕಲೆಹಾಕಲು ಮುಂದಾಗಿದೆ.

ತಾಲೂಕಿನ ಐದು ಹೋಬಳಿ ವಲಯದಲ್ಲಿ ₹90,174 ಹೆಕ್ಟರ್ ತೊಗರಿ ಬಿತ್ತನೆ ಮಾಡಲಾಗಿತ್ತು. ಉತ್ತಮ ವಾತಾವರಣದಿಂದ ಪ್ರಾರಂಭದಲ್ಲಿ ಈ ಬೆಳೆಗೆ ಉತ್ತಮ ಬೆಳವಣಿಗೆ ಕಂಡು, ರೈತರು ಬಂಪರ್ ಬೆಳೆ ನಿರೀಕ್ಷಿಸಿದ್ದರು. ಬದಲಾದ ಹವಾಮಾನ ಪರಿಸ್ಥಿತಿಗಳು ಮತ್ತು ಉಷ್ಣತೆಯ ಏರಿಳಿತದಿಂದಾಗಿ ನಿಂಬರಗಾ, ನರೋಣಾ, ಆಳಂದ ಸೇರಿ ಹಲವಡೆ ತೊಗರಿ ಬೆಳೆ ಒಣಗಿಬಿದ್ದು ನಷ್ಟವಾಗಿದೆ.

ತೊಗರಿ ಹಾನಿ ಅನುಭವಿಸುತ್ತಿರುವ ರೈತರ ಕಷ್ಟವನ್ನು ಮನಗಂಡು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್ ಅವರು ಕಡಗಂಚಿ ವಲಯದ ಹೊಲಗಳಿಗೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು. ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 90174 ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಈಗಗಲೇ ನರೋಣಾ, ನಿಂಬರಗಾ, ಅಳಂದ ವಲಯದಲ್ಲಿ ತೊಗರಿ ಒಣಗಿದ ಬಗ್ಗೆ ಹೆಚ್ಚಿನ ಪ್ರಮಾಣ ಕಂಡುಬಂದರೆ, ಖಜೂರಿ ಮತ್ತು ಮಾದನಹಿಪ್ಪರಗಾ ವಲಯದಲ್ಲಿ ಅಲ್ಲಲ್ಲಿನ ರೈತರ ತೊಗರಿ ಒಣಗಿ ನಷ್ಟವಾಗಿದೆ. ಈ ಕುರಿತು ಸರ್ವೆ ನಡೆಸಲು ಕೃಷಿ ಇಲಾಖೆ ಮುಂದಾಗಬೇಕಿದೆ.

ಬೆಳೆ ಒಣಗಲು ಕಾರಣ

* ಇಲಾಖೆ ಶಿಫಾರಸ್ಸು ಮಾಡಿದ ಜಿಆರ್‍ಕೊ 811, ತಳಿ, ಜಿಆರ್‍ಜಿ 152 ಈ ತಳಿ ಸಿಫಾರಸ್ಸು ಬಿಟ್ಟು ಕೆಲವು ರೈತರು ಮಹಾರಾಷ್ಟ್ರದಿಂದ ಅಥವಾ ಸ್ಥಳೀಯ ತಳಿಗಳನ್ನು ಬಿತ್ತನೆ ಕೈಗೊಂಡಿದ್ದರೆ ಒಣಗಲು ಕಾರಣವಾಗಿರಬವುದು.* ಪ್ರತಿವರ್ಷ ತೊಗರಿ ಬೆಳೆದ ಹೊಲದಲ್ಲಿ ತೊಗರಿ ಬೆಳೆದರೆ ರೋಗ ಬರುವುದು ಸಾಮಾನ್ಯ.

ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ

ತೊಗರಿ ಒಣಗಿ ನೆಟೆಹಾಯದಂತೆ ಈ ರೋಗ ಕಡಿಮೆ ಮಾಡಲು ತೊಗರಿ ಬದಲಾಗಿ ಜೋಳ, ಸಜ್ಜೆ ಮೆಕ್ಕೆಜೋಳ ಬೆಳೆಯಬೇಕು. ಭೂಮಿಯಲ್ಲಿ ತಿಪ್ಪೆಗೊಬ್ಬರ ಅಂಶ ಅಥವಾ ಸಾವಯವ ಅಂಶ ಕಡಿಮೆ ಇದ್ದಲ್ಲಿ ಈ ರೋಗವು ಉಲ್ಬಣಗೊಳ್ಳುತ್ತದೆ.

ಈ ವರ್ಷ ತೊಗರಿ ನೆಟೆ ಬಿದ್ದ ಹೊಲದಲ್ಲಿ ಮುಂದಿನ ವರ್ಷ ಯಾವ ಕಾರಣಕ್ಕೂ ತೊಗರಿ ಬಿತ್ತನೆ ಕೈಗೊಳ್ಳಬಾರದು. ಒಂದು ವೇಳೆ ತೊಗರಿ ಬಿತ್ತುವುದೇ ಆಗಿದ್ದರೆ ಕಡ್ಡಾಯವಾಗಿ ಬಿತ್ತನೆ ನಂತರ ಎಕರೆ 4 ಕಿ.ಲೋ ಗ್ರಾಮ ಟ್ರೈಕೋಡರ್ಮಾ ಒಂದು ಮಣ್ಣು ಬುಟ್ಟಿಯಲ್ಲಿ ಮಿಶ್ರಣಮಾಡಿ ತೊಗರಿ ಬಿತ್ತಿದ ಸಾಲಿನಲ್ಲಿ ಹಾಕಬೇಕು. ಪಿ.ಎಂ. ಮಲ್ಲಿಕಾರ್ಜುನ ಸಹಾಯಕ ಕೃಷಿ ನಿರ್ದೇಶಕರು

ಆಳಂದದ ಕಡಗಂಚಿ ವ್ಯಾಪ್ತಿಯಲ್ಲಿನ ಹೊಲಗಳಲ್ಲಿ ಒಣಗಿದ ತೊಗರಿಯನ್ನು ಶಾಸಕ ಬಿ.ಆರ್. ಪಾಟೀಲ ಭೇಟಿ ನೀಡಿ ವೀಕ್ಷಿಸಿದರು. ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮತ್ತು ರೈತರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌