ಪರಮಾತ್ಮ ಭವರೋಗ ವೈದ್ಯ: ಶರಣಮ್ಮಕ್ಕ

KannadaprabhaNewsNetwork |  
Published : Feb 16, 2026, 02:15 AM IST
ಕಾರ್ಯಕ್ರಮವನ್ನ ರಾಜಯೋಗಿನಿ ಶರಣಮ್ಮಕ್ಕನವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸುರೇಶ ಕನೋಜ ಮಾತನಾಡಿ, ಆರೋಗ್ಯಯುತ ಬದುಕಿಗೆ ಮೊದಲು ಒಳ್ಳೆಯ ಸಕಾರಾತ್ಮಕ ವಿಚಾರಗಳು ಅವಶ್ಯಕವಾಗಿದೆ. ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ದಿವ್ಯ ಔಷಧಿಯಾಗಿದೆ ಎಂದರು.

ನರಗುಂದ: ಮನುಷ್ಯ ಸಮಾಜದಲ್ಲಿ ಎಷ್ಟು ದಿನ ಬದುಕಿರುತ್ತಾನೆ ಎಂಬುದು ಯಾರಿಗೂ ತಿಳಿಯದು. ಬದುಕಿರುವಷ್ಟು ದಿನ ಭಗವಂತನ ಸೇವೆ ಮಾಡಬೇಕೆಂದು ಹೆಬಸೂರಿನ ರಾಜಯೋಗಿನಿ ಶರಣಮ್ಮಕ್ಕ ತಿಳಿಸಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಸೇವಾ ಕೇಂದ್ರದಲ್ಲಿ 90ನೇ ಮಹಾಶಿವರಾತ್ರಿಯ ಪ್ರಯುಕ್ತ ಆರೋಗ್ಯಯುತ ಬದುಕಿಗೆ ಆಯುರ್ವೇದದ ಜತೆಗೆ ಭಗವಂತನ ನಾಮಸ್ಮರಣೆಯ ಶಕ್ತಿ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಮಾತ್ಮ ಭವರೋಗ ವೈದ್ಯ. ಅಮೂಲ್ಯವಾದ ಶರೀರ ನಮಗೆ ಸಿಕ್ಕಿದೆ. ಆದರೆ ಅದನ್ನು ಕೆಲವರು ದುಶ್ಚಟಗಳಿಗೆ ದಾಸರಾಗಿ ಹಾಳು ಮಾಡಕೊಳ್ಳುತ್ತಾರೆ. ಶರೀರದ ಒಂದೊಂದು ಅಂಗದ ಬೆಲೆ ಈ ಜಗತ್ತಿನಲ್ಲಿರುವ ಡಾಕ್ಟರ ಹತ್ತಿರ ಹೋದಾಗ ಗೊತ್ತಾಗುತ್ತದೆ. ಪರಮಾತ್ಮ ಕೊಟ್ಟಿರುವ ಈ ಶರೀರದ ಬೆಲೆ ಎಷ್ಟು ಎಂದು ಬೆಲೆ ಕಟ್ಟಲಾಗದು. ಇಂತಹ ಬೆಲೆ ಬಾಳುವ ಶರೀರದಲ್ಲಿ ನಾನಾತ್ಮನು ಅರಿವು ಮಾಡಿಕೊಂಡು ನಿರಂತರ ತಂದೆ ಪರಮಾತ್ಮನ ನೆನಪು ಮಾಡಿಕೊಂಡು ಜೀವನ ನಡೆಸಬೇಕೆಂದು ಎಂದರು.

ಸುರೇಶ ಕನೋಜ ಮಾತನಾಡಿ, ಆರೋಗ್ಯಯುತ ಬದುಕಿಗೆ ಮೊದಲು ಒಳ್ಳೆಯ ಸಕಾರಾತ್ಮಕ ವಿಚಾರಗಳು ಅವಶ್ಯಕವಾಗಿದೆ. ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ದಿವ್ಯ ಔಷಧಿಯಾಗಿದೆ ಎಂದರು.

ಡಾ. ಅಮಿತ್ ಬ್ಯಾತನಾಳ ಮಾತನಾಡಿ, ನಾವು ಕೊಡುವ ಔಷಧಿ ಕೆಲಸ ಮಾಡಬೇಕು ಎಂದರೆ ಪರಮಾತ್ಮನ ನಾಮಸ್ಮರಣೆಯ ಅವಶ್ಯಕವಾಗಿದೆ. ನಾವು ಕೇವಲ ಭರವಸೆ ಕೊಡಬಲ್ಲೆವು, ಆದರೆ ಭರವಸೆ ನಿಭಾಯಿಸುವವನು ಪರಮಾತ್ಮ ಎಂದರು.ಈ ಸಂದರ್ಭದಲ್ಲಿ ಈಶ್ವರೀಯ ಸೇವಾ ಕೇಂದ್ರದಿಂದ 150 ಜೋಗಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ರಾಜಯೋಗಿನಿ ಕು. ಪ್ರಭಕ್ಕನವರು, ಡಾ. ಜಿ.ಎಸ್. ನುಗ್ಗಾನಟ್ಟಿ, ಡಾ. ಸಿ.ಕೆ. ರಾಚನಗೌಡ್ರ, ಡಾ. ಭದ್ರಾಗೌಡರ ಸೇರಿದಂತೆ ಮುಂತಾದವರು ಇದ್ದರು. ವಿ.ಎನ್. ಕೊಳ್ಳಿಯವರ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ಮಾದರ ನಿರೂಪಿಸಿದರು. ಅರವಿಂದ ಮೇಗೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂತ ಸೇವಾಲಾಲ್‌ ಮಹಾನ್ ದಾರ್ಶನಿಕ: ನಾಗರಾಜ ಲಕ್ಕುಂಡಿ
ಸಂಸ್ಕಾರ, ಸನ್ನಡತೆಯಿಂದ ಗುರುವಿನ ಕೃಪೆ: ಫಕೀರ ದಿಂಗಾಲೇಶ್ವರ ಶ್ರೀ