ದೇಶದ ಸಂಸ್ಕೃತಿ ಉಳಿವು ಯುವಕರ ಕೈಯಲ್ಲಿದೆ

KannadaprabhaNewsNetwork | Published : Dec 27, 2024 12:47 AM

ಸಾರಾಂಶ

ಭಾರತವು ಹೆಚ್ಚು ಯುವಶಕ್ತಿ ಹೊಂದಿರುವ ರಾಷ್ಟ್ರವಾಗಿದೆ. ದೇಶದ ಸಂಸ್ಕೃತಿಯನ್ನು ಉಳಿಸುವುದು ಬೆಳೆಸುವುದು ನಮ್ಮ ಯುವಜನರ ಕೈಯಲ್ಲಿದೆ. ಆದ್ದರಿಂದ ನಾವೆಲ್ಲರೂ ಇಂದಿನ ಯುವಜನರಲ್ಲಿ ಮೌಲ್ಯಗಳನ್ನು ತುಂಬುವುದು ಅವಶ್ಯಕವಾಗಿದೆ. ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿ, ರೂಪಿಸಬೇಕಾಗಿದೆ ಎಂದು ಅನ್‌ಮೋಲ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ.ದಿನೇಶ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಅನ್‌ಮೋಲ್ ಉತ್ಸವ-2024 ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಿ.ಜಿ.ದಿನೇಶ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತವು ಹೆಚ್ಚು ಯುವಶಕ್ತಿ ಹೊಂದಿರುವ ರಾಷ್ಟ್ರವಾಗಿದೆ. ದೇಶದ ಸಂಸ್ಕೃತಿಯನ್ನು ಉಳಿಸುವುದು ಬೆಳೆಸುವುದು ನಮ್ಮ ಯುವಜನರ ಕೈಯಲ್ಲಿದೆ. ಆದ್ದರಿಂದ ನಾವೆಲ್ಲರೂ ಇಂದಿನ ಯುವಜನರಲ್ಲಿ ಮೌಲ್ಯಗಳನ್ನು ತುಂಬುವುದು ಅವಶ್ಯಕವಾಗಿದೆ. ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿ, ರೂಪಿಸಬೇಕಾಗಿದೆ ಎಂದು ಅನ್‌ಮೋಲ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ.ದಿನೇಶ ಹೇಳಿದರು.

ನಗರಕ್ಕೆ ಸಮೀಪದ ಶಿರಮಗೊಂಡನಹಳ್ಳಿಯ ಅನ್‌ಮೋಲ್ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಬುಧವಾರ ಸಂಜೆ ನಡೆದ ಅನ್‌ಮೋಲ್ ಉತ್ಸವ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನ್‌ಮೋಲ್ ವಿದ್ಯಾಸಂಸ್ಥೆಯು ಚಟುವಟಿಕೆ ಆಧಾರಿತ ಶಿಕ್ಷಣದೊಂದಿಗೆ ಮಕ್ಕಳ ಬೌದ್ಧಿಕ, ಮಾನಸಿಕ, ಶಾರೀರಿಕ, ಸರ್ವತೋಮುಖ ಬೆಳವಣಿಗೆಗೆ ಸದೃಢ ಅಡಿಪಾಯ ಹಾಕುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡೆ, ಚಿತ್ರಕಲೆ, ವಿಜ್ಞಾನ, ತಂತ್ರಜ್ಞಾನ, ಪರಿಸರ ರಕ್ಷಣೆ ಮುಂತಾದವುಗಳ ಅರಿವು ಹಾಗೂ ತರಬೇತಿಯನ್ನು ನಿರಂತರವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಪ್ರತಿವರ್ಷ ವಿಭಿನ್ನ ವಿಷಯಾಧಾರಿತ ವಾರ್ಷಿಕೋತ್ಸವ ಆಚರಿಸುತ್ತಿದೆ. ಈವರೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ವಿಶೇಷ, ವಚನ ಸಂಭ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷ ಡಿ.ವಿ.ರವೀಂದ್ರ, ಕಾರ್ಯದರ್ಶಿ ಬಿ.ಒ. ಉಮೇಶ್, ಜಂಟಿ ಕಾರ್ಯದರ್ಶಿ ಕೆ.ಇ. ಭೈರೇಶ್, ಜಂಟಿ ಖಜಾಂಚಿ ಕೆಎನ್‌ಸಿ ಗೌಡ, ಸದಸ್ಯರಾದ ಬಿ.ಸಿ. ಭೈಜುರಾಮ, ಬಿ.ಸಿ.ಪ್ರಕಾಶ್, ಕೆ.ಎ.ಶಿವಲಿಂಗಪ್ಪ, ಪ್ರಾಚಾರ್ಯ ಯು.ಕೊಟ್ರೇಶಿ, ಎಲ್.ಸುಬ್ರಹ್ಮಣ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವರ್ಷದ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- - - -26ಕೆಡಿವಿಜಿ31:

ದಾವಣಗೆರೆಯ ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

Share this article