ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಊರು ಬದಲಾದರೆ ಸಾಲದು, ಜೊತೆಗೆ ವ್ಯವಸ್ಥೆ ಕೂಡ ಬದಲಾವಣೆಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹರೀಶ.ಎ ಅಭಿಪ್ರಾಯಪಟ್ಟರು.ಪಟ್ಟಣದ ನ್ಯಾಯಾಲಯಕ್ಕೆ ನ್ಯಾಯವಾದಿಗಳ ಸಂಘದ ಆಹ್ವಾನದ ಮೇರೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾನೂನು ಮತ್ತು ಸಂವಿಧಾನದ ಮೌಲ್ಯಗಳನ್ನು ತಿಳಿದವರು ನಾವು ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಇಲ್ಲಿನ ಸಿವಿಲ್ ಕೋರ್ಟ್‌ನಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಹೆಚ್ಚುವರಿ ನ್ಯಾಯಾಲಯದ ಬೇಡಿಕೆ ಬಂದಿದ್ದು, ಪ್ರಸ್ತಾವನೆಯನ್ನು ಉಚ್ಛ ನ್ಯಾಯಾಲಯಕ್ಕೆ ಕಳಿಸಿದ್ದೇವೆ. ಜು12ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿದ್ದು, ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವಂತೆ ವಕೀಲರಿಗೆ ಸಲಹೆ ನೀಡಿದರು.5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಮಾತನಾಡಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನಮ್ಮ ಭರವಸೆಗಳನ್ನು ಈಡೇರುವ ವಿಶ್ವಾಸ ಮೂಡಿದೆ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಮುದ್ದೇಬಿಹಾಳ, ನಿಡಗುಂದಿ ಮತ್ತು ತಾಳಿಕೋಟೆ ಭಾಗದ ವಿಶೇಷ(ಫೋಸ್ಕೋ ಮತ್ತು ಅಟ್ರಾಸಿಟಿ) ಪ್ರಕರಣಗಳು ಪಟ್ಟಣದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೇರ್ಪಡೆಗೊಳಿಸುವಂತೆ, ಕೋರ್ಟ್ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಮತ್ತು ಪಟ್ಟಣದ ಹಳೆಯ ನ್ಯಾಯಾಲಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಸಂಘದಿಂದ ನ್ಯಾಯಾಧೀಶ ಹರೀಶ.ಎ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ.ಎನ್, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣನವರ, ಎಂ.ಎ.ಮುದ್ದೇಬಿಹಾಳ, ಎಸ್.ಆರ್.ಸಜ್ಜನ, ಎಂ.ಎಚ್.ಕ್ವಾರಿ, ಎಸ್.ಬಿ.ಬಾಚಿಹಾಳ, ಸಂಗಮೇಶ ಹೂಗಾರ, ಎನ್.ಜಿ.ಕುಲಕರ್ಣಿ, ವಿ.ಜಿ.ಮದರಕಲ್ಲ. ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಎಚ್.ಟಿ.ಪೂಜಾರಿ, ಎಸ್.ಎಂ.ಕಿಣಗಿ, ಚೇತನ ಶಿವಶಿಂಪಿ, ಎಸ್.ಆರ್.ಜೋಗಿ, ಬಿ.ಎ.ಚಿನಿವಾರ, ಎನ್.ಬಿ.ಮುದ್ನಾಳ, ಎಂ.ಎಲ್.ರಿಸಾಲದಾರ, ಎಚ್.ಎಚ್.ಬಡಿಗೇರ ಸೇರಿದಂತೆ ವಕೀಲರು ಹಾಗೂ ಕೋರ್ಟ್ ಸಿಬ್ಬಂದಿ ಇದ್ದರು. ಬುಡ್ಡಾ ನಾಲತವಾಡ, ಎನ್.ಐ.ಕೇಸಾಪೂರ, ಆರ್.ಎನ್.ಢವಳಗಿ, ಆರ್.ಎನ್.ದೊಡಮನಿ, ಯಾಸೀನ ಬಿದರಕುಂದಿ, ಶ್ರೀದೇವಿ ರಾಜೂರ, ಹಸೀನಾ ಅನಂತಪೂರ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ಸಿಬ್ಬಂದಿಗಳಾದ ವೈ.ಎಂ.ತಳವಾರ, ಸುರೇಶ ಬಳಗಾನೂರ, ನಾಗೇಶ ಮದಿಹಳ್ಳಿ, ಇಸಾಕ ಒಂಟಿ ಇತರರು ಇದ್ದರು. ನ್ಯಾಯವಾದಿ ಎನ್.ಆರ್.ಮೊಕಾಶಿ ನ್ಯಾಯಾಧೀಶರನ್ನು ಪರಿಚಯಿಸಿದರು. ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ನಿರ್ವಹಿಸಿದರು.ಕೋಟ್:ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವಲ್ಲಿ ನಮ್ಮ ಸಂಘ ಜಿಲ್ಲೆಗೆ ಸತತ ಮೂರನೇ ಸ್ಥಾನ ಪಡೆದಿದೆ. ಬರುವ ಲೋಕ್ ಅದಾಲತ್‌ನಲ್ಲಿ ಈ ಬಾರಿಯೂ ಪ್ರಥಮ ಸ್ಥಾನ ಪಡೆಯುವ ಭರವಸೆಯನ್ನು ಸಂಘದ ಎಲ್ಲ ಸದಸ್ಯರ ಪರವಾಗಿ ನೀಡುವೆ.-ಶಶಿಕಾಂತ ಮಾಲಗತ್ತಿ. ನ್ಯಾಯವಾದಿಗಳ ಸಂಘದ ಅಧ್ಯಕ್ಷ