ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು ಅಂದಾಜು ಸರಾಸರಿ ಸಕ್ಕರೆ ಇಳುವರಿ ಪ್ರಮಾಣ ಶೇ.11.50 ರಂತೆ ಸಕ್ಕರೆ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕು ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.ತಾಲೂಕನ ಸಿದ್ದಸಮುದ್ರ ಬಳಿವಿರುವ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25ನೇ ಸಾಲಿನ ಬಾಯ್ಲರ್ ಪ್ರದಿಪನ್ ಮತ್ತು ಕಬ್ಬು ಅರೆಯುವ ಹಂಗಾಮ ಪ್ರಾರಂಭೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಬ್ಬು ಕಟಾವು ಗ್ಯಾಂಗ ವ್ಯವಸ್ಥೆ ಮಾಡಲಾಗಿದ್ದು, ಕಾರ್ಖಾನೆಯಿಂದ 100 ಕೆಎಲ್‌ಪಿಡಿ ಇಥೇನಾಲ್ ಘಟಕ ಸ್ಥಾಪನೆ, ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಟಿಸಿಡಿಯಿಂದ 4500 ಟಿಸಿಡಿ ಸಾಮರ್ಥ್ಯಕ್ಕೆ ಮತ್ತು ಕೋ ಜನರೇಶನ್ ಘಟಕದ ಸಾಮರ್ಥ್ಯವನ್ನು 6 ಮೆ.ವ್ಯಾಟ್‌ನಿಂದ 12 ಮೆ.ವ್ಯಾಟ್‌ಗೆ ಸಾಮರ್ಥ್ಯಕ್ಕೆ ವಿಸ್ತರಣೆ ಮತ್ತು ಆಧುನೀಕರಣಗೊಳಿಸಲು ಎಲ್ಲ ಕ್ರಮಕೈಗೊಳ್ಳಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕರು ಸಿಬ್ಬಂದಿ ವರ್ಗ ರೈತರು ಹೆಚ್ಚು ಪ್ರಮಾಣದಲ್ಲಿ ಕಬ್ಬು ಪೂರೈಸಲು ಶ್ರಮಿಸಬೇಕು ಎಂದು ತಿಳಿಸಿದರು.
ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ನಯಾನಗರದ ಸುಖದೇವಾನಂದಮಠದ ಅಭಿನವ ಸಿದ್ದಲಿಂಗಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾರ್ಖಾನೆ ಹುಟ್ಟು ಹಾಕಲು ದಿ.ಆರ್.ಸಿ.ಬಾಳೇಕುಂದರಗಿ ಮತ್ತು ಅವರ ಸಂಗಡಿಗರು ಹಗಲಿರುಳು ದುಡಿದು ಕಾರ್ಖಾನೆ ಹುಟ್ಟು ಹಾಕಿದ್ದು, ಹೆಚ್ಚಿನ ದರಕ್ಕೆ ಆಸೆ ಪಡದೆ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಈ ಭಾಗದ ರೈತರು ಗುಣಮಟ್ಟದ ಕಬ್ಬು ಪೂರೈಕೆ ಮಾಡಿ ಕಾರ್ಖಾನೆ ಪ್ರಗತಿಗೆ ಕೈ ಜೋಡಿಸಬೇಕು ಎಂದರು.ಬೆಳಗಾವಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಕ್ಕರೆ ಕಾರ್ಖಾನೆಯಾಗಿ ಹೊರಹೊಮ್ಮಿದ್ದು ಇಳುವರಿ ಕೂಡಾ ಚೆನ್ನಾಗಿ ಇದೆ. ಎಲ್ಲ ಆಡಳಿತ ಮಂಡಳಿಯ, ಸಿಬ್ಬಂದಿ ವರ್ಗ, ಕಾರ್ಮಿಕರು ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದರು.
ನಿರ್ದೇಶಕ ಮಲ್ಲಪ್ಪ ಅಷ್ಟಗಿ ಮಾತನಾಡಿ, ಕಾರ್ಖಾನೆಯ ಆಧಾರ ಸ್ಥಂಭವಾಗಿದ್ದ ದಿ.ಆರ್.ಸಿ.ಬಾಳೇಕುಂದರಗಿ ಅವರ ಸೇವೆ ಅಪಾರವಾಗಿದ್ದು, ಅವರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಒಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಖಾಸಗಿ ಕಾರ್ಖಾನೆಯ ಪೈಪೋಟಿಯ ಮಧ್ಯೆಯು ಸಹ ಈ ಸಕ್ಕರೆ ಕಾರ್ಖಾನೆ ರೈತರಿಗೆ ಒಳ್ಳೆಯ ಸೇವೆ ನೀಡುತ್ತಿದೆ. ತಮ್ಮೆಲ್ಲರ ಸಹಕಾರ ಸದಾ ಇರಬೇಕು ಎಂದು ಮನವಿ ಮಾಡಿದರು.ವೇದಿಕೆ ಮೇಲೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ, ನಿರ್ದೇಶಕರಾದ ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ, ಅಶೋಕ ಯರಗೋಪ್ಪ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ, ಮುರುಳೀಧರ ಮಲ್ಲೂರ, ಬಸವರಾಜ ಬೋಳಗೌಡರ, ಸಿದ್ದನಗೌಡ ಪಾಟೀಲ, ಶ್ರೀಶೈಲ ಮೂಗಬಸವ ಮುಂತಾದವರು ಇದ್ದರು.
ನಿರ್ದೇಶಕ ರಾಚಪ್ಪ ಮಟ್ಟಿ ದಂಪತಿಯಿಂದ ಪೂಜೆ ಜರುಗಿತು. ತುರಮರಿ ವಿದ್ವಾನ ಮಹಾಂತೇಶ ಶಾಸ್ತ್ರಿ ನೇತೃತ್ವದಲ್ಲಿ ಹೋಮ ಹವನ ನೆರವೇರಿಸಿದರು.ಬಾಬು ಖಂಡೋಜಿ ಪ್ರಾರ್ಥಿಸಿದರು. ಕಾರ್ಯದರ್ಶಿ ಅಶೋಕ ಬೊಮ್ಮನ್ನವರ ಸ್ವಾಗತಿಸಿದರು, ವಂದಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರನ್ನು ಸನ್ಮಾನಿಸಲಾಯಿತು. ನೂರಾರು ರೈತರು, ಕಾರ್ಖಾನೆ ಸಿಬ್ಬಂದಿ, ಕಾರ್ಮಿಕರು ಇದ್ದರು. ಇದಕ್ಕೂ ಮೊದಲು ಕಾರ್ಖಾನೆ ಸಂಸ್ಥಾಪಕರಾದ ದಿ.ರಮೇಶ ಬಾಳೇಕುಂದರಗಿ ಅವರ ಪುತ್ಥಳಿಗೆ ಗೌರವ ಸಲ್ಲಿಸಲಾಯಿತು.
ಕೋಟ್...ಕಬ್ಬು ಬೆಳೆಗಾರರ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಬ್ಬು ಕಟಾವು ಗ್ಯಾಂಗ ವ್ಯವಸ್ಥೆ ಮಾಡಲಾಗಿದ್ದು, ಕಾರ್ಖಾನೆಯಿಂದ 100 ಕೆಎಲ್‌ಪಿಡಿ ಇಥೇನಾಲ್ ಘಟಕ ಸ್ಥಾಪನೆ, ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಟಿಸಿಡಿಯಿಂದ 4500 ಟಿಸಿಡಿ ಸಾಮರ್ಥ್ಯಕ್ಕೆ ಮತ್ತು ಕೋ ಜನರೇಶನ್ ಘಟಕದ ಸಾಮರ್ಥ್ಯವನ್ನು 6 ಮೆ.ವ್ಯಾಟ್‌ನಿಂದ 12 ಮೆ.ವ್ಯಾಟ್‌ಗೆ ಸಾಮರ್ಥ್ಯಕ್ಕೆ ವಿಸ್ತರಣೆ ಮತ್ತು ಆಧುನೀಕರಣಗೊಳಿಸಲು ಎಲ್ಲ ಕ್ರಮಕೈಗೊಳ್ಳಲಾಗಿದೆ.
-ಬಸವರಾಜ ಬಾಳೇಕುಂದರಗಿ, ಕಾರ್ಖಾನೆ ಅಧ್ಯಕ್ಷರು.24ಬಿಎಲ್‌ಎಚ್1ಎ
ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ ಪ್ರದಿಪನಾ ಪೂಜಾ ಜರುಗಿತು.24ಬಿಎಲ್‌ಎಚ್1ಬಿ
ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.