ಶಂಕರ ಭಗವತ್ಪಾದಾಚಾರ್ಯರ ಉಪದೇಶಗಳು ಮಾದರಿ: ಡಾ. ವಾಚಸ್ಪತಿಶಾಸ್ತ್ರಿ

KannadaprabhaNewsNetwork |  
Published : May 16, 2025, 01:58 AM IST
13ಎಚ್‌ಯುಬಿ21ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಡಿ.ಕೆ. ಜೋಶಿ ನಿವಾಸದಲ್ಲಿ ನಡೆದ ಶಂಕರಾಚಾರ್ಯರ ಉಪದೇಶಗಳು ಕುರಿತು ವಿದ್ವಾನ್ ಡಾ. ವಾಚಸ್ಪತಿಶಾಸ್ತ್ರಿಗಳು ಮಾತನಾಡಿದರು. | Kannada Prabha

ಸಾರಾಂಶ

ನಾರಾಯಣ ಪಾರಾಯಣ ಬಳಗದಿಂದ ನಡೆಯುತ್ತಿರುವ ಜ್ಞಾನಸತ್ರ ಕಾರ್ಯಕ್ರಮಗಳು ಅನೇಕರಿಗೆ ಆದರ್ಶವಾಗಿದ್ದು ಇನ್ನೂ ನಿರಂತರವಾಗಿ ನಿರ್ವಿಘ್ನವಾಗಿ ಮುಂದುವರಿಯಲಿ.

ಹುಬ್ಬ‍ಳ್ಳಿ: ಶಂಕರ ಭಗವತ್ಪಾದಾಚಾರ್ಯರ ಉಪದೇಶಗಳು ಮನುಷ್ಯ ಕುಲಕ್ಕೆ ವಿಶಿಷ್ಟವಾದ ವರಗಳಾಗಿವೆ. ನಾವೆಲ್ಲರೂ ಆ ಉಪದೇಶಗಳನ್ನು ಶ್ರವಣ ಮನನ ಮಾಡಿಕೊಂಡು ಜೀವನ ಸಾರ್ಥಕಗೊಳಿಸಬೇಕು ಎಂದು ವಿದ್ವಾನ್ ಡಾ. ವಾಚಸ್ಪತಿಶಾಸ್ತ್ರಿಗಳು ಕರೆ ನೀಡಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಡಿ.ಕೆ. ಜೋಶಿ ನಿವಾಸದಲ್ಲಿ ನಡೆದ ಶಂಕರಾಚಾರ್ಯರ ಉಪದೇಶಗಳು ಕುರಿತು ಅವರು ಮಾತನಾಡಿದರು.

ನಾರಾಯಣ ಪಾರಾಯಣ ಬಳಗದಿಂದ ನಡೆಯುತ್ತಿರುವ ಜ್ಞಾನಸತ್ರ ಕಾರ್ಯಕ್ರಮಗಳು ಅನೇಕರಿಗೆ ಆದರ್ಶವಾಗಿದ್ದು ಇನ್ನೂ ನಿರಂತರವಾಗಿ ನಿರ್ವಿಘ್ನವಾಗಿ ಮುಂದುವರಿಯಲಿ ಎಂದು ಶುಭ ಕೋರಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಣ ಚಿದಂಬರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಾರಾಯಣ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಪಾರಾಯಣದಿಗಳು ಜರುಗಿದವು.

ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ವೆಂಕಟೇಶ ಕುಲಕರ್ಣಿ, ವಾದಿರಾಜಾಚಾರ್ಯ, ಉದಯ ದೇಶಪಾಂಡೆ, ಹನುಮಂತ ಪುರಾಣಿಕ, ಡಾ. ಶ್ರೀನಾಥ, ಪ್ರಕಾಶ ದೇಸಾಯಿ, ಸಂಜೀವ ಗೋಳಸಂಗಿ, ಧೀರೇಂದ್ರ ತಂಗೋಡ, ಪಾಂಡುರಂಗ ಕುಲಕರ್ಣಿ, ಎಸ್.ಎಂ. ಜೋಶಿ, ಹನುಮಂತ ಬಿಜಾಪುರ, ರಮೇಶ ಅಣ್ಣಿಗೇರಿ, ಅಶೋಕ ಕುಲಕರ್ಣಿ, ಸಂಜೀವ ಜೋಶಿ, ವಿಲಾಸ ಸಬನೀಸ ಮುಂತಾದ ಕುಟುಂಬದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು