ಗ್ರಾಹಕರ ಸೋಗಲ್ಲಿ ಬಂದು ಚಿನ್ನಾಭರಣ ಕದ್ದ ಕಳ್ಳಿಯರು!

KannadaprabhaNewsNetwork |  
Published : Jun 03, 2024, 12:30 AM IST
ಪೊಟೊ: 02ಎಸ್‌ಎಂಜಿಕೆಪಿ05ಶಿವಮೊಗ್ಗದ ಗಾಂಧಿಬಜಾರ್‌ನ ಬಳಿಯ ತಿರುಪಳಯ್ಯನ ಕೇರಿಯ ಸಂಪತ್ ಜ್ಯುವೆಲರ್ಸ್‌ನಲ್ಲಿ ಯುವತಿಯರು ಚಿನ್ನಾಭರಣ ಕಳುವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು. | Kannada Prabha

ಸಾರಾಂಶ

ಸಂಪತ್ ಜ್ಯುವೆಲರ್ಸ್‌ಗೆ ಗ್ರಾಹಕರಂತೆ ಬಂದಿದ್ದ ಈ ಮೂವರು ಯುವತಿಯರು ಹಾಗೂ ಓರ್ವ ಪುರುಷ ಉಂಗುರ, ವಗೈರೆಗಳನ್ನು ಖರೀದಿಸುವ ನೆಪದಲ್ಲಿ ಒಡವೆ ದೋಚಿದ್ದಾರೆ. ಉಡುಗೊರೆ ನೀಡಲು ಚಿನ್ನದ ಉಂಗುರು ಮತ್ತು ಬೆಳ್ಳಿ ದೀಪ ವಿಚಾರಿಸಿಕೊಂಡು ಓರ್ವ ಪುರುಷ, ಮೂವರು ಮಹಿಳೆಯರು ಬಂದಿದ್ದರು. ಕಡಿಮೆ ದರದ ಉಂಗುರ ತೋರಿಸುವಂತೆ ತಿಳಿಸಿದ್ದರಿಂದ ಅಂಗಡಿ ಓನರ್‌ ಹರ್ಷಬಿ ಸ್ಟೋರ್‌ ರೂಂಗೆ ತೆರಳಿದ್ದರು. ಅಂಗಡಿಯ ಕೆಲಸದ ಹುಡುಗಿ ಬೆಳ್ಳಿ ದೀಪಗಳನ್ನು ತೋರಿಸುತ್ತಿದ್ದರು. ಈ ಸಂದರ್ಭ ಹಿಂದೆ ನಿಂತಿದ್ದ ಮಹಿಳೆ ಡಿಸ್‌ಪ್ಲೇ ಡ್ರಾದಲ್ಲಿದ್ದ ಆಭರಣಗಳ ಪ್ಲಾಸ್ಟಿಕ್‌ ಬಾಕ್ಸ್‌ ತೆಗೆದುಕೊಂಡು ಬ್ಲೌಸ್‌ನೊಳಗೆ ಇಟ್ಟುಕೊಂಡು ಅಲ್ಲಿದ್ದ ಕಾಲ್ಕಿತ್ತಿದ್ದಾರೆ.

* ₹3.51 ಲಕ್ಷ ಮೌಲ್ಯದ 67 ಗ್ರಾಂ ಚಿನ್ನಾಭರಣ ದೋಚಿದ ಮಹಿಳೆಯರು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಿನ್ನಾಭರಣ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದ ನಾಲ್ವರು ಮಾಲೀಕರನ್ನು ಯಾಮಾರಿಸಿ ಬರೋಬ್ಬರಿ 3.51 ಲಕ್ಷ ರು. ಮೌಲ್ಯದ 67 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಶಿವಮೊಗ್ಗ ಗಾಂಧಿ ಬಜಾರ್‌ನಲ್ಲಿ ನಡೆದಿದೆ.

ನಗರದ ಗಾಂಧಿಬಜಾರ್ ಬಳಿಯ ತಿರುಪಳಯ್ಯನ ಕೇರಿಯ ಸಂಪತ್ ಜ್ಯುವೆಲರ್ಸ್‌ಗೆ ಗ್ರಾಹಕರಂತೆ ಬಂದಿದ್ದ ಈ ಮೂವರು ಯುವತಿಯರು ಹಾಗೂ ಓರ್ವ ಪುರುಷ ಉಂಗುರ, ವಗೈರೆಗಳನ್ನು ಖರೀದಿಸುವ ನೆಪದಲ್ಲಿ ಒಡವೆ ದೋಚಿದ್ದಾರೆ.

ಉಡುಗೊರೆ ನೀಡಲು ಚಿನ್ನದ ಉಂಗುರು ಮತ್ತು ಬೆಳ್ಳಿ ದೀಪ ವಿಚಾರಿಸಿಕೊಂಡು ಓರ್ವ ಪುರುಷ, ಮೂವರು ಮಹಿಳೆಯರು ಬಂದಿದ್ದರು. ಕಡಿಮೆ ದರದ ಉಂಗುರ ತೋರಿಸುವಂತೆ ತಿಳಿಸಿದ್ದರಿಂದ ಅಂಗಡಿ ಓನರ್‌ ಹರ್ಷಬಿ ಸ್ಟೋರ್‌ ರೂಂಗೆ ತೆರಳಿದ್ದರು. ಅಂಗಡಿಯ ಕೆಲಸದ ಹುಡುಗಿ ಬೆಳ್ಳಿ ದೀಪಗಳನ್ನು ತೋರಿಸುತ್ತಿದ್ದರು. ಈ ಸಂದರ್ಭ ಹಿಂದೆ ನಿಂತಿದ್ದ ಮಹಿಳೆ ಡಿಸ್‌ಪ್ಲೇ ಡ್ರಾದಲ್ಲಿದ್ದ ಆಭರಣಗಳ ಪ್ಲಾಸ್ಟಿಕ್‌ ಬಾಕ್ಸ್‌ ತೆಗೆದುಕೊಂಡು ಬ್ಲೌಸ್‌ನೊಳಗೆ ಇಟ್ಟುಕೊಂಡು ಅಲ್ಲಿದ್ದ ಕಾಲ್ಕಿತ್ತಿದ್ದಾರೆ.

ಬಂಗಾರದ ಉಂಗುರ, ಬೆಳ್ಳಿ ದೀಪಗಳ ಬಗ್ಗೆ ವಿಚಾರಿಸಿದ ನಾಲ್ವರು ಕೊನೆಗೆ ಏನನ್ನೂ ಖರೀದಿಸದೆ ಗಡಿಬಿಡಿಯಲ್ಲಿ ಹೊರ ನಡೆದಿದ್ದರು. ಅನುಮಾನಗೊಂಡ ಆಭರಣ ಮಳಿಗೆಯ ಓನರ್‌ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದರು. ಆಗ ಕಳ್ಳತನ ಗೊತ್ತಾಗಿದೆ. ಕೂಡಲೇ ವೀಡಿಯೋ ಸಹಿತ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಅಂಗಡಿಯ ಮಾಲೀಕ ಬಿ.ಹರ್ಷ ದೂರು ದಾಖಲಿಸಿದ್ದಾರೆ.

ಏನೇಲ್ಲ ಕದ್ದರು?

ಪ್ಲಾಸ್ಟಿಕ್ ಒಡವೆಗಳ ಬಾಕ್ಸ್‌ನಲ್ಲಿ 84 ಸಾವಿರ ರು. ಅಂದಾಜು ಬೆಲೆಯ 16 ಗ್ರಾಂ ತೂಕದ ಮಾಂಟಿಕಾ, 73 ಸಾವಿರ ರು. 14 ಗ್ರಾಂ ತೂಕದ 10 ಲಕ್ಷ್ಮಿ ಕಾಸುಗಳು, 1.10 ಲಕ್ಷ ರು. ಮೌಲ್ಯದ 9 ಚಿನ್ನದ ತಾಳಿಗಳು, 63 ಸಾವಿರ ರು. ಬೆಲೆಯ 7 ಜೊತೆ ಬುಗಡಿ, 21 ಸಾವಿರ ಬೆಲೆಯ ಮೂಗುಬೊಟ್ಟುಗಳು ಸೇರಿದಂತೆ ಒಟ್ಟಾರೆ 3.51 ರು. ಮೌಲ್ಯದ ಚಿನ್ನದ ಒಡವೆಗಳನ್ನು ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ