ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೂ ತಟ್ಟಿದ ಪರಿಸರ ಸೂಕ್ಷ್ಮ ವಲಯ ಭೀತಿ.

KannadaprabhaNewsNetwork |  
Published : Sep 06, 2026, 02:15 AM IST
ೇೋ | Kannada Prabha

ಸಾರಾಂಶ

ಶೃಂಗೇರಿಕೇಂದ್ರದ ಸರ್ಕಾರದ ಪರಿಸರ ಸಚಿವಾಲಯ ಹೊರಡಿಸಿದ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆಗೆ ಈಗಾಗಲೇ ಒಂದು ತಿಂಗಳು ಕಳೆದು 60 ದಿನಗಳ ಗಡುವು ಸಮೀಪಿಸುತ್ತಿದೆ. ಆದರೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಹೆಸರಾದ ಮರ್ಕಲ್ ಪಂಚಾಯಿತಿಯ ಬಹುತೇಕ ಗ್ರಾಮಗಳು ಈ ವ್ಯಾಪ್ತಿಗೆ ಸೇರಿರುವುದರಿಂದ ಯಾವ ಪರಿಣಾಮ ಬೀರುವುದೋ ಎಂಬ ಭೀತಿಯಲ್ಲೆ ದಿನಕಳೆಯುವಂತಾಗಿದೆ

ಸಹ್ಯಾದ್ರಿ ಪರ್ವತಗಳ ಶ್ರೇಣಿ ತಪ್ಪಲು । ಜನವಸತಿ ಪ್ರದೇಶಗಳಲ್ಲಿ ಮಡುಗಟ್ಟುತ್ತಿರುವ ಆತಂಕದ ಛಾಯೆ

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ ಶೃಂಗೇರಿ

ಕೇಂದ್ರದ ಸರ್ಕಾರದ ಪರಿಸರ ಸಚಿವಾಲಯ ಹೊರಡಿಸಿದ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆಗೆ ಈಗಾಗಲೇ ಒಂದು ತಿಂಗಳು ಕಳೆದು 60 ದಿನಗಳ ಗಡುವು ಸಮೀಪಿಸುತ್ತಿದೆ. ಆದರೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಹೆಸರಾದ ಮರ್ಕಲ್ ಪಂಚಾಯಿತಿಯ ಬಹುತೇಕ ಗ್ರಾಮಗಳು ಈ ವ್ಯಾಪ್ತಿಗೆ ಸೇರಿರುವುದರಿಂದ ಯಾವ ಪರಿಣಾಮ ಬೀರುವುದೋ ಎಂಬ ಭೀತಿಯಲ್ಲೆ ದಿನಕಳೆಯುವಂತಾಗಿದೆ

ತಾಲೂಕಿನ 9 ಪಂಚಾಯಿತಿಗಳಲ್ಲಿ ಪ್ರಮುಖ ವಾದ ಮರ್ಕಲ್ ಪಂಚಾಯಿತಿ ಬಹುತೇಕ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒ‍ಳಪಡುತ್ತದೆ. ಕೃಷಿ, ಬೇಸಾಯವೇ ಜನರ ಜೀವನಾಧಾರ. ಅಡಕೆಗೆ ಹಳದಿ ಎಲೆ, ಎಲೆ ಚುಕ್ಕಿ ಕೊಳೆ ರೋಗ ಬಾಧಿಸುತ್ತಿರುವುದು ಒಂದು ಕಡೆಯಾದರೆ ಕಾಳು ಮೆಣಸು, ಕಾಫಿಗೂ ಕೊಳೆ ರೋಗ ವ್ಯಾಪಿಸಿ ರೈತರು, ಜನರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದಾರೆ. ಈಗ ಅಧಿಸೂಚನೆಯಿಂದ ಕಂಗೆಟ್ಟಿದ್ದಾರೆ.

ಋಷ್ಯ ಶೃಂಗಪುರ (ಕಿಗ್ಗಾ),ಯಡದಾಳು, ಯಡದಳ್ಳಿ ಹಾಗೂ ಪ್ರಮುಖ ಗ್ರಾಮಗಳು ಈ ವ್ಯಾಪ್ತಿಗೆ ಸೇರಿವೆ. ಈ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ, ಹುಲಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು ಇನ್ನುಳಿ ದಂತೆ ಬಹುತೇಕ ಗ್ರಾಮ ಅರಣ್ಯ ಇಲಾಖೆ ಸೆಕ್ಷನ್ 4(1),ಸೆಕ್ಷನ್ 17 ಮೀಸಲು ಅರಣ್ಯಕ್ಕೆ ಒಳಪಟ್ಟು ರಸ್ತೆ, ವಿದ್ಯುತ್, ಸೇತುವೆ ಯಂತಹ ಮೂಲಭೂತ ಸೌಕರ್ಯ ಗಳಿಂದ ದೂರವೇ ಉಳಿದಿದೆ.

ನಕ್ಸಲ್ ಸಮಸ್ಯೆಯಿಂದ ಈ ಪಂಚಾಯಿತಿ ಬಹುತೇಕ ಗ್ರಾಮಗಳು ಶಾಪಗ್ರಸ್ಥ ವಾಗಿತ್ತು. ಇದೀಗ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯಿಂದ ಆಗಬಹುದಾದ ಪರಿಣಾಮ ಈ ಭಾಗದವರ ನಿದ್ದೆಗೆಡಿಸಿದೆ.

ಶೃಂಗೇರಿಯಿಂದ 9 ಕಿ,ಮಿ. ದೂರದ ಋಷ್ಯಶೃಂಗಪುರ (ಕಿಗ್ಗಾ) ಗ್ರಾಮದಲ್ಲಿ ಮಲೆನಾಡಿನ ಖ್ಯಾತ ಮಳೆ ದೇವರು ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ ನೆಲೆಸಿ ಇತಿಹಾಸ ಪ್ರಸಿದ್ಧವಾಗಿದ್ದಿ ವಿವಿಧೆಡೆಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿಂದ 3 ಕಿ.ಮಿ ದೂರದ ರಾಜ್ಯದಲ್ಲೆ ಹೆಸರಾದ ಸಿರಿಮನೆ ಜಲಪಾತ ದಂತಹ ಪ್ರೇಕ್ಷಣೀಯ ಸ್ಥಳದ ಭೇಟಿ, ವೀಕ್ಷಣೆಗೆ ಯಾವ ತೊಂದರೆ ಎದುರಾಗುವ ಆತಂಕ ಮೂಡಿಸಿದೆ. ಯಡದಾಳು ಗ್ರಾಮ ಪರಿಶಿಷ್ಟ ಪಂಗಡ, ಜಾತಿ ಕಾಲೋನಿಗಳು ಜನವಸತಿ ಗ್ರಾಮ.

ಈ ಯಡದಳ್ಳಿಯ ಜನರು ಕೃಷಿ, ಬೇಸಾಯ, ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ 7 ನೇ ಅಧಿಸೂಚನೆ ಇಲ್ಲಿನ ಮೂಲ ನಿವಾಸಿಗಳಲ್ಲಿ ಅಭಿವೃದ್ಧಿ ನಿರೀಕ್ಷೆ ಇರಲಿ ಜನಜೀವನ, ಧಾರ್ಮಿಕ, ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಗೊಂದಲ ಆವರಿಸಿದೆ.

ರಾಜಕೀಯ ಪಕ್ಷಗಳು, ರೈತಪರ ಸಂಘಟನೆಗಳು ಜನವಸತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ವಾಗಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸುವೆಯಾದರೂ ಪರಿಸರ, ಅರಣ್ಯ ಸಂರಕ್ಷಣೆ ನೀತಿಗಳನ್ನು ವಿರೋಧಿ ಸಿಲ್ಲ. ಪರಿಸರ,ಅರಣ್ಯಗಳ ಸಂರಕ್ಷಣೆ ಹೆಸರಲ್ಲಿ ಜನರ ಬದುಕಿಗೆ ಅಡ್ಡಿಯಾಗುವ ಯೋಜನೆಗಳಿಗೆ ವಿರೋಧಿ ನಿಲುವು ವ್ಯಕ್ತಪಡಿಸಿದ್ದಾರೆ. ಇದನ್ನು ಅರಿತು ಜನ ಜೀವನಕ್ಕೆ ಮಾರಕವಾಗುವ ಯೊಜನೆಯ ಮರು ಪರಿಶೀಲನೆ ಪ್ರಸ್ತುತ ಅತ್ಯಗತ್ಯ.

26 ಶ್ರೀ ಚಿತ್ರ 2-ಶೃಂಗೇರಿ ಮರ್ಕಲ್ ಪಂಚಾಯಿತಿ ಋಷ್ಯಶೃಂಗಪುರ (ಕಿಗ್ಗಾ)

26 ಶ್ರೀ ಚಿತ್ರ 2-ಶೃಂಗೇರಿ ಮರ್ಕಲ್ ಪಂಚಾಯಿತಿ ಯಡದಾಳುಗ್ರಾಮದ ತೋರಣಗೆದ್ದೆ ಪರಿಶಿಷ್ಟ ಕಾಲೋನಿಯ ನೋಟ,

26 ಶ್ರೀ ಚಿತ್ರ 3-ಕಿಗ್ಗಾದಲ್ಲಿರುವ ಪ್ರಸಿದ್ದ ಮಳೆ ದೇವರು ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಕೆಲಸಗಳಿಗೆ ಅಲೆದಾಟ ತಪ್ಪಲಿದೆ
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಗಣನೀಯ ಪ್ರಗತಿ