ನೇಕಾರರ ಕುಲಕಸಬು ಕಡಿಮೆಯಾಗುತ್ತಿದೆ: ರವೀಂದ್ರ ಕಲ್ಬುರ್ಗಿ

KannadaprabhaNewsNetwork |  
Published : Dec 26, 2025, 02:15 AM IST
ಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್4ರಾಣಿಬೆನ್ನೂರು ನಗರದ ಕಾಕಿ ಜನಸೇವಾ ಸಂಸ್ಥೆ ಗಣೇಶೋತ್ಸವ ಅರಮನೆಯಲ್ಲಿ ಜಿಲ್ಲಾ ದೇವಾಂಗ ಸಮಾಜದ ವತಿಯಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪ್ರಸ್ತುತ ನೇಕಾರರ ಕುಲ ಕಸುಬು ನೇಕಾರಿಕೆ ಕಡಿಮೆಯಾಗುತ್ತಿದ್ದು, ಕೆಲವು ಉರುಗಳಲ್ಲಿ ಸಂಪೂರ್ಣ ನಿಂತಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ರಾಣಿಬೆನ್ನೂರು: ಪ್ರಸ್ತುತ ನೇಕಾರರ ಕುಲ ಕಸುಬು ನೇಕಾರಿಕೆ ಕಡಿಮೆಯಾಗುತ್ತಿದ್ದು, ಕೆಲವು ಉರುಗಳಲ್ಲಿ ಸಂಪೂರ್ಣ ನಿಂತಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು. ನಗರದ ಕಾಕಿ ಜನಸೇವಾ ಸಂಸ್ಥೆ ಗಣೇಶೋತ್ಸವ ಅರಮನೆಯಲ್ಲಿ ಗುರುವಾರ ಜಿಲ್ಲಾ ದೇವಾಂಗ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಯೋವೃದ್ಧರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೇಕಾರರು ಬದುಕು ನಡೆಸಲು ಪರ್ಯಾಯ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವದು ಅನಿವಾರ್ಯವಾಗಿದೆ. ಕೈಮಗ್ಗ, ಪವರ್ ಲೂಮ್ ಮುಂತಾದ ಎಲ್ಲ ಉದ್ಯೋಗಗಳು ಸ್ಪರ್ಧಾತ್ಮಕ ಹಂತ ತಲುಪಿದ್ದು ನಮ್ಮ ಸಮಾಜ ಬಾಂಧವರು ಶಿಕ್ಷಣದ ಜೊತೆಗೆ ಇನ್ನಿತರ ಉದ್ಯೋಗಗಳ ಕೌಶಲ್ಯದ ಪರಿಣತಿ ಪಡೆದು ಆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇವಾಂಗ ಸಮಾಜ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ನನ್ಮ ಜೊತೆಗಿದೆ. ನಾನು ಸಹ ದೇವಾಂಗ ಸಮಾಜದ ಜನರಲ್ಲಿ ಒಬ್ಬನಾಗಿ ಅವರೊಂದಿಗಿದ್ದೇನೆ. ಅವರಿಗೆ ಎಲ್ಲ ಸಮಯದಲ್ಲೂ ನಾನು ಸ್ಪಂದಿಸುತ್ತೇನೆ ಎಂದರು. ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಮೈಲಾರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಡಾ. ಚಂದ್ರಶೇಖರ ಕೇಲಗಾರ, ರಾಜ್ಯ ಕಾರ್ಯದರ್ಶಿ ರಾಜೇಶ, ರಾಜ್ಯ ಕಮಿಟಿ ಸದಸ್ಯರುಗಳಾದ ನಾರಾಯಣಪ್ಪ ಮಂಡಕ್ಕಿ, ವಸಂತ ಕುಂಚೂರ, ಈರನಗೌಡ ಗುಡಿಸಾಗರ, ಲಕ್ಷ್ಮಿಕಾಂತ ಹುಲಗೂರ, ಬಸವರಾಜ ಬೆಂಡಿಗೇರಿ, ಗಣೇಶ ಹಾವನೂರ, ಚಿದಂಬರ ಕುದರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡ ವಿಜಯ ಭಂಡಾರಿ
ಗದಗ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್, ಸಹಬಾಳ್ವೆ ಮೆರಗು!