ಬದುಕಿಗೆ ಬೆಳಕು ತೋರುವವರೇ ನಿಜವಾದ ಗುರು: ಎಂ.ಸಿ. ಕೊಳ್ಳಿ

KannadaprabhaNewsNetwork |  
Published : May 10, 2025, 01:10 AM IST
5ಎಚ್‌ವಿಆರ್4 | Kannada Prabha

ಸಾರಾಂಶ

ಮನುಷ್ಯ ಜೀವನ ಎಂಬುದು ಪುಸ್ತಕ ಇದ್ದ ಹಾಗೆ. ಹುಟ್ಟು ಎಂಬ ಮೊದಲ ಪುಟ, ಸಾವು ಎಂಬ ಕೊನೆಯ ಪುಟವನ್ನು ಭಗವಂತ ಈಗಾಗಲೇ ಬರೆದು ಕಳಿಸಿದ್ದಾನೆ. ಮಧ್ಯದಲ್ಲಿರುವ ಖಾಲಿ ಪುಟಗಳನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಬರೆದಿಡುವಂತೆ, ಓದುವಂತೆ, ಮಾರ್ಗದರ್ಶಿಯಾಗುವಂತೆ ಮಾಡುವ ನೇತಾರ ಗುರುವಾಗಿದ್ದಾನೆ. ಗುರುವಿನ ಮಹತ್ವ ಅತ್ಯಂತ ಪ್ರಮುಖವಾದುದು.

ಹಾವೇರಿ: ಭಾರತದ ಸತ್ಪ್ರಜೆಗಳಾಗಿ ಭವ್ಯತೆಯತ್ತ ನಡೆಯುವ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಬದುಕಿಗೆ ಸೂಕ್ತ ಮಾರ್ಗದರ್ಶನ ತೋರಿ ಮುನ್ನಡೆಸುವವನೇ ನಿಜವಾದ ಗುರುವಾಗಿದ್ದಾನೆ ಎಂದು ಕೆಎಲ್‌ಇ ಪ್ರತಿನಿಧಿ ನಿರ್ವಹಣಾ ಮಂಡಳಿಯ ಎಂ.ಸಿ. ಕೊಳ್ಳಿ ತಿಳಿಸಿದರು.

ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ 1998- 2000ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಜೀವನ ಎಂಬುದು ಪುಸ್ತಕ ಇದ್ದ ಹಾಗೆ. ಹುಟ್ಟು ಎಂಬ ಮೊದಲ ಪುಟ, ಸಾವು ಎಂಬ ಕೊನೆಯ ಪುಟವನ್ನು ಭಗವಂತ ಈಗಾಗಲೇ ಬರೆದು ಕಳಿಸಿದ್ದಾನೆ. ಮಧ್ಯದಲ್ಲಿರುವ ಖಾಲಿ ಪುಟಗಳನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಬರೆದಿಡುವಂತೆ, ಓದುವಂತೆ, ಮಾರ್ಗದರ್ಶಿಯಾಗುವಂತೆ ಮಾಡುವ ನೇತಾರ ಗುರುವಾಗಿದ್ದಾನೆ. ಗುರುವಿನ ಮಹತ್ವ ಅತ್ಯಂತ ಪ್ರಮುಖವಾದುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಜೆ.ಆರ್. ಶಿಂಧೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಚಾರ್ಯ ಪ್ರೊ. ಎಂ.ಎ. ಹೊಳ್ಳಿಯವರ, ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಪ್ರೊ. ಪ್ರದೀಪ, ಪಾಠ- ಪ್ರಬೋಧೆ ಮಾಡಿದ ಪ್ರೊ. ವಿ.ಸಿ. ಕೊರಗಲ್ಲ, ಪ್ರೊ. ಜಿ. ಮಂಜುನಾಥ, ಪ್ರೊ. ಬಿ.ಬಿ. ಮುರನಾಳ, ಪ್ರೊ. ಜಿ.ವಿ. ವಳಸಂಗ, ಪ್ರೊ. ಬಿ.ಸಿ. ಗೌಡರ, ಪ್ರೊ. ಎಸ್.ಎನ್. ತಿಪ್ಪನಗೌಡರ, ಪ್ರೊ. ಬಿ.ಸಿ. ಬಜ್ಜಿ, ಪ್ರೊ. ಕೆ.ಎಸ್. ಅಶೋಕ, ಪ್ರೊ. ಯು.ಆರ್. ರಜಪೂತ, ಪ್ರೊ. ಯು.ಜಿ. ಪಟಗಾರ, ಡಾ. ಎನ್.ಆರ್. ಬಿರಸಾಲ, ಪ್ರೊ. ಗೀತಾ ಮಂಕಣಿ, ಯಲ್ಲಪ್ಪ ಕಡಕೋಳ, ಈ.ಆರ್. ರಾಗೂರ, ಮಂಜುನಾಥ ಸವಣೂರ ಹಳೆಯ ವಿದ್ಯಾರ್ಥಿಗಳಿಂದ ವಿಶೇಷ ಗೌರವ ಗುರುವಂದನಾ ಸನ್ಮಾನ ಜರುಗಿತು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲದೇ ಯೋಧರನ್ನು ಗೌರವಿಸಲಾಯಿತು.ಇಂದು ವಿದ್ಯುತ್ ವ್ಯತ್ಯಯ

ಹಾವೇರಿ: ಹಾವೇರಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 10ರಂದು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 110 ಕೆವಿ ಹಾವೇರಿ, 33 ಕೆವಿ ಕೆರಿಮತ್ತಿಹಳ್ಳಿ ಹಾಗೂ ಗಾಂಧೀಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಆದ್ದರಿಂದ ಈ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಗೆ ಬರುವ ಸಂಪೂರ್ಣ ಹಾವೇರಿ ನಗರ, ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ, ದೇವಗಿರಿ, ಡಿಸಿ ಆಫೀಸ್, ದೇವಗಿರಿಯಲ್ಲಾಪುರ, ನಾಗನೂರ, ಕೋಳೂರು, ಗಣಜೂರ, ಕರ್ಜಗಿ, ಯತ್ತಿನಹಳ್ಳಿ, ದೇವಿಹೊಸೂರ, ದಿಡಗೂರ, ಹಿರೇಲಿಂಗದಹಳ್ಳಿ, ಹೊಂಬರಡಿ, ಹೊಸಳ್ಳಿ, ಕಬ್ಬೂರ, ಕಲ್ಲಾಪುರ, ಕನಕಾಪುರ, ಕೇರಿಮತ್ತಿಹಳ್ಳಿ, ಸಂಗೂರ, ತೋಟದಯಲ್ಲಾಪುರ, ವೀರಾಪುರ, ವೆಂಕಟಾಪುರ, ಗೌರಾಪುರ, ಎಸ್ಪಿ ಆಫೀಸ್, ಕುರುಬಗೊಂಡ, ಬಿದರಗಡ್ಡಿ, ಕೋಡಿಹಳ್ಳಿ, ತಿಮ್ಮಾಪುರ, ಕುಳೇನೂರು, ಹೊಸೂರು ಹಾಗೂ ಈ ಫೀಡರ್‌ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!