ಹಲಗೂರು:
ಫೆ.8 ಸಂಜೆ 6 ಗಂಟೆಗೆ ಪುಣ್ಯಹ, ಗಣಪತಿ ಪೂಜೆ, ಹೋಮ ನಾಂದಿ, ಅಂಕುರಾರ್ಪಣ, ರಕ್ಷಾ ಸೂತ್ರಧಾರಣ, ರಾಘೋಪ್ನ, ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಮಹಾ ಮಂಗಳಾರತಿ, ರಾತ್ರಿ 7 ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಫೆ.9ರಂದು ಗ್ರಾಮದ ಮೊಗೆವ ಕಟ್ಟೆಯಿಂದ ದೇವರಿಗೆ ಹೂ ಹೊಂಬಾಳೆ ಮಾಡಿ ಗಂಗೆ ತರಲಾಯಿತು. ನಂತರ ಶ್ರೀ ಬಸವೇಶ್ವರ ದೇವಾಲಯಕ್ಕೆ ನೂತನ ಗೋಪುರ ಕಳಸ ಪೂಜಾ ಕಾರ್ಯಕ್ರಮ ನಡೆಯಿತು. ನವಗ್ರಹ ಹೋಮ ಮಹಾ ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ನಡೆದವು.ವೀರಗಾಸೆ ಕುಣಿತ ಮತ್ತು ಜಾನಪದ ಕಲಾವಿದ ಶಿವಾರ ಉಮೇಶ್ ಮತ್ತು ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಭಕ್ತಾದಿಗಳ ಗಮನ ಸೆಳೆಯಿತು. ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬಸಪ್ಪ, ದೊಡ್ಡಚೆನ್ನೀಪುರ ಮಲೆ ಮಹದೇಶ್ವರ ಸ್ವಾಮಿ ಬಸಪ್ಪ, ನಡುಮಾರ್ಗದ ಬಸವೇಶ್ವರ ಸ್ವಾಮಿ ಬಸಪ್ಪ ದೇವರುಗಳ ಮೆರವಣಿಗೆ ನಡೆಯಿತು.
ತುಮಕೂರು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮಿ, ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿಸ್ವಾಮಿ, ಹಂಗ್ರಾಪುರ ಮಠದ ಬಸವಲಿಂಗ ದೇಶಿಕೇಂದ್ರ ಸ್ವಾಮಿ, ದಬ್ಬಹಳ್ಳಿ ಗುರುಮಠದ ಚನ್ನವೀರಣ್ಣಾರಾಧ್ಯ ಸ್ವಾಮಿ, ಅಗಸನಪುರ ಗುರುಮಠದ ಚಂದ್ರಶೇಖರ್ ಅರಾಧ್ಯ ಸಾನಿಧ್ಯ ವಹಿಸಿದ್ದರು.ಅಂತರವಳ್ಳಿ, ಹುಲ್ಲಹಳ್ಳಿ, ದಡಮಹಳ್ಳಿ, ಹುಸ್ಕೂರು, ಹುಚ್ಚೇಗೌಡನದೊಡ್ಡಿ, ಚೆನ್ನೀಪುರ, ಅಗಸನಪುರ, ಡಿ.ಹಲಸಹಳ್ಳಿ, ಪುರದದೊಡ್ಡಿ ಸೇರಿದಂತೆ ಹಲ್ಲಾಗಾಲ ಗ್ರಾಮದ ಸುತ್ತಮುತ್ತಲಿನ ಭಕ್ತಾಧಿಗಳು ಭಾಗವಹಿಸಿ ಬಸವೇಶ್ವರ ಸ್ವಾಮಿ ಕೃಪೆಗೆ ಪಾತ್ರರಾದರು.
ನಾಳೆ ವಿದ್ಯುತ್ ವ್ಯತ್ಯಯಮಂಡ್ಯ:
ತಾಲೂಕಿನ 66/11 ಕೆ.ವಿ ವಿ.ಸಿ.ಫಾರಂ, ಕೋಲಕಾರನದೊಡ್ಡಿ ಮತ್ತು ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಫೆ.11 ರಂದು ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರ : ವಿ.ಸಿ.ಫಾರಂ, ಶಿವಳ್ಳಿ, ದುದ್ದ, ಬಿ.ಹಟ್ನ, ಬೇವಕಲ್ಲು, ಹುಲಿಕೆರೆ, ಚಂದಗಾಲು, ಹುಲ್ಲೇನಹಳ್ಳಿ, ಬಿಳಗುಲಿ ಹಾಗೂ ಈ ಸುತ್ತ ಮುತ್ತಲಿನ ಗ್ರಾಮಗಳು. ಕೊಲಕಾರನದೊಡ್ಡಿ ವಿದ್ಯುತ್ ವಿತರಣಾ ಕೇಂದ್ರ: ತಗ್ಗಹಳ್ಳಿ, ಕೋಲಕಾರನದೊಡ್ಡಿ, ಹೆಮ್ಮಿಗೆ, ಸೂನಗನಹಳ್ಳಿ, ಪುರ, ಲೋಕಸರ, ಹಲುವಾಡಿ, ಕಮ್ನಾಯಕನಹಳ್ಳಿ, ಟಿ. ಮಲ್ಲಿಗೆರೆ, ಕಬ್ಬನಹಳ್ಳಿ, ತಿಮ್ಮನಹೊಸೂರು, ಬಿ.ಹೊಸೂರು , ಗೋಪನಹಳ್ಳಿ ಯಡಗನಹಳ್ಳಿ, ಮಾದರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು. ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರ :ತೂಬಿನಕೆರೆ, ತೂಬಿನಕೆರೆ ಇಂಡಸ್ಟಿçಯಲ್ ಏರಿಯಾ, ಉರಮಾರಕಸಲಗೆರೆ, ಯಲಿಯೂರು, ಕಾಳೇನಹಳ್ಳಿ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಸುಂಡಹಳಿ, ಪೀಹಳ್ಳಿ , ಕೊಡಿಯಾಲ, ಆಲಗೂಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.