ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕೃತಿಯ ಸಂಕೇತ

KannadaprabhaNewsNetwork |  
Published : Sep 18, 2026, 01:15 AM IST
9999 | Kannada Prabha

ಸಾರಾಂಶ

ವಿಶ್ವಕರ್ಮ ಜನಾಂಗವು ಕಾಯಕ ಸಂಸ್ಕೃತಿ, ಶ್ರಮ ಸಂಸ್ಕೃತಿ ಹಾಗೂ ಬೆವರಿನ ಸಂಸ್ಕೃಯ ಸಂಕೇತ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುವಿಶ್ವಕರ್ಮ ಜನಾಂಗವು ಕಾಯಕ ಸಂಸ್ಕೃತಿ, ಶ್ರಮ ಸಂಸ್ಕೃತಿ ಹಾಗೂ ಬೆವರಿನ ಸಂಸ್ಕೃಯ ಸಂಕೇತ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು. ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ವಿಶ್ವ ಎಂದರೆ ಜಗತ್ತು, ಕರ್ಮ ಎಂದರೆ ಅದನ್ನು ಮುಂದುವರೆಸಿಕೊಂಡು ಹೋಗುವಂತಹದ್ದು. ಸೃಷ್ಠಿ ಮಾಡಿದಂತಹ ಕರ್ತ. ಕರ್ತ ಎಂದರೆ ಕಮ್ಮಟ ಎಂದು ಹೇಳುತ್ತಾರೆ. ಪಂಚಭೂತಗಳು ಇಲ್ಲದೇ ಇದ್ದಂತಹ ಸಂದರ್ಭದಲ್ಲಿ ಇದ್ದಂತಹವರು ವಿಶ್ವಕರ್ಮರು ಎಂದರು. ವಿಶ್ವಕರ್ಮರು ಇಲ್ಲದೇ ಇದ್ದರೆ ಜಗತ್ತು ಇಷ್ಟೊಂದು ಸುಂದರವಾಗಿರುತ್ತಿರಲಿಲ್ಲ, ಅನೇಕ ಸೌಲಭ್ಯಗಳು ರಚನೆಯಾಗುತ್ತಿರಲಿಲ್ಲ, ವಾಸ್ತುಶಿಲ್ಪ ಸುಧಾರಣೆಯಾಗುತ್ತಿರಲಿಲ್ಲ. ನಮ್ಮ ಬದುಕು ಆಭರಣಗಳ ರೂಪದಲ್ಲಿ ಸೌಂದರ್ಯೀಕರಣವಾಗುತ್ತಿರಲಿಲ್ಲ. ಸ್ವರ್ಗ ಲೋಕವನ್ನೇ ನಿರ್ಮಿಸಿದವರು ವಿಶ್ವಕರ್ಮರು ಎಂದು ಅವರು ಬಣ್ಣಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ವಿಶ್ವಕರ್ಮರು ಪ್ರಪಂಚಕ್ಕೆ ರಾಯಭಾರಿಗಳು. ಪ್ರಪಂಚದಲ್ಲಿ ಕೌಶಲ್ಯವನ್ನು ಕಾಣುವುದಾದರೆ ಅದು ವಿಶ್ವಕರ್ಮ ಜನಾಂಗದಿಂದ ಮಾತ್ರ ಸಾಧ್ಯ. 21ನೇ ಶತಮಾನದಲ್ಲಿ ವಿಶ್ವಕರ್ಮರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಹೊಸ-ಹೊಸ ತಂತ್ರಜ್ಞಾವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರಲ್ಲದೆ, ವಿಶ್ವಕರ್ಮ ಜನಾಂಗದವರು ಒಗ್ಗಟ್ಟನ್ನು ಕಾಪಾಡಿಕೊಂಡು ಸರ್ಕಾರದ ಸೌಲಭ್ಯವನ್ನು ಪಡೆಯಬೇಕು ಎಂದರು. ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣದಾಸ್ ಮಾತನಾಡಿ, ವಿಶ್ವಕರ್ಮ ಸಮಾಜದ ಇತಿಹಾಸ ದೊಡ್ಡದಿದೆ. ಕಲೆಗೆ ಮತ್ತೊಂದು ಹೆಸರೇ ವಿಶ್ವಕರ್ಮರು. ಸಮಾಜದ ಜಕಣಾಚಾರ್ಯರ ವಾಸ್ತುಶಿಲ್ಪ ಕಲೆಗಳು ಇಡೀ ಪ್ರಪಂಚಕ್ಕೆ ಹೆಸರುವಾಸಿಯಾಗಿದೆ. ಇಂತಹ ವಿಶ್ವಕರ್ಮ ಸಮಾಜ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಆಶಿಸಿದರು.ಜಿಲ್ಲಾ ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್ ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿ ಬಹಳಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದಿಂದ ಇಡೀ ಸಮುದಾಯ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು. ಅಧ್ಯಕ್ಷತೆವಹಿಸಿದ್ದ ನಗರ ಶಾಸಕ ಜಿ.ಬಿ. ಜೋತಿಗಣೇಶ್ ಮಾತನಾಡಿ, ವಿಶ್ವಕರ್ಮ ಜನಾಂಗ ನಾವೀನ್ಯತೆಗೆ ಹೆಸರಾದ ಸಮುದಾಯ. ವಿಶ್ವಕರ್ಮ ಜಯಂತ್ಯುತ್ಸವ ಮತ್ತು ಪ್ರಧಾನಿ ಮೋದಿ ಅವರ ಜನ್ಮ ದಿನ ಒಂದೇ ದಿನವಾಗಿರುವುದು ಸಂತೋಷದ ವಿಚಾರ. ವಿಶ್ವಕರ್ಮ ಸಮುದಾಯದವರನ್ನು ಸೇರಿದಂತೆ ವಿವಿಧ ಕೌಶಲ್ಯ ಹೊಂದಿರುವ ಜನರಿಗಾಗಿ ವಿಶ್ವಕರ್ಮ ಯೋಜನೆಯನ್ನು ಪ್ರಧಾನಮಂತ್ರಿಗಳು ಘೋಷಣೆ ಮಾಡಿದ್ದು, ಅರ್ಥಿಕ, ಸಾಮಾಜಿಕವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು.ಸಾನಿಧ್ಯ ವಹಿಸಿದ್ದ ನಿಟ್ಟರಹಳ್ಳಿ ಮಠದ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮುದಾಯ ಸದಾ ಒಗ್ಗಟ್ಟಾಗಿರಬೇಕು. ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಸಮುದಾಯದ ವರದರಾಜಾಚಾರ್, ವರಲಕ್ಷ್ಮೀ, ಡಾ: ಧರ್ಮೇಂದ್ರ, ಟಿ.ಸಿ. ಡಮರುಗೇಶ್, ಬಿ.ಕೆ. ರವಿ, ಡಿ.ಜಿ. ಚಂದ್ರಾಚಾರ್, ಕೆ.ಎಸ್. ಶಂಕರಾಚಾರ್, ಜಿ.ಎಸ್. ಅಶ್ವತ್ಥಾಚಾರ್, ಎಸ್.ಆರ್. ಚಂದ್ರಶೇಖರ್, ಟಿ.ಆರ್. ಸುರೇಶಾಚಾರ್, ಜಗದಾಂಬ ನಂಜಪ್ಪ, ಟಿ.ಹೆಚ್. ಸುರೇಶ್, ವೆಂಕಟೇಶಾಚಾರ್, ನಾಗಲಿಂಗಾಚಾರ್, ನಂಜುಂಡಸ್ವಾಮಿಚಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿಶ್ವಕರ್ಮ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಪಿ.ನಾಗರಾಜು, ಹಿರಿಯ ಪತ್ರಕರ್ತ ಎಸ್. ನಾಗಣ್ಣ, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಟಿ.ಎ. ರವಿಕುಮಾರ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಹರೀಶಾಚಾರ್ಯ, ಟಿ.ಎನ್. ಗುರುರಾಜು, ಡಮರುಗೇಶ್, ಕೆ.ಆರ್. ಪ್ರಕಾಶ್, ರಾಮಲಿಂಗಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಮೇಲ್ವಿಚಾರಕ ಸುರೇಶ್‌ಕುಮಾರ್, ಪತ್ರಕರ್ತರಾದ ಚಿ.ನಿ. ಪುರುಷೋತ್ತಮ್, ಅನು ಶಾಂತರಾಜು, ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದತ್ತಾತ್ರೇಯನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್‌
ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ; ಬೆಳಗ್ಗೆ ತೆರವು