ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ

KannadaprabhaNewsNetwork |  
Published : Apr 19, 2024, 01:10 AM ISTUpdated : Apr 19, 2024, 01:11 AM IST
ಬುಕ್18 | Kannada Prabha

ಸಾರಾಂಶ

ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಗೋಪಿನಾಥ್ ರಾವ್ ಸರ್ವದೆ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್‌ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲದ ಕೆ.ಎಚ್.ಬಿ. ಕಾಲೋನಿಯ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ‘ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ’ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ನಡೆಯಿತು.

ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಗೋಪಿನಾಥ್ ರಾವ್ ಸರ್ವದೆ. ಇವರು ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್‌ನ ನಿವೃತ್ತ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್.

ಪುಸ್ತಕ ಬಿಡುಗಡೆಗೊಳಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕದ ಬಗ್ಗೆ ಮಾತನಾಡಿ, ಲೇಖಕರು ಕೆಇಬಿ ನೌಕರರ ಕೆಲಸ ಕಾರ್ಯದ ಬಗ್ಗೆ ಹಾಗೂ ಅಂದಿನ ಕೆಲಸ ಮತ್ತು ಇಂದಿನ ನೌಕರರ ಕೆಲಸದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರೋಟರಿ ಜಿಲ್ಲಾ ಗವರ್ನರ್ ಸಿಎ ದೇವಾನಂದ್, ಕೆಪಿಟಿಸಿಎಲ್‌ನ ನಿವೃತ್ತ ತಾಂತ್ರಿಕ ನಿರ್ದೇಶಕ ಎನ್. ರಘುಪ್ರಕಾಶ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಧಿಕಾರಿ ಜಯಶ್ರೀ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಕೆಪಿಟಿಸಿಎಲ್ ಎಇಇಎಸ್ ಗಣರಾಜ ಭಟ್, ಮಣಿಪಾಲ ರೋಟರಿ ಹಿಲ್ಸ್ ಕಾರ್ಯದರ್ಶಿ ಮಾಧವ ಮಯ್ಯ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.

ವಸಂತ ಗೀತ ಪ್ರಕಾಶನದ ಪ್ರಕಾಶಕಿ ವಸಂತ ಗೋಪಿನಾಥ್ ರಾವ್ ಹಾಗೂ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾ, ಪುರುಷೋತ್ತಮ್ ಮಕ್ಕಿತ್ತಾಯ, ಮಂಜುನಾಥ ಭಟ್ ಹಾಗೂ ಶಶಿಕಾಂತ್ ಅವರನ್ನು ಸನ್ಮಾನಿಸಲಾಯಿತು. ಜ್ಯೋತಿ ಪುರುಷೋತ್ತಮ್ ನಿರೂಪಿಸಿದರು. ವಿಜಯ್ ಸ್ವಾಗತಿಸಿದರು. ಉದಯ್ ಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು