ದಾಬಸ್‌ಪೇಟೆ: ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ನೀಡಿರುವ ಐದು ಗ್ಯಾರಂಟಿಗಳೇ ನನ್ನ ಗೆಲುವಿಗೆ ಸಹಕಾರಿಯಾಗಲಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಪೂರಕ ವಾತಾವರಣವಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ತಿಳಿಸಿದರು.ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಮಹಿಮೇರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬಹಿರಂಗ ಮತಪ್ರಚಾರದ ನೇತೃತ್ವ ವಹಿಸಿ ಮಾತನಾಡಿದರು.
ಅರೇಬೊಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ರಾಮಚಂದ್ರ, ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ರಾಮಚಂದ್ರ, ಕುಲುವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ರತ್ನ, ಸದಸ್ಯ ಕೆ.ಕೆ.ಕೃಷ್ಣಮೂರ್ತಿ, ಡಿ.ಆರ್.ಚಂದ್ರಶೇಖರಯ್ಯ, ಅರೇಬೊಮ್ಮನಹಳ್ಳಿ ರಂಗಸ್ವಾಮಿ, ಜಬೀ ಉಲ್ಲಾ, ಮುಖಂಡರಾದ ಲಕ್ಕಸಂದ್ರ ಗಂಗರಾಜು, ಟೈಲರ್ ಹನುಮಂತರಾಜು, ಮೆಳೇಕತ್ತಿಗನೂರು ಶ್ರೀನಿವಾಸ್, ಕುಲುವನಹಳ್ಳಿ ಮಹೇಶ್, ಯುವರಾಜ್ ಇತರರಿದ್ದರು.ಫೋಟೋ 6 : ಸೋಂಪುರ ಹೋಬಳಿಯ ಗಡಿಯ ಮಹಿಮಾಪುರ ಮಹಿಮೇರಂಗಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಲೋಕಸಭಾ ಅಭ್ಯರ್ಥಿ ರಕ್ಷಾರಾಮಯ್ಯ ಪರ ಬಹಿರಂಗ ಮತಪ್ರಚಾರದ ನೇತೃತ್ವ ವಹಿಸಿದ ಶಾಸಕ ಶ್ರೀನಿವಾಸ್ ಮಾತನಾಡಿದರು.