ಬಡವರ ಕಷ್ಟಕ್ಕೆ ಸ್ಪಂದಿಸುವ ಕಾಂಗ್ರೆಸ್

KannadaprabhaNewsNetwork |  
Published : Apr 19, 2024, 01:10 AM IST
ಸಕ್ರೀಯ ಯುವತಿ ಸಂಯುಕ್ತರಿಗೆ ಒಮ್ಮೆ ಅವಕಾಶ ನೀಡಿ : ನೀಲಕಂಠ ಮುತ್ತೂರ. | Kannada Prabha

ಸಾರಾಂಶ

ಕಳೆದರಡು ದಶಕಗಳಿಂದ ತಮ್ಮ ತಂದೆಯ ಕ್ಷೇತ್ರದಲ್ಲಿನ ಅಭೂತಪೂರ್ವ ಅಭಿವೃದ್ಧಿಗೆ ಸಂಯುಕ್ತಾರು ಕಾರಣ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸ್ವಾತಂತ್ರ್ಯ ಕಾಲದ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಬಡವರ, ದುರ್ಬಲರ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಕಷ್ಟಕ್ಕೆ ಸ್ಪಂದಿಸುವ ಬದ್ಧತೆಯಿದೆ. ಬಾಗಲಕೋಟ ಲೋಕಸಭಾ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ನೀಡಲು ಉತ್ಸುಕರಾಗಿರುವ ಯುವತಿ ಸಂಯುಕ್ತಾ ಪಾಟೀಲರಿಗೆ ಒಮ್ಮೆ ಅವಕಾಶ ನೀಡಿ ಎಂದು ಹಿರಿಯ ಧುರೀಣ ನೀಲಕಂಠ ಮುತ್ತೂರ ಮನವಿ ಮಾಡಿದರು.

ಮಂಗಳವಾರ ರಬಕವಿಯ ಬಾಗೋಜಿಮಠದಲ್ಲಿ ನಡೆದ ರಬಕವಿ - ಬನಹಟ್ಟಿ ಹಿರಿಯರ ಸಭೆಯಲ್ಲಿ ಮಾತನಾಡಿದ ಅವರು, ಸಂಯುಕ್ತಾ ಪಾಟೀಲ ಕ್ಷೇತ್ರಕ್ಕೆ ಒಂದರಂತೆ ಪ್ರಣಾಳಿಕೆ ರೂಪಿಸಿದ್ದಾರೆ. ಅದನ್ನು ಕ್ರಿಯಾತ್ಮಕವಾಗಿ ಅಳವಡಿಸುವ ಚಿಂತನೆಯಲ್ಲಿದ್ದಾರೆ. ಕಳೆದ ಎರಡು ದಶಕಗಳಿಂದ ಶಿವಾನಂದ ಪಾಟೀಲರ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಮೆ ಹೊಂದಿದ್ದಾರೆ. ಸಂಯುಕ್ತಾ ಪಾಟೀಲರಿಗೆ ಒಮ್ಮೆ ಮತ ನೀಡಿ ಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ಹಿರಿಯರು ಆಶೀರ್ವದಿಸಬೇಕೆಂದು ಕೋರಿದರು.

ಕಳೆದ ಎರಡು ದಶಕಗಳಿಂದ ನಮ್ಮನ್ನು ಪ್ರತಿನಿಧಿಸಿರುವ ಸಂಸದರು ಯಾವುದೇ ಕೆಲಸ ಮಾಡಿಲ್ಲ. ಬಾಗಲಕೋಟೆ - ಕುಡಚಿ ರೈಲು ಯೋಜನೆ ಕುಂಟುತ್ತ ಸಾಗುತ್ತಿದೆ. ಇಚ್ಛಾಶಕ್ತಿ ಕೊರತೆಯ ಸಂಸದರಿಗಿಂತ ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾರ ಪತಿ ಶಿವಕುಮಾರ ತಾಲಂಪಲ್ಲಿ ಮಾತನಾಡಿ, ಕಳೆದರಡು ದಶಕಗಳಿಂದ ತಮ್ಮ ತಂದೆಯ ಕ್ಷೇತ್ರದಲ್ಲಿನ ಅಭೂತಪೂರ್ವ ಅಭಿವೃದ್ಧಿಗೆ ಸಂಯುಕ್ತಾರು ಕಾರಣ. ಈ ಬಾರಿ ಹೊಸ ಮುಖವಾಗಿರುವ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಿ ಸಜ್ಜಾಗಿರುವ ಸಂಯುಕ್ತಾ ಪಾಟೀಲರಿಗೆ ಮತ ನೀಡಿ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಗಿರೀಶ ಮುತ್ತೂರ, ಸೋಮಶೇಖರ ಕೊಟ್ರಶೆಟ್ಟಿ, ಬನಹಟ್ಟಿಯ ಗುರುಸಿದ್ದಪ್ಪ ಚನಾಳ, ಮಹಾಶಾಂತ ಶೆಟ್ಟಿ, ಡಾ.ಟೆಂಗಿನಕಾಯಿ, ರಾಜಶೇಖರ ಮುತ್ತೂರ, ಉಮೇಶ ಹನಗಂಡಿ, ಮಲ್ಲಿಕಾರ್ಜುನ ಮುತ್ತೂರ, ಬಸವರಾಜ ಜಿಗಜಿನ್ನಿ, ಪ್ರಭಾಕರ ಢಪಳಾಪುರ, ಚಂದ್ರಶೇಖರ ಹುಲಗಬಾಳಿ, ಬಾಲಚಂದ್ರ ತೆಗ್ಗಿ, ಬಸವರಾಜ ಕುಂಚನೂರ, ಅಂದಾನಿ ಮುತ್ತೂರ, ಅಮಿತ್ ನಾಶಿ, ಮುರಗೇಶ ಮುತ್ತೂರ, ಪ್ರೇಮಸಾಗರ ಪಾಟೀಲ, ಗೋವಿಂದ, ಕೆ.ಆರ್.ಬಾಬು ಮುಂತಾದವರಿದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ