ತೇಜಸ್ವಿ ಬರೆಹಗಳಲ್ಲಿ ಪರಿಸರದ ಕೌತುಕ ಅನನ್ಯ: ಶಿಕ್ಷಕ ಶಿವಪ್ರಸಾದ್‌

KannadaprabhaNewsNetwork |  
Published : Nov 17, 2025, 01:02 AM IST
ದೊಡ್ಡಬಳ್ಳಾಪುರದ ಸರಸ್ವತಿ ಶಾಲೆಯಲ್ಲಿ ಸಾಹಿತ್ಯ ಸಂಸ್ಕೃತಿ ವಿಜ್ಞಾನ ಸಮಾಗಮ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ‌ ಅಣ್ಣನ‌ ನೆನಪು ಕೃತಿಯು ಕುವೆಂಪು ಅವರ ಜೀವನ, ವ್ಯಕ್ತಿತ್ವ ಮತ್ತು ಅವರ ಸುತ್ತಲಿನ ಪರಿಸರದ ಸ್ವಾರಸ್ಯಕರ ವಿವರಗಳನ್ನು ನೀಡುತ್ತದೆ ಎಂದು ಶಿಕ್ಷಕ ಎಸ್.ಟಿ.ಶಿವಪ್ರಸಾದ್ ತಿಳಿಸಿದರು.

ದೊಡ್ಡಬಳ್ಳಾಪುರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ‌ ಅಣ್ಣನ‌ ನೆನಪು ಕೃತಿಯು ಕುವೆಂಪು ಅವರ ಜೀವನ, ವ್ಯಕ್ತಿತ್ವ ಮತ್ತು ಅವರ ಸುತ್ತಲಿನ ಪರಿಸರದ ಸ್ವಾರಸ್ಯಕರ ವಿವರಗಳನ್ನು ನೀಡುತ್ತದೆ ಎಂದು ಶಿಕ್ಷಕ ಎಸ್.ಟಿ.ಶಿವಪ್ರಸಾದ್ ತಿಳಿಸಿದರು.

ಇಲ್ಲಿನ ಸರಸ್ವತಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕುವೆಂಪುರವರ ಜೀವನ ಕುರಿತಾದ ಅನೇಕ ಘಟನೆಗಳನ್ನು ಅಣ್ಣನ ನೆನಪು ಕೃತಿಯಲ್ಲಿ ಪೂರ್ಣಚಂದ್ರ ತೇಜಸ್ವಿ ದಾಖಲಿಸಿದ್ದಾರೆ. ಕುವೆಂಪು ಅವರ ವಸ್ತುನಿಷ್ಠ ಜೀವನ ಶೈಲಿಯನ್ನು ಪೂರ್ಣಚಂದ್ರ ತೇಜಸ್ವಿಯವರಲ್ಲೂ ಕಾಣಬಹುದಾಗಿದೆ. ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬದುಕು ಎಲ್ಲಾ ಕನ್ನಡಿಗರಿಗೂ ಆದರ್ಶವಾಗಿದೆ ಎಂದರು.

ವಿಜ್ಞಾನ ಶಿಕ್ಷಕ ಎಚ್.ಆರ್.ಸ್ವಾಮಿ, ಕೃತಕ ಬುದ್ಧಿಮತ್ತೆ ಮುಂಚೂಣಿಯಲ್ಲಿ ಬರುತ್ತಿರುವ ಇಂದಿನ ದಿನಗಳಲ್ಲಿ ಅದರ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಕೃತಕ ಬುದ್ಧಿಮತ್ತೆಯ ಅನಗತ್ಯ ಬಳಕೆ ಅಪಾಯಕಾರಿ ಎಂಬುದನ್ನು ತಿಳಿಯಬೇಕು.‌ ವಿಜ್ಞಾನದ ಆವಿಷ್ಕಾರಗಳು ನಿಸರ್ಗ ಮತ್ತು ಮನುಕುಲದ ಒಳಿತಿಗಾಗಿ ಬಳಕೆಯಾಗಬೇಕಾಗಿದೆ ಎಂದರು.

ಸರಸ್ವತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಕೆ.ಸಂಪತ್ತಕುಮಾರ್, ಶಿಕ್ಷಕರಾದ ಅನಿಲ್ ಕುಮಾರ್, ನಿತಿನ್ ಕುಮಾರ್, ಧನಲಕ್ಚ್ಮಿ, ಸಚಿನ್, ತಾ.ಕಸಾಪ ಕಾರ್ಯದರ್ಶಿ ಎ.ಜಯರಾಮ್, ‌ಪ್ರತಿನಿಧಿ ರಂಗಸ್ವಾಮಯ್ಯ, ಕಜಾಪ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಸಹಕಾರ್ಯದರ್ಶಿ ಸೂರ್ಯನಾರಾಯಣ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ನವೋದಯ ವಿದ್ಯಾಲಯ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ ಭಾಗವಹಿಸಿದ್ದರು.

15ಕೆಡಿಬಿಪಿ2- ದೊಡ್ಡಬಳ್ಳಾಪುರದ ಸರಸ್ವತಿ ಶಾಲೆಯಲ್ಲಿ ಸಾಹಿತ್ಯ ಸಂಸ್ಕೃತಿ ವಿಜ್ಞಾನ ಸಮಾಗಮ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ