ಚಿತ್ರಕಲೆಗೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Dec 02, 2025, 03:00 AM IST
ಫೋಟೋ ಶಿರ್ಷಿಕೆ  | Kannada Prabha

ಸಾರಾಂಶ

ನಶಿಸಿ ಹೋಗುತ್ತಿರುವ ಚಿತ್ರಕಲೆಗೆ ಮೂರ್ತ ರೂಪವನ್ನು ಕೊಟ್ಟು ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ-ಸುವರ್ಣ ನ್ಯೂಸ್ ಸೇವೆ ಶ್ಲಾಘನೀಯ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿತ್ರಕಲಾ ಶಿಕ್ಷಕ ರಾಜು ದೇವಋಷಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನಶಿಸಿ ಹೋಗುತ್ತಿರುವ ಚಿತ್ರಕಲೆಗೆ ಮೂರ್ತ ರೂಪವನ್ನು ಕೊಟ್ಟು ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ-ಸುವರ್ಣ ನ್ಯೂಸ್ ಸೇವೆ ಶ್ಲಾಘನೀಯ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿತ್ರಕಲಾ ಶಿಕ್ಷಕ ರಾಜು ದೇವಋಷಿ ಹೇಳಿದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಿಗಿಮಠ ಶಾಲೆಯ ಸಭಾಭವನದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್, ಸಿಎಲ್‌ಇ ಸಂಸ್ಥೆ, ಸಾಯಿ ಅಡವೈಜರ್ಸ್‌, ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ-2025, ಪ್ರಶಸ್ತಿ ಪ್ರದಾನ ವಿತರಣೆಯಲ್ಲಿ ಮಾತನಾಡಿದ ಅವರು, ಚಿತ್ರಕಲೆಗೆ ಯಾವುದೇ ಭಾಷೆ, ಧರ್ಮ ಇರುವುದಿಲ್ಲ, ಯಾವುದೇ ವ್ಯಕ್ತಿಯಲ್ಲಿಯೂ ಕೂಡಾ ಕೂಡ ಚಿತ್ರಕಲೆ ಇರಬಹುದು ಅದನ್ನು ಚಿತ್ರ ಬಿಡಿಸುವುದರ ಮೂಲಕ ತೋರಿಸಬೇಕು. ಶಿಕ್ಷಣಕ್ಕೆ ಮೂಲ ಬುನಾದಿ ಚಿತ್ರಕಲೆ ಆಗಿರುತ್ತದೆ ಎಂದರು.

ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯ ಮುಖ್ಯಾಧ್ಯಾಪಕ ಬಸವರಾಜ ರೋಖಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪರಿಸರ ಬಗ್ಗೆ ವಿಶೇಷವಾಗಿ ಕಾಳಜಿವಹಿಸಿ ಅವರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಹಿಂದಿನ ದಿನಗಳಲ್ಲಿ ಜನರಲ್ಲಿ ಶಿಕ್ಷಣ ಕಡಿಮೆಯಿತ್ತು ಆಗ ಪರಿಸರ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಇತ್ತು ಹೀಗಾಗಿ ಪರಿಸರ ಚೆನ್ನಾಗಿ ಇತ್ತು. ಆದರೆ, ಇಂದು ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಉದ್ದಿಮೆಗಳು ಬೆಳೆಯುತ್ತಿರುವುದರಿಂದ ಅರಣ್ಯ ನಾಶವಾಗುತ್ತಿದೆ. ಹೀಗಾಗಿ ಪ್ರತಿಯೋರ್ವ ವಿದ್ಯಾರ್ಥಿ ಮನೆಗೊಂದು ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಿಸಬೇಕು ಎಂದರು. ಒಂದು ಚಿತ್ರ ನೂರು ಶಬ್ದಕ್ಕೆ ಸಮ ಎನ್ನುವಂತೆ ಚಿತ್ರಕಲೆ ಸಮಾಜದಲ್ಲಿ ಉಳಿಯಬೇಕಾಗಿದೆ. ಸ್ಪರ್ಧೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ, ಅದರಲ್ಲಿ ಪಾಲ್ಗೊಂಡು ಜಗತ್ತಿಗೆ ಪ್ರತಿಭೆಯನ್ನು ತೋರಿಸಿಕೊಟ್ಟಾಗ ಹೆಚ್ಚಿನ ಗೌರವ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕರ್ನಾಟಕ ವನ್ಯ ಜೀವಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, ಹೆಮ್ಮೆಯ ವಿ?ಯವಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆಯ ವಲಯ ಅಧಿಕಾರಿ ಜಗದೀಶ ರಕ್ಕಸಗಿ ಮಾತನಾಡಿ, ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವ ಮಾಧ್ಯಮ ರಂಗದ ಕಳಕಳಿ ಮೆಚ್ಚುವಂತದ್ದು. ರಾಷ್ಟ್ರ-ರಾಜ್ಯವನ್ನು ಆಳಿ ಹೋದ ಅನೇಕ ರಾಜ ಮಹಾರಾಜರು ಪರಿಸರ ರಕ್ಷಣೆಯಲ್ಲಿ ತಮ್ಮದೇ ಆದ ಕೋಡುಗೆ ನೀಡಿದ್ದಾರೆ ಎಂದರು.ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಕೆ.ಪಿ. ಖಡಕಬಾವಿ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದರು. ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಪಕ ದತ್ತಾತ್ರೇಯ ಕೋಳಿ, ಚಿಕ್ಕೋಡಿ ತಾಲೂಕಿನ ಕನ್ನಡಪ್ರಭ ವರದಿಗಾರ ಅನಿಲ ದಲಾಲ, ಸಾಯಿ ಅಡವೈಟಜರ್ ಮಲ್ಲೇಶ ಬರಗಾಲೆ, ಅಕ್ಷಯ ಹಿರೇಮಠ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ರಾಜು ದೇವಋಷಿ ಹಾಗೂ ರವೀಂದ್ರ ತೆಳಗಡೆ ಆಗಮಿಸಿದರು. ಸಚೀನ ದತ್ತಾತ್ರೆಯ ಚೌಗಲಾ ಸ್ವಾಗತಿಸಿ,ನಿರೂಪಿಸಿ ವಂದಿಸಿದರು. ಚಿತ್ರಕಲಾ ಸ್ಪರ್ಧೆಯ ವಿಜೇತರು

8ನೇ ತರಗತಿ: ಹರಿಪ್ರೀಯಾ ಕೇಶವ ಕುಲಕರ್ಣಿ (ಎಂ.ಕೆ.ಕವಟಿಮಠ ಶಾಲೆ)ಪ್ರಥಮ

ಅಸದ್ ಜಮಾದಾರ (ಕೆ.ಕೆ.ಸಿಬಿಎಸ್‌ಇ ಶಾಲೆ ಚಿಕ್ಕೋಡಿ) ದ್ವಿತೀಯ

ಪರಮ ಬೆಕ್ಕೇರಿ (ಕೆ.ಕೆ.ಸಿಬಿಎಸ್‌ಇ ಶಾಲೆ ಚಿಕ್ಕೋಡಿ)ತೃತೀಯ

9ನೇ ತರಗತಿ: ಲಕ್ಷ್ಮೀ ಪಾಟೀಲ (ಜಿಎಸ್‌ಇಎಸ್ ಸ್ಕೂಲ್ ಚಿಕ್ಕೊಡಿ)ಪ್ರಥಮ

ಆಯಾಶಾ ತಾಜನ್ (ಎಂ.ಕೆ.ಕವಟಿಮಠ ಶಾಲೆ ಚಿಕ್ಕೋಡಿ) ದ್ವಿತೀಯ

ಭೂಮಿಕಾ ಪಾಟೀಲ (ಜಿಎಸ್‌ಇಎಸ್ ಶಾಲೆ ಚಿಕ್ಕೋಡಿ) ತೃತೀಯ

10ನೇ ತರಗತಿ: ತಮ್ರಾನ್ ಗಣೇಶವಾಡಿ (ವೈ.ಬಿ.ಕಿವಡ ಆಂಗ್ಲ ಮಾಧ್ಯಮ ಶಾಲೆ ಚಿಕ್ಕೋಡಿ)ಪ್ರಥಮ

ಕೀರ್ತಿ ಟೊಣ್ಣೆ (ಎಂ.ಕೆ.ಕೆ ಶಾಲೆ ಚಿಕ್ಕೋಡಿ)ದ್ವಿತೀಯ

ಶ್ರದ್ಧಾ ದೊಡಮನಿ (ಎಂ.ಕೆಕೆ ಚಿಕ್ಕೋಡಿ) ತೃತೀಯ

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಚಿತ್ರಕಲೆ ಪೂರಕವಾಗಿದ್ದು, ಪ್ರೌಢಶಾಲೆಗಳಲ್ಲಿ ಹೆಚ್ಚು ಇರುವ ವಿದ್ಯಾರ್ಥಿಗಳಿಗೆ ಚಿತ್ರಕಲೆ ಅತ್ಯವಶ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರಕಲಾ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.

-ರಾಜು ದೇವಋಷಿ,

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು.ಕನ್ನಡಪ್ರಭ ದಿನಪತ್ರಿಕೆಯವರು ಪರಿಸರ ಜಾಗೃತಿ ಸಲುವಾಗಿ ಆಯೋಜಿಸಿರುವ ರಾಜ್ಯಮಟ್ಟದ ಸ್ಪರ್ಧೆ ನನಗೆ ಖುಷಿ ತಂದಿದ್ದು ಇದರಲ್ಲಿ ಭಾಗವಹಿಸಿ ನನಗೆ ಪ್ರಥಮ ಪ್ರಶಸ್ತಿ ಬಂದಿರುವುದಕ್ಕೆ ಆಯೋಜಕರಿಗೆ ಧನ್ಯವಾದಗಳನ್ನು ನನ್ನ ಪರಿವಾಗಿ ಹಾಗೂ ನನ್ನ ಶಾಲೆಯ ಪರವಾಗಿ ಅಭಿನಂದಿಸುತ್ತೇನೆ.

-ತಮ್ರಾನ್ ಗಣೇಶವಾಡಿ,
ವೈ.ಬಿ.ಕಿವಡ ಆಂಗ್ಲ ಮಾಧ್ಯಮ ಶಾಲೆ ಚಿಕ್ಕೋಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ