ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಕಾರ್ಯಕ್ರಮವೂ ಜ. 17 ಹಾಗೂ 18ರಂದು ಅದ್ಧೂರಿಯಾಗಿ ಜರುಗಿತು. ಅದರ ಯಶಸ್ಸಿನ ಬೆನ್ನಲ್ಲಿಯೇ ಯಾತ್ರಾ ಮಹೋತ್ಸವವೂ ಜ. 31 ಹಾಗೂ ಫೆ.1 ಮತ್ತು 2ರಂದು ಅತ್ಯಂತ ಅದ್ಧೂರಿಯಾಗಿ ನೆರವೇರಿತು.
ಮುಂಡರಗಿ: ಬರದ ನಾಡಾದ ಮುಂಡರಗಿಯಲ್ಲಿ ಇಲ್ಲಿನ ಅನ್ನದಾನೀಶ್ವರ ಮಠ ಕೇವಲ ಅನ್ನದಾನವನ್ನು ಮಾತ್ರ ಮಾಡಿಲ್ಲ, ಹೊಟ್ಟೆ ಮತ್ತು ನೆತ್ತಿ ತುಂಬಿಸುವ ಎರಡೂ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಸೋಮವಾರ ಸಂಜೆ ಅನ್ನದಾನೀಶ್ವರ ಶಿವಯೋಗಿಗಳ 156ನೇ ಯಾತ್ರಾ ಮಹೋತ್ಸದ ಕೊನೆಯ ದಿನದ ಭಾರತ ಹುಣ್ಣಿಮೆ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಕಾರ್ಯಕ್ರಮವೂ ಜ. 17 ಹಾಗೂ 18ರಂದು ಅದ್ಧೂರಿಯಾಗಿ ಜರುಗಿತು. ಅದರ ಯಶಸ್ಸಿನ ಬೆನ್ನಲ್ಲಿಯೇ ಯಾತ್ರಾ ಮಹೋತ್ಸವವೂ ಜ. 31 ಹಾಗೂ ಫೆ.1 ಮತ್ತು 2ರಂದು ಅತ್ಯಂತ ಅದ್ಧೂರಿಯಾಗಿ ನೆರವೇರಿತು.
ಯಾತ್ರಾ ಮಹೋತ್ಸವ ಹೆಚ್ಚು ಜನಮನ್ನಣೆ ಪಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಜರುಗುತ್ತಾ ಬಂದಿದೆ. ಯಾತ್ರಾ ಮಹೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು, ಶ್ರೀಮಠದ ಹಿರಿಯರು, ಜತೆಗೆ ಪಟ್ಟಣದ ಎಲ್ಲ ಯುವಕರ ಬಳಗ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸಿರುವುದು ಯಾತ್ರಾ ಮಹೋತ್ಸವದ ಯಶಸ್ಸಿಗೆ ಕಾರಣವಾಗಿದೆ ಎಂದರು.
ಪ್ರಸ್ತುತ ವರ್ಷ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮಗಳಿಂದ, ದೂರದ ಗಂಗಾವತಿ, ಹೊಸಪೇಟೆಯಿಂದ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದ ತಯಾರಿಸಿಕೊಂಡು ತಂದಿದ್ದಾರೆ. ಯಾತ್ರಾ ಮಹೋತ್ಸವಕ್ಕೆ ಬಂದಿದ್ದ ಎಲ್ಲರೂ ಸಂತೃಪ್ತಿಯಿಂದ ಪ್ರಸಾದ ಮಾಡಿ ಹೋಗಿದ್ದಾರೆ. ಸೇವೆ ಮಾಡಿದ ಎಲ್ಲರಿಗೂ ಅನ್ನದಾನೀಶ್ವರ ಒಳ್ಳೆಯದನ್ನು ಮಾಡುತ್ತಾನೆ ಎಂದರು.
ಕೇಸರ ಜೌಳಗದ ವಿರಕ್ತರೇಶ್ವರ ಸ್ವಾಮೀಜಿ ಮಾತನಾಡಿ, ನಾಡಿನ ನಮ್ಮ ಎಲ್ಲ ಸ್ವಾಮೀಜಿಯವರಿಗೆ ತಂದೆಯಾಗಿ, ತಾಯಿಯಾಗಿ, ಹಿರಿಯರಾಗಿ ಅತ್ಯಂತ ಪ್ರೀತಿ, ಮಮತೆ ಭಕ್ತಿಯಿಂದ ಸಲಹೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಸ್ವತಃ ಸಾಹಿತಿಗಳು, ಮಹಾದಾನಿಗಳಾದ ಶ್ರೀಗಳ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಯಾತ್ರಾ ಮಹೋತ್ಸವದ ಸಮಿತಿ ಕಾರ್ಯದರ್ಶಿ ಶಿವು ವಾಲಿಕಾರ ಮಾತನಾಡಿ, ಹಿರಿಯ ಹಾಗೂ ಕಿರಿಯ ಶ್ರೀಗಳ ಆಶೀರ್ವಾದದಿಂದಾಗಿ ಈ ಬಾರಿಯ ಯಾತ್ರಾ ಮಹೋತ್ಸವ ದಾಖಲೆ ನಿರ್ಮಿಸಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.