ಹುಕ್ಕೇರಿ ಹಿರೇಮಠದ ಕಾರ್ಯ ಎಲ್ಲರ ಮನ ಗೆದ್ದಿದೆ

KannadaprabhaNewsNetwork |  
Published : Nov 10, 2025, 03:15 AM IST
ಹುಕ್ಕೇರಿಯಲ್ಲಿ ನಡೆದ ಹುಕ್ಕೇರೀಶರ ಉತ್ಸವದಲ್ಲಿ ಸಂಸದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮೈಸೂರು ದಸರಾ ಇಡೀ ವಿಶ್ವಕ್ಕೆ ಹೆಸರಾಗಿದ್ದರೆ, ಹುಕ್ಕೇರಿ ಹಿರೇಮಠದ ದಸರಾ ಸಾಮರಸ್ಯದ ಜೊತೆಗೆ ಹೆಸರಾಗಿರುವುದು ಅಭಿಮಾನದ ಸಂಗತಿ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಮೈಸೂರು ಅರಮನೆಗೂ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೂ ಅವಿನಾಭವ ಸಂಬಂಧವಿದೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿಯ ಮಾಠಾಧಿಪತಿ ಆಗಿದ್ದರೂ ಮೈಸೂರಿನ ಸಂಸ್ಕೃತಿಯನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಮೈಸೂರಿನ ಮಹಾರಾಜರು ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಪಟ್ಟಣದಲ್ಲಿ ಜರುಗಿದ 2025ನೇ ಸಾಲಿನ ಹುಕ್ಕೇರೀಶರ ಉತ್ಸವದಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಇಡೀ ವಿಶ್ವಕ್ಕೆ ಹೆಸರಾಗಿದ್ದರೆ, ಹುಕ್ಕೇರಿ ಹಿರೇಮಠದ ದಸರಾ ಸಾಮರಸ್ಯದ ಜೊತೆಗೆ ಹೆಸರಾಗಿರುವುದು ಅಭಿಮಾನದ ಸಂಗತಿಯಾಗಿದೆ. ಇಲ್ಲಿನ ವೇದ, ಸಂಸ್ಕೃತ, ಕನ್ನಡ ಅಭಿಮಾನ ಮತ್ತು ದಾಸೋಹ ಕಾರ್ಯವನ್ನು ಮಾಡುವುದರೊಂದಿಗೆ ಎಲ್ಲರ ಮನವನ್ನು ಗೆದ್ದಿದೆ ಎಂದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೈಸೂರಿನ ಮಹಾರಾಜರು ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಮೈಸೂರಿನ ದೊರೆ ಕೇವಲ ಮೈಸೂರಿಗೆ ಅಷ್ಟೇ ಮಾತ್ರ ಸೀಮಿತವಾಗಿಲ್ಲ. ಮೈಸೂರು ಅರಮನೆಯ ಒಡೆಯರು ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿ ಗುರುಶಾಂತೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿರುವುದು ನಿಜಕ್ಕೂ ಅಭಿನಂದನೀಯ ಎಂದರು.

ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ಹುಕ್ಕೇರೀಶರ ಉತ್ಸವದಲ್ಲಿ ಅನೇಕ ದಿಗ್ಗಜರು ಭಾಗಿಯಾಗುವುದರ ಮುಖಾಂತರ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಸಂತೋಷದ ಸಂಗತಿ ಎಂದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಅಧ್ಯಕ್ಷ ಮಹಾವೀರ ನಿಲಜಿಗಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯುತ್ ಸಂಘದ ನಿರ್ದೇಶಕರಾದ ಪೃಥ್ವಿ ಕತ್ತಿ, ಗಜಾನನ ಕ್ವಳ್ಳಿ, ನಂದು ಮಡಸಿ, ಮುಖಂಡರಾದ ಪ್ರಜ್ವಲ್ ನಿಲಜಗಿ, ಸುನಿಲ್ ಪರ್ವತರಾವ್, ಶೀತಲ್ ಬ್ಯಾಳಿ, ಚನ್ನಪ್ಪ ಗಜಬರ, ಸುರೇಶ ಜಿನರಾಳೆ ಇತರರು ಇದ್ದರು.

ಇದೇ ವೇಳೆ ಕಟಕೋಳ ಪ್ರಿಯದರ್ಶಿನಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ನಾವಲಗಿಮಠ, ಬೈಲಹೊಂಗಲದ ಮಾತಾಶ್ರೀ ಪೂರ್ವ ಪ್ರಾಥಮಿಕ ಶಾಲೆಯ ಡಾ. ಮಹಾಂತೇಶ ಶಾಸ್ತ್ರೀಗಳು ಸೇರಿದಂತೆ ಅನೇಕರಿಗೆ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV

Recommended Stories

ಆರೋಗ್ಯಕರ ಭಾರತ ನಿರ್ಮಾಣಕ್ಕೆ ಯುವಕರು ಶ್ರಮಿಸಿ
ಲಿಂಗ ಸೂಕ್ಷ್ಮತೆ ಜ್ಞಾನ ಅಗತ್ಯ