ಡಂಬಳ: ಮಠಗಳು ನಿರಂತರವಾಗಿ ಧಾರ್ಮಿಕ ಆಚಾರ ವಿಚಾರಗಳ ಸಂಸ್ಕಾರ ನೀಡುವುದು, ಗದಗಿನ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಸಂಗೀತ ಕ್ರಾಂತಿ, ಜಾತಿ ಮತ ಪಂಥ ಹೋಗಲಾಡಿಸಲು ಜಾತ್ಯತೀತ ತತ್ವದ ಮೂಲಕ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠಗಳ ಕಾರ್ಯ ನಿರಂತರ ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ವಿಜಯಪುರದ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ಬದುಕಿನಲ್ಲಿ ಹಣ್ಣು, ಹೆಣ್ಣು, ಹೊನ್ನು ಕೊಡುವವರು ಮತ್ತು ಮಣ್ಣು ಕೊಡುವವರು ಇರುತ್ತಾರೆ. ಹಣ್ಣು, ಹೆಣ್ಣು, ಹೊನ್ನು ಕೊಡುವವರು ಮತ್ತು ಮಣ್ಣು ಕೊಡುವವರು ಬೇಕಾಗಿಲ್ಲ, ಸಂಸ್ಕಾರ ಕೊಡುವವರು ಬೇಕಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರವಚನದ ಮೂಲಕ ಒಳ್ಳೆಯ ಸಂಸ್ಕಾರ ಭಕ್ತರ ಮನದಲ್ಲಿ ತುಂಬುವ ಕೆಲಸ ಮಾಡಿರುವುದು ಪ್ರಶಂಸನೀಯ ಎಂದು ಹೇಳಿದರು.
ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕ ಕ್ರಾಂತಿಯ ಮೂಲಕ ಬಡ ಮಕ್ಕಳು ಉತ್ತಮ ಉದ್ಯೋಗ ಹೊಂದಲು ಶ್ರಮಿಸುತ್ತಿರುವ ಜಗದ್ಗುರು ಡಾ. ನಾಡೋಜ ಅನ್ನದಾನೀಶ್ವರ ಶ್ರೀಗಳು, ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಗಳು ಪ್ರಶಸಂಸನೀಯ. ಅಭಿನವ ಮೃತ್ಯುಂಜಯ ಶ್ರೀಗಳ ಪ್ರವಚನದಿಂದ ಆಗಿರುವ ಬದಲಾವಣೆಗೆ ಮಹತ್ವ ಸಿಗಬೇಕಾದರೆ ಅವರು ಹಾಕಿ ಕೊಟ್ಟ ವಿಚಾರಗಳಂತೆ ನಡೆಯಲು ಮುಂದಾಗಬೇಕೆಂದು ಹೇಳಿದರು.ಮಣಕವಾಡ-ಹಿರೇವಡ್ಡಟ್ಟಿಯ ಅಭಿನವ ಮೃತ್ಯುಂಜಯ ಶ್ರೀಗಳು ಮಾತನಾಡಿ, ತಾಯಿ ಒಂದು ಕೈಯಲ್ಲಿ ಕೊಲು ಹಿಡಿದರೆ ಇನ್ನೊಂದು ಕೈಯಲ್ಲಿ ಊಣಬಡಿಸಲು ಹಾಲು ಹಿಡಿದು ಹೊಡಿಯಲು ಮುಂದಾಗುತ್ತಾಳೆ, ಅಂದರೆ ತಾಯಿಗೆ ಹಾಲು ಕುಡಿಸಬೇಕು ಎನ್ನುವ ಸದುದ್ದೇಶವಾಗಿದೆ, ಭಕ್ತರು ಸರಿದಾರಿಯಲ್ಲಿ ನಡೆಯಬೇಕು. ಸಾರಾಯಿ ಕುಡಿತದ ದಾಸರಾಗಿರುವವರನ್ನು ಕುಡಿತದಿಂದ ಬಿಡಸಬೇಕು ಎನ್ನುವ ಉದ್ದೇಶದಿಂದ ಮಣಕವಾಡದ ಮೃತ್ಯುಂಜಯ ಶ್ರೀಗಳ ಜೋಳಿಗೆಯ ಭಿಕ್ಷೆಯ ಮೂಲಕ ಶಪಥ ಮಾಡಿಸುತ್ತಾರೆ ಎಂದರು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಕಠಿಣ ಪ್ರರಿಶ್ರಮ ಸದ್ಧವಿಚಾರಗಳ ಬಂಡಾರದ ಪುಸ್ತಕದಂತೆ ಪ್ರವಚನಗಳ ಮೂಲಕ ಭಕ್ತರನ್ನು ಸರಿದಾರಿಯ ಹಾದಿಯಲ್ಲಿ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸುವ ಶ್ರೀಗಳ ಕಾರ್ಯಗಳ ಜನತೆಯ ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿದೆ ಎಂದು ಹೇಳಿದರು.
ಹಿರೇವಡ್ಡಟ್ಟಿಯ ಶಿವಾಚಾರ್ಯ ಶ್ರೀಗಳು, ಕೂಡಲ ನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಶ್ರೀ, ಚನ್ನಬಸವ ದೇವರು ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು.ಕಾರ್ಯಕ್ರಮದಲ್ಲಿ ಆನಂದ ಗಡ್ಡದೇವರಮಠ, ಹೇಮಗಿರೀಶ ಹಾವಿನಾಳ, ಉದ್ದಿಮೆದಾರ ಮಂಜುನಾಥ ವಿ ಹರ್ಲಾಪುರ, ರಾಜೇಶ ಹರ್ಲಾಪುರ, ಕಿರಣ ಪ್ರಕಾಶ ಬೂಮಾ, ಎಸ್.ಎಚ್. ಶಿವನಗೌಡರ, ನಾಗರಾಜ ಕಾಟರಳ್ಳಿ, ಮಂಜುನಾಥ ಕುರ್ತಕೋಟಿ, ಗುಳಪ್ಪ ಸಂಗನಾಳ, ಹನಮಪ್ಪ ಕಾಟರಳ್ಳಿ, ಸುಭಾಸರಡ್ಡಿ ಹಳ್ಳಿಗುಡಿ, ಶಿವಪ್ಪ ಅಂಕದ, ವಿರೇಶ ಜಲ್ಲಿಗೇರಿ, ಹನಮರಡ್ಡಿ ಮೇಟಿ, ಶರಣಪ್ಪ ಹಳ್ಳಿತಳವಾರ, ಅಪಾರ ಸಂಖ್ಯೆಯಲ್ಲಿ ಗದಗ ಸೇರಿದಂತೆ ಬೇರೆ ಬೇರೆ ನಗರದಿಂದ ಬಂದ ಗ್ರಾಮಸ್ಥರು, ಮಹಿಳೆಯರು ಇದ್ದರು.