ಶಾಲೆಗಳಿಗೆ ಜೀವಕಳೆ ತುಂಬುವ ಕಾರ್ಯ ಶ್ಲಾಘನೀಯ- ಆರ್.ಎಸ್. ಬುರುಡಿ

KannadaprabhaNewsNetwork |  
Published : Feb 03, 2024, 01:48 AM IST
ಕಾರ್ಯಕ್ರಮದಲ್ಲಿ ಬಣ್ಣದ ಸೇವೆಗೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಸಭಾಪತಿ ಬಸವರಾಜ ಹೊರಟ್ಟಿ ದಂಪತಿ ದತ್ತು ಪಡೆದ ಗದಗ ಸಿದ್ಧಲಿಂಗನಗರದ ಸರಕಾರಿ ಪ್ರೌಢಶಾಲೆಗೆ ಬಿಂಕದಕಟ್ಟಿ ಗ್ರಾಮದ ಪ್ರಗತಿಪರ ಕೃಷಿಕ, ಉದ್ದಿಮೆದಾರ ಬಸವರಡ್ಡಿ ಹುಚ್ಚಣ್ಣವರ ಪರಿವಾರದವರಿಂದ ಬಣ್ಣದ ಸೇವೆ ಸಲ್ಲಿಸುವ ಮೂಲಕ ಶಾಲೆಗೆ ಜೀವ ಕಳೆ ತುಂಬುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಗದಗ: ಸಭಾಪತಿ ಬಸವರಾಜ ಹೊರಟ್ಟಿ ದಂಪತಿ ದತ್ತು ಪಡೆದ ಗದಗ ಸಿದ್ಧಲಿಂಗನಗರದ ಸರಕಾರಿ ಪ್ರೌಢಶಾಲೆಗೆ ಬಿಂಕದಕಟ್ಟಿ ಗ್ರಾಮದ ಪ್ರಗತಿಪರ ಕೃಷಿಕ, ಉದ್ದಿಮೆದಾರ ಬಸವರಡ್ಡಿ ಹುಚ್ಚಣ್ಣವರ ಪರಿವಾರದವರಿಂದ ಬಣ್ಣದ ಸೇವೆ ಸಲ್ಲಿಸುವ ಮೂಲಕ ಶಾಲೆಗೆ ಜೀವ ಕಳೆ ತುಂಬುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.ಅವರು ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಬಣ್ಣದ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ಸರ್ಕಾರದಿಂದ ಶಾಲೆ ಅಭಿವೃದ್ಧಿ ಮಾಡುವುದು ಕಷ್ಟಸಾಧ್ಯ. ಸಮಾಜದ ದಾನಿಗಳಿಂದ ನೆರವು ಸಿಕ್ಕಾಗ ಶಾಲೆಯನ್ನು ಅಭಿವೃದ್ಧಿಪಡಿಸಬಹುದು, ಈಗಾಗಲೇ ಈ ಶಾಲೆಗೆ ಸಭಾಪತಿ ಬಸವರಾಜ ಹೊರಟ್ಟಿ, ವಿಜಯ ಹಬೀಬ, ಸಂಜಯ ಮಿಸ್ಕಿನ್, ಸುನೀಲ ವೆರ್ಣೇಕರ್ ಕುಟುಂಬದವರು ಸಹಾಯಹಸ್ತ ಚಾಚಿದ್ದರಿಂದ ಈ ಶಾಲೆ ಕೇವಲ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಶಾಲೆಯಾಗಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಮಕ್ಕಳ ಕಲಿಕೆಗೆ ಸಜ್ಜಾಗಿದ್ದು ಶಿಕ್ಷಣ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ಡಾ. ಬಸವರಾಜ ಧಾರವಾಡ ಮಾತನಾಡಿ, ದಾನ ಧರ್ಮ ಮಾಡುವ ಮೂಲಕ ಸಮಾಜದಲ್ಲಿ ನಮ್ಮದೇ ಆದ ಅಳಿಲು ಸೇವೆಯನ್ನು ಸಲ್ಲಿಸಬೇಕು. ಆ ಮೂಲಕ ನೆಮ್ಮದಿ, ಶಾಂತಿಯನ್ನು ಕಾಣಲು ಸಾಧ್ಯ. ಅಂತಹ ಕೆಲಸದಲ್ಲಿ ಬಸವರಡ್ಡಿ ಹುಚ್ಚಣ್ಣವರ ಕುಟುಂಬ ತೊಡಗಿದ್ದು ಸ್ಮರಣೀಯ ಕೆಲಸ. ಇಲ್ಲಿ 500ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಆ ಮಕ್ಕಳಿಗೆ ಒಂದು ಸುಂದರ ವಾತಾವರಣ ಕಲ್ಪಿಸಲು ಬಸವರಾಜ ಹೊರಟ್ಟಿಯವರು ಹಾಗೂ ಸಾಕಷ್ಟು ದಾನಿಗಳು ಕೈ ಜೋಡಿಸಿದ್ದಾರೆ. ಅವರೆಲ್ಲರ ಸೇವೆ ಸದಾಕಾಲ ಸ್ಮರಣೀಯವಾಗಿ ಉಳಿಯುತ್ತದೆ ಎಂದು ಹೇಳಿದರು. ದಾನಿಗಳಾದ ಮನಿಷ ಬಸವರಡ್ಡಿ ಹುಚ್ಚಣ್ಣವರ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯ ಜಯಲಕ್ಷ್ಮಿ ಅಣ್ಣಿಗೇರಿ, ಶಶಿಕಲಾ ಗುಳೆದವರ, ಸರ್ವಮಂಗಳ ಪತ್ತಾರ್, ಮಂಜುಳಾ ಸಾಂಬ್ರಾಣಿ, ಎಸ್.ಬಿ. ಗದ್ದನಗೇರಿ, ಜಿ.ಎನ್. ಅಳವಂಡಿ, ಶಂಕ್ರಮ್ಮ ಹನಮಗೌಡರ, ಶಾರದಾ ಬಾಣದ, ಶೋಭಾ ಗಾಳಿ, ಎಸ್.ಯು. ಕುಷ್ಟಗಿ, ಸಂಜೀವಿನಿ ಕೂಲಗುಡಿ, ವಿ.ಬಿ. ಶಿವನಗೌಡರ, ನಾಗಪ್ಪ ಶಿರೋಳ, ರಮೇಶ ಬಸರಿ, ಪದ್ಮಾವತಿ ದಾಸರ, ಎಲ್.ಬಿ. ಮಾಳೊತ್ತರ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಹಾಜರಿದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌