ಕನ್ನಡಪ್ರಭ ವಾರ್ತೆ ಅರಕಲಗೂಡು
‘ಮೂಲ ಕರ್ತೃ ಹಾಸನದ ಬಾನು ಮುಷ್ತಾಕ್ ಅವರು. ಬುಕರ್ ಪ್ರಶಸ್ತಿ ಅನುವಾದಿತ ಕೃತಿಗೆ ಕೊಡುವುದು ಎಂದು ನಿಯಮ ಇದೆ. ಅದರಲ್ಲಿ ಅವರು ಬೇರೆ ಬೇರೆ ಮಾಡಲ್ಲ. ಅನುವಾದಕರು ಇದ್ದ ತಕ್ಷಣ ಲೇಖಕರು ಮುಖ್ಯವಲ್ಲ ಅಥವಾ ಲೇಖಕರು ಇದ್ದ ತಕ್ಷಣ ಅನುವಾದಕರು ಮುಖ್ಯವಲ್ಲ ಎನ್ನುವ ರೀತಿ ಆಯ್ಕೆ ಮಂಡಳಿಯವರು ನೋಡುವುದಿಲ್ಲ. ಪ್ರಶಸ್ತಿ ಹಣ ಸಮನಾಗಿ ಹಂಚಿಕೆ ಮಾಡುತ್ತಾರೆ ಎಂದು ಹೇಳಿದರು.ಯಾರು ಏನು ಹೇಳಿದ್ರು, ಏನು ಹೇಳಲಿಲ್ಲ ಎಂದು ಚರ್ಚೆ ಮಾಡುವ ಬದಲು, ಸಾಹಿತ್ಯದಲ್ಲಿ ಮುಂದೆ ಏನಾಗಬಹುದು? ಅದರ ಪ್ರಭಾವದಿಂದ ಮುಂದೆ ಇನ್ನೇನು ಬರಬಹುದು ಎಂದು ನೋಡುವುದು ಮುಖ್ಯ ಎಂದರು. ‘ತಮಿಳು, ತೆಲುಗು, ಹಿಂದೆ, ಬಂಗಾಲಿ, ಮಲೆಯಾಳಂ, ಉರ್ದು ಭಾಷೆಗೆ ಹೋಲಿಸಿದರೆ, ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ತುಂಬಾ ಕಡಿಮೆ. ನಮ್ಮಲ್ಲಿ ಅದ್ಭುತವಾದ ಕೃತಿಗಳಿವೆ. ಎಸ್.ಎಲ್.ಭೈರಪ್ಪ ಅವರಿಂದ ಹಿಡಿದು ಹಲವರ ಕೃತಿಗಳು ಅನುವಾದ ಆಗಿವೆ. ಕುವೆಂಪು, ಕಾರಂತರು ಇದ್ದಾರೆ. ಅವುಗಳನ್ನು ಕನ್ನಡೇತರರು ಹೇಗೆ ಓದುವಂತೆ ಮಾಡಬಹುದು ಎಂಬ ಚರ್ಚೆ ಮಾಡುವುದು ಸೂಕ್ತ ಎಂದು ಅನ್ನಿಸುತ್ತದೆ’ ಎಂದರು.
‘ಕನ್ನಡ ಸಾಹಿತ್ಯಕ್ಕೆ 1,500 ವರ್ಷಗಳ ಇತಿಹಾಸವಿದೆ. ನಮ್ಮ ನಂತರವೂ ಕನ್ನಡ ಉಳಿದುಕೊಳ್ಳುತ್ತದೆ. ನಮ್ಮಿಂದ ಕನ್ನಡ ಅಲ್ಲ, ನಾವಿರುವುದು ಕನ್ನಡಕ್ಕಾಗಿ. ನಾನು ಕೆಲಸ ಮಾಡುವುದು ಕನ್ನಡಕ್ಕಾಗಿ. ವೈಯುಕ್ತಿಕ ಟೀಕೆಗಳ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ’ ಎಂದು ಹೇಳಿದರು.====================
ಫೋಟೋ:ಅರಕಲಗೂಡು ದಸರಾ ಉದ್ಘಾಟನೆಗೆ ಆಗಮಿಸಿದ್ದ ಹೆಸರಾಂತ ಅನುವಾದಕಿ, ಬುಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು.