ನರಗುಂದ: ಆಧುನಿಕ ಸಂದರ್ಭದಲ್ಲಿ ನೆಮ್ಮದಿ, ಶಾಂತಿ ಅಗತ್ಯವಿದೆ. ಅದನ್ನು ಒದಗಿಸುವಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಳೆದ ವರ್ಷ 25 ವರ್ಷಗಳಿಂದ ಆಧ್ಯಾತ್ಮಿಕ ಚಟುವಟಿಕೆ ಮಾಡುತ್ತ ಬಂಡಾಯದ ನೆಲದಲ್ಲಿ ಈಶ್ವರೀಯ ವಿವಿ ಅಧ್ಯಾತ್ಮಿಕ ಕ್ರಾಂತಿಗೈಯುತ್ತಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.
ಬ್ರಹ್ಮಕುಮಾರಿ ಪ್ರಭಕ್ಕನವರು ಮಾತನಾಡಿ, ಈ ವರ್ಷ ಪ್ರತಿ ವರ್ಷಕ್ಕಿಂತ ಅತ್ಯುತ್ತಮ ರೀತಿಯಲ್ಲಿ ಶಿವಜಯಂತಿ ಹಾಗೂ ಅಧ್ಯಾತ್ಮಿಕ ಕಲಾಕೃತಿ, ಕರ್ಮಫಲಗಳ ಪ್ರತಿಕೃತಿಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ದರ್ಶನ ಮಾಡಿಸಲಾಗಿದೆ. ಲೋಕ ಕಲ್ಯಾಣಾರ್ಥವಾಗಿ ಧಾನ್ಯಾಭಿಷೇಕ ಸಾರ್ವಜನಿಕ ರಿಂದ ಕೈಗೊಳ್ಳಲಾಯಿತು. ಜಗತ್ತಿನ ಪ್ರತಿಯೊಬ್ಬರು ನಮ್ಮವರೆಂದು ಭಾವಿಸಬೇಕು. ಎಲ್ಲರೂ ಎಲ್ಲ ಸಂದರ್ಭದಲ್ಲೂ ಸುರಕ್ಷಿತವಾಗಿರಲು ಪ್ರಾರ್ಥಿಸುವ ಸಂಕಲ್ಪ ಮಾಡಬೇಕು. ಎಲ್ಲರ ಒಳಿತಿಗೆ ನಮ್ಮ ಮನಸ್ಸು ದೃಢ ನಿರ್ಧಾರ ಕೈಗೊಳ್ಳಬೇಕು. ಇದಕ್ಕೆ ಎಲ್ಲರೂ ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಈಶ್ವರೀಯ ಸೇವಾಧಾರಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಾಬಾ ಸಾಹೇಬ ಶಿಕ್ಷಣ ಸಂಸ್ಥೆಯಗೂ ರೋಟ್ರಾಕ್ಟ್ ಶಾಲೆ ಕಾರ್ಯದರ್ಶಿ ರಾಜು ಕಲಾಲ, ರಾಜುಗೌಡ ಕೆಂಚನಗೌಡ್ರ, ಗುರುಪಾದಪ್ಪ ಕುರಹಟ್ಟಿ, ಪುರಸಭೆ ಸದಸ್ಯ ಅಪ್ಪಣ್ಣಗೌಡ ನಾಯ್ಕರ, ಬಿ.ಆರ್. ಪಾಟೀಲ, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ, ಬಸವರೆಡ್ಡಿ ಹಂಚಿನಾಳ, ಅಶೋಕ ಮದಗಾನೂರ, ಎಸ್. ಎಸ್. ಸವದಿ, ಲಾಲ್ ಮೊಹಮ್ಮದ ಎ ಅರಬ ಜಮಾದಾರ, ಡಾ.ವೈ.ಪಿ.ಕಲ್ಲನಗೌಡ್ರ ಹಾಗೂ ಈಶ್ವರೀಯ ಪರಿವಾರದ ಸದಸ್ಯರು ಇದ್ದರು.ಶಿಕ್ಷಕ ಅರವಿಂದ ಮೇಗೂರ ಸ್ವಾಗತಿಸಿದರು, ಶಿಕ್ಷಕ ಹನಮಂತ ಮಾದರ ಕಾರ್ಯಕ್ರಮ ನಿರೂಪಿಸಿದರು. ಚನ್ನಬಸಪ್ಪ ಕಂಠಿ ವಂದಿಸಿದರು.