ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ವಿಶ್ವಕರ್ಮ ಜಯಂತೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ದೇವರುಗಳ ನಿರ್ಮಾಣ, ದೇವರ ಆಯುಧಗಳನ್ನು ತಯಾರು ಮಾಡುತ್ತಿದ್ದವರು. ವಿಶ್ವಕರ್ಮರು. ಈ ಆಯುಧಗಳಿಂದ ನೀಚರನ್ನು ಸದೆ ಬಡೆಯುವ ಕಾರ್ಯವನ್ನು ದೇವಾನು ದೇವತೆಗಳು ಮಾಡುತ್ತಿದ್ದರು. ದೇವಾನು ದೇವತೆಗಳಿಗೇ ಬೇಕಾಗಿದ್ದ ವಿಶ್ವಕರ್ಮರು ಮಾನವರ ಸರ್ವ ಕೆಲಸ ಕಾರ್ಯಗಳಿಗೆ ಬೆನ್ನೆಲೆಬಾಗಿ ನಿಂತಿದ್ದಾರೆ. ಇಂದೂ ಸಹ ಪ್ರತಿಯೊಬ್ಬರ ಬಹದುಕಿನಲ್ಲಿ ವಿಶ್ವಕರ್ಮರು ಹಾಸು ಹೊಕ್ಕಿದ್ದಾರೆಂದು ದೇವರಾಜು ಹೇಳಿದರು. ತಹಸೀಲ್ದಾರ್ ಎನ್.ಎ. ಕುಂಇ ಅಹಮದ್ ಮಾತನಾಡಿ, ತಾಲೂಕಿನಲ್ಲಿರುವ ವಿಶ್ವಕರ್ಮ ಸಮುದಾಯ ತಮ್ಮ ಸಂಘಟನೆಯ ಬೆಳವಣಿಗೆಗೆ ನಿವೇಶನವನ್ನು ಕೇಳಿದ್ದಾರೆ. ಪರಿಶೀಲನೆ ನಡೆಸಿ ನಿವೇಶನ ಮಂಜೂರು ಮಾಡುವ ಭರವಸೆಯನ್ನು ನೀಡಿದರು. ಈ ವೇಳೆ ವಿವಿಧ ಸಮುದಾಯದ ಮುಖಂಡರಾದ ವಿ.ಟಿ.ವೆಂಕಟರಾಮಯ್ಯ, ಪ್ರಹ್ಲಾದ್, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ನಾಗರಾಜಾಚಾರ್, ಶ್ರೀನಿವಾಸ್, ಸತೀಶ್, ಗೌತಮ್, ಅಶೋಕ್, ನಂದೀಶ್, ಯಶವಂತ್, ಬಸವರಾಜು. ವಿಶ್ವನಾಥ್, ತಂಡಗ ಓಂಕಾರ್ ಚಾರ್, ಗಿರೀಶ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. 17 ಟಿವಿಕೆ 2 – ತುರುವೇಕೆರೆಯಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಜಯಂತ್ಯುತ್ಸವ ನೆರವೇರಿತು.