ಜಾತಿ, ಧರ್ಮದ ಸಂಘರ್ಷಕ್ಕೆ ಅಂತ್ಯವಾಡದಿದ್ದರೆ ಜಗತ್ತು ಅಧೋಗತಿಗೆ: ಎನ್.ಚಲುವೇಗೌಡ

KannadaprabhaNewsNetwork |  
Published : Nov 09, 2025, 02:00 AM IST
8ಕೆಎಂಎನ್ ಡಿ15 | Kannada Prabha

ಸಾರಾಂಶ

ಸರ್ವ ಧರ್ಮ, ಜಾತಿ ಎಲ್ಲವು ಒಂದೇ ಎಂದು ಚಿತ್ರಣ ಮಾಡಿದ ವ್ಯಕ್ತಿತ್ವ ಕನಕದಾಸರದು. 16 ನೇ ಶತಮಾನರದಲ್ಲಿ ಕನಕದಾಸರು ಹಾಗೂ ಪುರಂದರದಾಸರನ್ನು ಅಶ್ವಿನಿದೇವತೆಗಳೆಂದು ಕರೆಯುತ್ತಿದ್ದರು. ಒಂದು ಧಾನ್ಯವನ್ನು ಇಟ್ಟುಕೊಂಡು ರಾಮಧಾನ್ಯ ಚರಿತೆ ಎಂಬ ಮಹಾ ಕಾವ್ಯ ರಚಿಸಿದ ಕೀರ್ತಿ ಇರುವುದೇ ಕನಕದಾಸರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜಾತಿ, ಧರ್ಮದ ಸಂಘರ್ಷಕ್ಕೆ ಅಂತ್ಯವಾಡದಿದ್ದರೆ ಜಗತ್ತು ಅಧೋಗತಿಗೆ ತಲುಪಲಿದೆ ಎಂದು ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ನಾಡಹಬ್ಬ ಆಚರಣಾ ಸಮಿತಿಯಿಂದ ನಡೆದ ಭಕ್ತ ಕನಕದಾಸರ ಜಯಂತಿಯಲ್ಲಿ ಮಾತನಾಡಿ, ಜಗತ್ತಿನಲ್ಲಿ ನಡೆಯುತ್ತಿರುವ ಜಾತಿ, ಧರ್ಮದ ಸಂಘರ್ಷಗಳಿಂದಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದರು.

ಜಾತಿ, ಧರ್ಮ ಸಂಘರ್ಷದಿಂದ ಯಾವುದೇ ಉಳಿಯೋದಿಲ್ಲ. ಮನುಷ್ಯ ಜಾತಿ ಒಂದೇ ಎಂಬು ಭಾವನೆಗಳಿಂದ ನಾವೆಲ್ಲರು ಬದುಕಬೇಕು. ಹಾಗಾಗಿ ಜಾತಿ, ಧರ್ಮದ ವ್ಯವಸ್ಥೆಯನ್ನು ಹೋಗಲಾಡಿಸಬೇಕು ಎಂದರು.

ಸರ್ವ ಧರ್ಮ, ಜಾತಿ ಎಲ್ಲವು ಒಂದೇ ಎಂದು ಚಿತ್ರಣ ಮಾಡಿದ ವ್ಯಕ್ತಿತ್ವ ಕನಕದಾಸರದು. 16 ನೇ ಶತಮಾನರದಲ್ಲಿ ಕನಕದಾಸರು ಹಾಗೂ ಪುರಂದರದಾಸರನ್ನು ಅಶ್ವಿನಿದೇವತೆಗಳೆಂದು ಕರೆಯುತ್ತಿದ್ದರು. ಒಂದು ಧಾನ್ಯವನ್ನು ಇಟ್ಟುಕೊಂಡು ರಾಮಧಾನ್ಯ ಚರಿತೆ ಎಂಬ ಮಹಾ ಕಾವ್ಯ ರಚಿಸಿದ ಕೀರ್ತಿ ಇರುವುದೇ ಕನಕದಾಸರಿಗೆ ಸಲ್ಲುತ್ತದೆ ಎಂದರು.

ಹಲವು ಕೀರ್ತನೆಗಳ ಜತೆಗೆ ನಾಡಿಗೆ ನಾಲ್ಕು ಶ್ರೇಷ್ಠ ಕಾವ್ಯಗಳನ್ನು ನೀಡಿದ್ದಾರೆ. ಕನಕದಾಸರು ಇಂತಹ ಜಾತಿ ವ್ಯವಸ್ಥೆಯ, ಮೇಲು ಕೀಳುಗಳ ವಿರುದ್ದ ಅವರ ಕೀರ್ತನೆಗಳ ಮೂಲಕ ಹೋರಾಟ ನಡೆಸಿದ ಇವರು ಶೂದ್ರ ಸಾಹಿತ್ಯದ ಮೇರು ವ್ಯಕ್ತತ್ವ ಕನಕದಾಸರದ್ದಾಗಿದೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜಯಂತಿಗಳು ಕೇವಲ ಜಾತಿಗಳಿಗೆ ಸೀಮಿತಗೊಳಿಸಿರುವುದು ನಿಜಕ್ಕೂ ದರಂತ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಜನರನ್ನು ಬಳಕೆ ಮಾಡಿಕೊಂಡು ಜಾತಿ ವ್ಯವಸ್ಥೆಯನ್ನು ಜೀವಂತವಾಗಿರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಪಂ ಇಓ ವೀಣಾ ಮಾತನಾಡಿದರು. ಕುರುಬದ ಕಾರ್ಯದರ್ಶಿ ಗೋಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್, ಪುರಸಭೆ ಸದಸ್ಯೆ ಜಯಲಕ್ಷ್ಮ, ಬಿಇಓ ಧರ್ಮಶೆಟ್ಟಿ, ಕಿಸಾನ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಕುರುಬರ ಸಂಘದ ಅಧ್ಯಕ್ಷ ಡಿ.ಹುಚ್ಚೇಗೌಡ, ಉಪಾಧ್ಯಕ್ಷ ಕರೀಗೌಡ, ಕಾರ್ಯದರ್ಶಿ ಗೋಪಾಲ್, ಜಿಲ್ಲಾ ಉಪಾಧ್ಯಕ್ಷ ರೇವಣ್ಣ, ಮುಖಂಡರಾದ ಸಿ.ಸ್ವಾಮೀಗೌಡ, ಗೋಪಾಲ್, ಮಾಕೇಗೌಡ, ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್, ದಸಂಸ ಮುಖಂಡ ಅಂಕಯ್ಯ, ವೀರಶೈವ ಮುಖಂಡ ಮಂಡಿಬೆಟ್ಟಹಳ್ಳಿ ಮಂಜುನಾಥ್, ಕೆಆರ್‌ಎಸ್ ಪಕ್ಷದ ಶಾಂತಿ ಪ್ರಸಾದ್, ಸೇರಿದಂತೆ ಹಲವರು ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ