ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗಿ ಬದುಕನ್ನು ಹಾಳು ಮಾಡಿಕೊಳ್ಳದೆ ಆರೋಗ್ಯವಂತರಾಗಿ ಬಾಳಬೇಕೆಂದು ಸಿಪಿಐ ವಸಂತ ವಿ.ಅಸೋದೆ ಹೆಳಿದರು.
ಸದೃಡ ಆರೋಗ್ಯಕ್ಕೆ ಮಾದಕ ವಸ್ತುಗಳ ಸೇವನೆ ಮಾರಕ ಎನ್ನುವ ಅರಿವಿದ್ದರೂ ಕೆಲ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆರಂಭದಲ್ಲಿ ಕುತೂಹಲಕ್ಕೆ ಮಾಡುವ ದುಶ್ಚಟಗಳು ಕಾಲ ನಂತರ ಚಟವಾಗಿ ಪರಿಣಮಿಸಲಿದೆ. ಇದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿ ಬದಕು ಹಾಳಾಗಲಿದೆ. ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ ಪ್ರತಿಯೊಬ್ಬ ಯುವಕರು ಜಾಗೃತರಾಗಬೇಕು. ದುಶ್ಚಟಗಳಿಗೆ ಮಾರು ಹೋಗದೆ ಆರೋಗ್ಯ ಕಾಪಾಡಿಕೊಂಡು ಸಮಾಜದಲ್ಲಿ ಉತ್ತಮ ಸಂಸ್ಕಾರವಂತರಾಗಿ ಬಾಳಬೇಕು ಎಂದರು.
ಈ ವೇಳೆ ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ ಸಮಾಜದ ಪ್ರತಿಜ್ಞಾ ವಿಧಿ ಬೋದಿಸಲಾಯಿತು. ಪಿಎಸ್ಐ ಪಾಂಡುರಂಗಪ್ಪ, ಪ್ರಾಚಾರ್ಯ ಪಿ.ಎ.ಸಣ್ಣ ಪಾಲಯ್ಯ, ಹಿರಿಯ ಉಪನ್ಯಾಸಕ ಕೆ.ಕೃಷ್ಣಪ್ಪ,ಉಪನ್ಯಾಸಕರಾದ ಎಸ್.ಟಿ.ನಟರಾಜ್, ಬಿ.ಎಚ್.ಶಾರದ, ಎಸ್.ಕೆ.ವೀಣಾ, ಅತಿಥಿ ಉಪನ್ಯಾಸಕ ಟಿ.ಜಿ.ಧನಂಜಯ ಕುಮಾರ್, ಈಶ್ವರಪ್ಪ, ಸಿ.ಭಾರತಿ ಇದ್ದರು.