ಯಾಂತ್ರಿಕ ಭರಾಟೆಯಲ್ಲಿ ರಂಗಭೂಮಿ ಮರೆತ ಯುವ ಜನಾಂಗ

KannadaprabhaNewsNetwork |  
Published : Nov 24, 2026, 01:00 AM IST
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಮುಗದ ಗ್ರಾಮದ ಹನುಮಂತ ಹುಲಾಜನವರ ಅವರಿಗೆ ರಂಗಕಲಾ ಸನ್ಮಾನ ಮಾಡಲಾಯಿತು | Kannada Prabha

ಸಾರಾಂಶ

ಯಾಂತ್ರಿಕ ಭರಾಟೆಯಲ್ಲಿ ಯುವಕರು ರಂಗಭೂಮಿಯತ್ತ ಆಸಕ್ತಿ ವಹಿಸುತ್ತಿಲ್ಲ. ಯುವಕರು ನಮ್ಮ ಮೂಲ ಕಲೆಗಳಲ್ಲೊಂದಾದ ರಂಗಕಲೆಯತ್ತ ಆಸಕ್ತಿ ವಹಿಸುವಂತೆ ಮಾಡಬೇಕು. ಅಂದಾಗ ಮಾತ್ರ ರಂಗಭೂಮಿ ಪೀಳಿಗೆಯಿಂದ ಪೀಳಿಗೆಗೆ ಉಳಿದು, ಬೆಳೆಯಲು ಸಾಧ್ಯ.

ಧಾರವಾಡ:

ಯಾಂತ್ರಿಕ ಭರಾಟೆಯಲ್ಲಿ ಯುವಕರು ರಂಗಭೂಮಿಯತ್ತ ಆಸಕ್ತಿ ವಹಿಸುತ್ತಿಲ್ಲ. ಯುವಕರು ನಮ್ಮ ಮೂಲ ಕಲೆಗಳಲ್ಲೊಂದಾದ ರಂಗಕಲೆಯತ್ತ ಆಸಕ್ತಿ ವಹಿಸುವಂತೆ ಮಾಡಬೇಕು. ಅಂದಾಗ ಮಾತ್ರ ರಂಗಭೂಮಿ ಪೀಳಿಗೆಯಿಂದ ಪೀಳಿಗೆಗೆ ಉಳಿದು, ಬೆಳೆಯಲು ಸಾಧ್ಯ ಎಂದು ಡಾ. ಬಿ.ಎಂ. ಶರಭೇಂದ್ರಸ್ವಾಮಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಆಯೋಜಿಸಿರುವ ನಾಟಕೋತ್ಸವದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹಿಂದೆ ಸಾಕಷ್ಟು ನಾಟಕ ಕಂಪನಿಗಳು ರಾರಾಜಿಸುತ್ತಿದ್ದವು. ಪ್ರತಿ ಪ್ರದರ್ಶನವು ಕಿಕ್ಕಿರಿದು ತುಂಬುತ್ತಿದ್ದವು. ನಾಡಿಗೆ ಉತ್ತಮ ಮೌಲಿಕ ಸಂದೇಶ ಹಾಗೂ ಮನರಂಜನೆಯ ನೀಡುತ್ತಿದ್ದವು ಹಾಗೂ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಆದರೆ, ಇಂದು ನಾಟಕ ಕಂಪನಿಗಳು ಬೆರಳೆಣಕೆಯಷ್ಟು ಮಾತ್ರ ಉಳಿದಿವೆ. ಇಷ್ಟಾಗಿಯೂ ರಂಗಕಲೆ, ಕಲಾವಿದರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಎಲ್ಲ ಪ್ರಕಾರದ ನಾಟಕಗಳ ಪ್ರದರ್ಶನ ಏರ್ಪಡಿಸಿ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುತ್ತಿದೆ ಎಂದರು.

ಜಾನಪದ ಕಲಾವಿದ ಮುಗದ ಗ್ರಾಮದ ಹನುಮಂತ ಹುಲಾಜನವರ ಅವರಿಗೆ ರಂಗಕಲಾ ಸನ್ಮಾನ ಮಾಡಲಾಯಿತು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ತೋಡಕರ ನಿರೂಪಿಸಿದರು. ಸನ್ಮಾನ ಫಲಕ ವಿಶ್ವೇಶ್ವರಿ ಹಿರೇಮಠ ವಾಚಿಸಿದರು. ಶಂಕರ ಕುಂಬಿ ವಂದಿಸಿದರು. ನಂತರ ಬಿ.ಆರ್. ಪೊಲೀಸ್‌ಪಾಟೀಲ ರಚನೆಯ ಸಾಣಿಹಳ್ಳಿಯ ವೈ.ಡಿ. ಬದಾಮಿ ಹಾಗೂ ಮಂಜುಳಾ ನಿರ್ದೇಶನದಲ್ಲಿ `ಬಯಲು ಬಯಲಾಯಿತ್ತು’ ನಾಟಕವನ್ನು ಬನಹಟ್ಟಿಯ ವಾತ್ಸಲ್ಯ ವಿಚಾರ ವೇದಿಕೆ ಪ್ರದರ್ಶಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವ ವಿಕಲಚೇತನರ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಿ: ಡಾ. ದುರಗೇಶ್
ಯುವಜನ ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಶಾಸಕ ದಿನಕರ ಶೆಟ್ಟಿ