ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಜಿಲ್ಲೆಯ ಯುವಶಕ್ತಿ ಸಕ್ರಿಯ: ಸಾಹಿತಿ ಗಜಾನನ ಶರ್ಮಾ

KannadaprabhaNewsNetwork |  
Published : Jan 22, 2026, 01:45 AM IST
ಪೋಟೋ: 21ಎಸ್‌ಎಂಜಿಕೆಪಿ04ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಸಿಹಿಮೊಗೆ ಸಂಭ್ರಮ-2 ಅಂಗವಾಗಿ ಹಮ್ಮಿಕೊಂಡಿದ್ದ ಮಲೆನಾಡಿನ ಸಾಂಸ್ಕೃತಿಕ ವೈಭವದ ನೃತ್ಯಹಬ್ಬವಾದ ನರ್ತನ ಸಂಭ್ರಮ ಸ್ಪರ್ಧೆ ಸಮಾರಂಭದಲ್ಲಿ ಸಾಹಿತಿ ಗಜಾನಂದ ಶರ್ಮಾ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಿಹಿಮೊಗೆ ಎಂದರೆ ಸಂಭ್ರಮವಾಗಿದ್ದು, ಇಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಲರವ ಮತ್ತು ಸಾಮಾಜಿಕ ಚಟುವಟಿಕೆ ನಡೆಯುತ್ತಿದ್ದು, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಶಿವಮೊಗ್ಗದ ಯುವಶಕ್ತಿ ಸಕ್ರಿಯವಾಗಿದೆ ಎಂದು ಸಾಹಿತಿ ಗಜಾನನ ಶರ್ಮಾ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿಹಿಮೊಗೆ ಎಂದರೆ ಸಂಭ್ರಮವಾಗಿದ್ದು, ಇಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಲರವ ಮತ್ತು ಸಾಮಾಜಿಕ ಚಟುವಟಿಕೆ ನಡೆಯುತ್ತಿದ್ದು, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಶಿವಮೊಗ್ಗದ ಯುವಶಕ್ತಿ ಸಕ್ರಿಯವಾಗಿದೆ ಎಂದು ಸಾಹಿತಿ ಗಜಾನನ ಶರ್ಮಾ ಹೇಳಿದರು.

ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಸಿಹಿಮೊಗೆ ಸಂಭ್ರಮ-2 ಅಂಗವಾಗಿ ಮಲೆನಾಡಿನ ಸಾಂಸ್ಕೃತಿಕ ವೈಭವದ ನೃತ್ಯಹಬ್ಬವಾದ ನರ್ತನ ಸಂಭ್ರಮ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ವಿದೇಶಕ್ಕೆ ತೆರಳಿದಾಗ ಮೈಸೂರಿನ ಮಹಾರಾಜರು ಅವರಿಗೆ ನೆರವು ನೀಡಿದ್ದರು. ಅಲ್ಲಿಂದ ಅವರು ರಾಜರಿಗೆ ಪತ್ರಬರೆದು ಅಮೇರಿಕಾದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವಿದ್ದು, ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ನಾವು ಈಗ ವಿವೇಕಾನಂದರ ಕನಸಿನ ಜೊತೆಗೆ ಸಾಗುತ್ತಿದ್ದು, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಯುವಶಕ್ತಿಯನ್ನು ಜೊತೆಗೆ ಕರೆದುಕೊಂಡು ಹೋಗಬೇಕಾಗಿದೆ. ಹೊಸನಾಡು ಕಟ್ಟಲು ಯುವಶಕ್ತಿ ಮುಂದೆಬರಬೇಕು. ಈ ನಿಟ್ಟಿನಲ್ಲಿ ಜಾಗೃತಗೊಳಿಸಲು ಅನವರತ ಸಂಸ್ಥೆ ನಿರಂತರ ಕೆಲಸ ಮಾಡುತ್ತಿದೆ ಎಂದರು.

ಇದು ಸ್ಪರ್ಧಾತ್ಮಕ ಜಗತ್ತು. ಸ್ಫರ್ಧೆ ಎಂದರೆ ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಸ್ಫರ್ಧೆಯ ಮೂಲಕ ನಮ್ಮ ಗುಣಾತ್ಮಕ ಅಂಶಗಳನ್ನು ಪ್ರಕಟಿಸಬಹುದಾಗಿದೆ. ಸಾಧನೆ ಮಾಡುತ್ತಾ ಹೋಗಬೇಕು. ಒಂದು ಸೋಲು ನಿರಂತರ ಸೋಲು ಅಲ್ಲ, ಸೋಲೇ ಗೆಲುವಿನ ಮೊದಲ ಮೆಟ್ಟಿಲು. ಸ್ಪರ್ಧೆಗೆ ಬಂದವರೆಲ್ಲಾ ವಿಜಯಿಗಳೇ ಎಂದು ಭಾವಿಸಿ ಧನಾತ್ಮಕವಾಗಿ ತೆಗೆದುಕೊಂಡು ದೇಶಕ್ಕೆ ಕೀರ್ತಿತರುವ ಸಾಧನೆ ಮಾಡಿರಿ ಎಂದು ಹಾರೈಸಿದರು.

ಅನವರತ ಪೌಂಡೇಷನ್‌ನ ಟ್ರಸ್ಟಿ ಶಿವಕುಮಾರ್ ಅವರು ಸಂಸ್ಥೆ ನಡೆಸಿದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಶಾಸಕರು, ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್. ಜ್ಞಾನೇಶ್ವರ್, ಆರ್‌ಎಸ್‌ಎಸ್ ಮುಖಂಡ ಗಿರೀಶ್ ಕಾರಂತ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!