ಪರಿಣಾಮಕಾರಿ ಆತ್ಮವಿಶ್ವಾಸ ಮೂಡಿಸಲು ರಂಗಭೂಮಿಯಿಂದ ಸಾಧ್ಯ

KannadaprabhaNewsNetwork |  
Published : Dec 14, 2025, 02:30 AM IST
ರಂಗಭೂಮಿ ಪರಿಣಾಮಕಾರಿ | Kannada Prabha

ಸಾರಾಂಶ

ಸುಸಂಸ್ಕೃತ ಬದುಕನ್ನು ಕಲಿಸುವ ರಂಗಭೂಮಿ ಪರಿಣಾಮಕಾರಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸುಸಂಸ್ಕೃತ ಬದುಕನ್ನು ಕಲಿಸುವ ರಂಗಭೂಮಿ ಪರಿಣಾಮಕಾರಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಹೇಳಿದರು.

ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾ ಮಂಟಪ ಮೈಸೂರು ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ರಂಗೋತ್ಸವದ

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖಾಮುಖಿ ಮಾಡಿ ಚರ್ಚೆ ನಡೆಸಿ, ಜನರ ಮನಸ್ಸಿನ ಮೇಲೆ, ಪ್ರಭಾವ ಬೀರಿ, ಒಳ್ಳೆಯದನ್ನು ಪ್ರಚುರಪಡಿಸುತ್ತದೆ. ಆದ್ದರಿಂದಲೇ ಕಲೆಗಳಲ್ಲಿ ರಂಗಭೂಮಿಗೆ ಪ್ರಮುಖ ಸ್ಥಾನವಿದೆ. ಕಲಾ ಮಂಟಪನ್ನು ಸ್ಥಾಪಿಸಿ, ವಿದ್ಯಾರ್ಥಿ ಜೀವನದಲ್ಲಿ ರಂಗಭೂಮಿ ಕಲೆಯನ್ನು ಕಲಿಸಿ, ಅದನ್ನು ಉಳಿಸಿ, ಬೆಳಸುತ್ತಿರುವ ಜೆಎಸ್‌ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಕಲೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಪರಿಪೂರ್ಣತೆ ತುಂಬಿ ವ್ಯಕ್ತಿತ್ವವನ್ನು ರೂಪಿಸುತ್ತವೆ, ಒಮ್ಮೆ ರಂಗಭೂಮಿಗೆ ಕಾಲಿಟ್ಟರೆ ಅದು ಆತ್ಮಸ್ಥೈರ್ಯವನ್ನು ತುಂಬಿ, ಕೌಶಲ್ಯತೆಯನ್ನು ಕಲಿಸುತ್ತದೆ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರತೆಗೆಯಲು ಇಂತಹ ವೇದಿಕೆಗಳು ಅತ್ಯಗತ್ಯ ಎಂದರು.

ಯಾವುದೇ ಕ್ಷೇತ್ರದಲ್ಲಿ ಸಾಗಿದರೂ ಅಲ್ಲಿ ಪ್ರಾಮಾಣಿಕತೆ ಇರಬೇಕು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಪ್ರತಿಭೆಗಳು ಹೊರಬರುತ್ತವೆ, ವಿದ್ಯಾರ್ಥಿಗಳು ಸಹ ಇಂತಹ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದರು.

ಸಮಾರೋಪ ಭಾಷಣ ಮಾಡಿದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ. ಎಂ. ನರಸಿಂಹಮೂರ್ತಿ ರಂಗಭೂಮಿ ಸಾಮಾಜಿಕ ಕಳಕಳಿಯುಳ್ಳ ಪ್ರತಿಬಿಂಬ ಎಂದರು.

ದೇಶದಲ್ಲಿ ಶಿಕ್ಷಣದ ಜೊತೆ ರಂಗಭೂಮಿ ಶಿಕ್ಷಣವನ್ನು ಕಲಿಸುವಂತಹ ಸಂಸ್ಥೆ ಎಂದರೆ ಅದು ಜೆಎಸ್‌ಎಸ್ ಸಂಸ್ಥೆ, ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಉನ್ನತ ಸ್ಥಾನಕ್ಕೇರಿದ್ದಾರೆ, ಜೊತೆಗೆ ಸಾಧನೆ ಮಾಡಿರುವವರು ಸಹ ರಂಗಭೂಮಿಯಿಂದ ಹೋದವರೆ, ಆದ್ದರಿಂದಲೇ ರಂಗಭೂಮಿ ಭೂಮಿಯಷ್ಟೇ ತೂಕದದ್ದು ಎಂದರು.

ಜೆಎಸ್‌ಎಸ್ ರಂಗೋತ್ಸವ ಸಂಚಾಲಕ ಚಂದ್ರಶೇಖರ್ ಹೆಗ್ಗೋಠಾರ ಮಾತನಾಡಿ, ಕಳೆದ ೧೪ ವರ್ಷಗಳಿಂದ ಅರಂಭವಾದ ಜೆಎಸ್‌ಎಸ್ ರಂಗೋತ್ಸವವು ವಿದ್ಯಾರ್ಥಿಗಳಿಗೆ ರಂಗಭೂಮಿ ಬಗ್ಗೆ ಅಭಿರುಚಿ ಬೆಳಸುತ್ತಾ ಮತ್ತು ನಟನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ, ಇಲ್ಲಿಯವರೆಗೆ ಸುಮಾರು ೫೦ ವಿವಿಧ ನಾಟಕಗಳನ್ನು ೧೮೦೦ ಕಲಾವಿದರು ಪ್ರದರ್ಶಿಸಿ ಒಂದು ಲಕ್ಷ ೮೦ ಸಾವಿರ ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ ಮುಂದೆಯೂ ಹೊಸ ಅಯಾಮಗಳನ್ನು ಅಳವಡಿಸಿಕೊಂಡು ಜೆಎಸ್‌ಎಸ್ ಕಲಾಮಂಟಪವನ್ನು ಮುನ್ನಡೆಸಲಾಗುತ್ತಿದ ಎಂದರು.ಕೊನೆಯ ನಾಟಕವಾಗಿ ಮೈಸೂರು ಶಿಕ್ಷಕರ ಬಡಾವಣೆಯ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಮಕ್ಕಳು ಜೀವನ್ ಕುಮಾರ್‌ಹೆಗ್ಗೋಡು ನಿರ್ದೇಶಿಸಿದ, ಚಂದ್ರೇಶೇಖರ್ ಹೆಗ್ಗೋಠಾರ ಸಂಗೀತ ಸಂಯೋಜನೆ ಮಾಡಿದ ಅಂಗಭಂಗದ ರಾಜ್ಯದಲ್ಲಿ ನಾಟಕ ಪ್ರದರ್ಶನಗೊಂಡಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್ ಮುಖ್ಯ ಅತಿಥಿಯಾಗಿದ್ದರು.ಪ್ರಾಂಶುಪಾಲ ಡಾ.ಮಹದೇವಸ್ವಾಮಿ, ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ. ಸ್ವಾಮಿ ಉಪಸ್ಥಿತರಿದ್ದರು. ಡಾ. ಎ.ಆರ್.ಸುಷ್ಮಾ ವಂದಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ