ಕುದೂರು: ಮನರಂಜನೆಗೆ ಇಂದು ನೂರಾರು ಆಧುನಿಕ ಸೌಲಭ್ಯಗಳಿದ್ದರೂ ರಂಗಭೂಮಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಎನ್ನುವುದಕ್ಕೆ ಮಹಿಳೆಯರೇ ಅಭಿನಿಯಿಸುತ್ತಿರುವ ನಾಟಕಕ್ಕೆ ಸೇರಿರುವ ಜನಸ್ತೋಮವೇ ಸಾಕ್ಷಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ತಮ್ಮ ಮೇಲುಗೈ ಸಾಧಿಸುತ್ತಿದ್ದಾರೆ. ಇಲ್ಲಿ ಅಭಿನಿಯಿಸುತ್ತಿರುವ ಬಹುತೇಕ ಕಲಾವಿದರು ರೈತಾಪಿ ವರ್ಗದವರು ಎಂದು ತಿಳಿದು ಸಂತೋಷವಾಯಿತು. ಸಿನೆಮಾ ರೀಲು, ನಾಟಕ ರಿಯಲ್ಲು, ಇಲ್ಲಿ ಒಮ್ಮೆಗೆ ಪುಟಗಟ್ಟಲೇ ಸಂಭಾಷಣೆ ಮತ್ತು ಹಾಡುಗಳನ್ನು ಸತತವಾಗಿ ಅಭ್ಯಾಸ ಮಾಡಿ ಅಂತಿಮವಾಗಿ ಜನರ ಮುಂದೆ ಅಭಿನಯಿಸಬೇಕು. ಇದರಿಂದಾಗಿ ಇವರುಗಳ ಶ್ರದ್ದೆ ಇಲ್ಲಿ ಪ್ರಟಕವಾಗುತ್ತದೆ ಎಂದು ಹೇಳಿದರು.
ಸುಸಜ್ಜಿತ ರಂಗಮಂದಿರ ನಿರ್ಮಾಣ :ಕುದೂರು ಶ್ರೀರಾಮಲೀಲಾ ಮೈದಾನಕ್ಕೆ ಸುಸಜ್ಜಿತವಾಗ ರಂಗಮಂದಿರ ನಿರ್ಮಾಣವಾಗುತ್ತಿದೆ. ಇದು ನಗರ ಪ್ರದೇಶದಲ್ಲಿರುವ ಟೌನ್ ಹಾಲ್ , ರವೀಂದ್ರ ಕಲಾಕ್ಷೇತ್ರಗಳಂತೆ ದೀಪಗಳ ವ್ಯವಸ್ಥೆ ಮತ್ತು ಪುರುಷ ಮತ್ತು ಮಹಿಳೆಯರ ಮೇಕಪ್ ಕೊಠಡಿಗಳು, ಹಾಗು ಇದನ್ನು ವೀಕ್ಷಿಸಲು ಮೈದಾನದ ಸುತ್ತಲೂ ವ್ಯವಸ್ಥಿತ ಆಸನಗಳ ವ್ಯವಸ್ಥೆಯನ್ನು ಮಾಡುವಲ್ಲಿ ಕಾಮಗಾರಿ ಆರಂಭವಾಗಿದೆ. ಬರುವ ಮುಂದಿನ ಬಾರಿ ಇದೇ ಮಹಿಳೆಯರು ಹೊಸ ರಂಗಸಜ್ಜಿಕೆಯಲ್ಲಿ ನಾಟಕವನ್ನು ಅಭಿನಯಿಸಬಹುದು ಎಂದು ತಿಳಿಸಿದರು.
ನಾಟಕದ ನಿರ್ದೇಶಕ ರಾಮಕೃಷ್ಣಪ್ಪ ಮತ್ತು ರವಿ ಕಾಳೇಗಾರ್ ರವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಜಯರಾಂ, ಚಂದ್ರಶೇಖರ್, ಮುನಿರಾಜ್, ಸಂಚಾಲಕ ಗಂಗಣ್ಣ, ಧರ್ಮಪಾಲ್, ಗಂಗಮ್ಮ, ಪಾಪಣ್ಣ, ಹನುಮಂತರಾಯಪ್ಪ, ನಾಗರಾಜು, ಹನುಮಂತರಾಯಪ್ಪ, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
20ಕೆಆರ್ ಎಂಎನ್ 2,3.ಜೆಪಿಜಿ2.ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ಮಹಿಳೆಯರೇ ಅಭಿನಯಿಸಿದ್ದ ನಾಟಕದ ನಿರ್ದೇಶಕರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಸನ್ಮಾನಿಸಿದರು.
3.ನಾಟಕಕ್ಕೆ ಸೇರಿದ್ದ ಅಪಾರ ಜನಸ್ತೋಮ.