ಹಿರಿಯ ಕಲಾವಿದರಿಗೆ ಸನ್ಮಾನ । ದೊಡ್ಡಬಳ್ಳಾಪುರದಲ್ಲಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ನಾಟಕೋತ್ಸವ ಸಮಾರೋಪಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಾಟಕಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ರಂಗ ಕಲೆಗೆ ಹೆಚ್ಚಿನ ಉತ್ತೇಜನ ದೊರೆಯಬೇಕಿದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.ನಗರದ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕಂತಿಕ ಸಮಿತಿ, ತಾಲೂಕು ಕಲಾವಿದರ ಸಂಘ, ನಗರಸಭೆ, ಕನ್ನಡ ಜಾಗೃತ ಪರಿಷತ್ತು ಹಾಗೂ ಅನಿಕೇತನ ಟ್ರಸ್ಟ್ ಸಹಯೋಗದೊಂದಿಗೆ ನಡೆದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕಂತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಕಲಾವಿದರಿದ್ದು, ರಂಗ ಕಲೆಗಳಲ್ಲಿ ನಿರತರಾಗಿದ್ದಾರೆ. ಈಗ ಹವ್ಯಾಸಿ ರಂಗಭೂಮಿ ಹೊಸ ಆಯಾಮಗಳ ಮೂಲಕ ಪ್ರೇಕ್ಷಕರಿಗೆ ತಲುಪುತ್ತಿರುವುದು ಉತ್ತಮ ಬೆಳವಣಿಗೆ, ಸರ್ಕಾರ ಹಾಗೂ ಸಮುದಾಯದ ಉತ್ತೇಜನ ದೊರೆಯಬೇಕಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ಮಾತನಾಡಿ, ಸಿನಿಮಾ, ಮಾಧ್ಯಮಗಳ ಮನರಂಜನೆಗಳ ಪೈಪೋಟಿಗಳ ನಡುವೆಯೂ ರಂಗಕಲೆ ಜೀವಂತವಾಗಿದೆ. ದೊಡ್ಡಬಳ್ಳಾಪುರದ ಸಾಂಸ್ಕೃತಿಕ ಪರಂಪರೆಗೆ ತೇರಿನ ಬೀದಿಯ ನಾಟಕೋತ್ಸವದ ಕೊಡುಗೆ ಅಪಾರವಾಗಿದ್ದು, ಇದಕ್ಕೆ ಹಿಂದಿನ ಕಲಾವಿದರ ಹಾಗೂ ಆಯೋಜಕರ ಶ್ರಮ ಸ್ಮರಣೀಯ ಎಂದರು.ವಕೀಲರಾದ ಸುನಿಲ್ ಕುಮಾರ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಅಸಂಖ್ಯಾತ ಕಲಾವಿದರು ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇಂದು ಪೌರಾಣಿಕ ನಾಟಕಗಳಿಗ ಹೆಚ್ಚಿನ ವೆಚ್ಚವಾಗುತ್ತಿವೆ. ಕಲಾವಿದರಿಗೆ ಮಾಸಾಶನ ಮೊದಲಾಗಿ ಹೆಚ್ಚಿನ ಸೌಲಭ್ಯಗಳು ದೊರೆಯಬೇಕು ಎಂದರು.
ತಾಲೂಕಿನ ಕಲಾವಿದರಾದ ಟಿ.ವಿ.ವೆಂಕಟೇಶ್, ಕೃಷ್ಣ ಬಲಬದ್ರಿ, ಟಿ.ಎನ್.ಚಂದ್ರಶೇಖರ್, ಆರ್.ಮಂಜುನಾಥ್, ಶಿವಕುಮಾರ್, ವೆಂಕಟಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಎಂ.ಎಸ್.ರಾಮಯ್ಯ ಯೂತ್ ಫೌಂಡೇಷನ್ ಅಧ್ಯಕ್ಷ ರಕ್ಷಾ ರಾಮಯ್ಯ, ನಗರಸಭಾ ಸದಸ್ಯರಾದ ಎಚ್.ಎಸ್.ಶಿವಶಂಕರ್, ಡಿ.ಎಂ.ಆನಂದ್, ಆರ್.ಶಿವಣ್ಣ, ಎಂ.ಮಲ್ಲೇಶ್, ಆರ್.ಪ್ರಭಾ ನಾಗರಾಜ್, ನಾಗರಾಜ್, ಚಂದ್ರಮೋಹನ್, ಲಾವಣ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿಶ್ವಾಸ್ ಗೌಡ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಗ್ರಾ.ಬ್ಲಾಕ್ ಅಧ್ಯಕ್ಷ ಬೈರೇಗೌಡ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಎಂ.ಕಾಂತರಾಜು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯ ಕುಮಾರ್, ಸುಜ್ಞಾನ ಸಂಸ್ಥೆಯ ಎಂ.ಎಸ್.ಮಂಜುನಾಥ್, ಕೊಡಿಗೆಹಳ್ಳಿ ಗ್ರಾ.ಪಂ ಸದಸ್ಯೆ ನಾಗರತ್ನಮ್ಮ, ಜಾತ್ರಾ ಸಮಿತಿ ಸಂಚಾಲಕರಾದ ಡಿ.ಶ್ರೀಕಾಂತ, ನಂದಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ, ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದಿಂದ ಹಾಗೂ ಸ್ಥಳೀಯ ಕಲಾವಿದರಿಂದ ರಂಗ ಗೀತೆಗಳು ಹಾಗೂ ಗೀತ ಗಾಯನ ನಡೆಯಿತು. ಗಾಯಕರಾದ ಕೃಷ್ಣ ಬಲಬದ್ರಿ, ಟಿ.ಎನ್.ಚಂದ್ರಶೇಖರ್, ನೇತ್ರ ಅವರಿಂದ ಮಧುರ ಸಂಗಮ- ಕನ್ನಡ ಗೀತೆಗಳ ಗಾಯನ ನಡೆಯಿತು. ರಾತ್ರಿ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದಿಂದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶಿತವಾಯಿತು.ದೊಡ್ಡಬಳ್ಳಾಪುರದಲ್ಲಿ ನಡೆದ ನಾಟಕೋತ್ಸವದಲ್ಲಿ ತಾಲೂಕು ಕಲಾವಿದರ ಸಂಘದಿಂದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶಿತವಾಯಿತು.ದೊಡ್ಡಬಳ್ಳಾಪುರದಲ್ಲಿ ಜಾತ್ರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಡೆದ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.