ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ಶುಕ್ರವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ರಂಗ ಕಲಾವಿದರು ತಂಡದಿಂದ ಕಾಗದನಗರದ ವಿಕಸಂ, ಲಲಿತ ಕಲಾ ಸಂಘ, ಶಾಂತಲಾ ಕಲಾ ವೇದಿಕೆ, ಮಿತ್ರ ಕಲಾ ಮಂಡಳಿ ಮತ್ತು ಅಪರಂಜಿ ಅಭಿನಯ ಶಾಲೆ ಹಾಗೂ ನವೋದಯ ಕಲಾ ಸಂಘದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ `ವಿಶ್ವ ರಂಗಭೂಮಿ ದಿನಾಚರಣೆ'''''''' ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲೂ ಇಂದು ಬದಲಾವಣೆಗಳಾಗುತ್ತಿವೆ. ಅಭಿನಯದ ಮೂಲ ನೆಲೆ ರಂಗಭೂಮಿಯಾಗಿದ್ದು, ಈ ಮೂಲಕ ಗುರುತಿಸಿಕೊಂಡವರು ಇಂದು ಉನ್ನತ ಸ್ಥಾನಕ್ಕೆ ಬೆಳೆದಿದ್ದಾರೆ. ಆದರೆ ಇಂದು ರಂಗ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕಲಾವಿದರ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.
ರಂಗ ಕಲಾವಿದರು ತಂಡದ ಉಪಾಧ್ಯಕ್ಷ ಜಿ. ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ತಮಟೆ ಜಗದೀಶ್ ನಿರೂಪಿಸಿದರು. ಗಾಯಕ ಶಂಕರ್ ಬಾಬು ಪ್ರಾರ್ಥಿಸಿದರು. ಮಿತ್ರ ಕಲಾ ಮಂಡಳಿ ತಂಡದಿಂದ ರಂಗ ಗೀತೆ ಗಾಯನ, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕಿರು ನಾಟಕ ನಡೆಯಿತು.
ಶಿವಮೊಗ್ಗ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್, ಹಿರಿಯ ರಂಗಭೂಮಿ ಕಲಾವಿದರಾದ ಜಿ. ರವಿಕುಮಾರ್, ಫ್ರಾನ್ಸಿಸ್, ಜಯಲಕ್ಷ್ಮೀ ರುದ್ರಯ್ಯ, ಕಮಲಕುಮಾರಿ ಸೇರಿದಂತೆ ಎಲ್ಲಾ ಪ್ರಕಾರದ ಕಲಾವಿದರು ಪಾಲ್ಗೊಂಡಿದ್ದರು.