ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ನೀಡಿದ ಕೊಡುಗೆ ಶ್ರೇಷ್ಠ: ವಿಜಯ ಶೆಟ್ಟಿ

KannadaprabhaNewsNetwork |  
Published : Mar 28, 2025, 12:37 AM IST
ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಹನ್ನೊಂದನೇ ವರ್ಷದ ಬಿ.ಗಣಪತಿ ಪೈ ರಂಗೋತ್ಸವ 'ಮಾಗಿ-ಸುಗ್ಗಿ ನಾಟಕ ಹಬ್ಬದ ಸಮಾರೋಪ ಸಮಾರಂಭದ ಸಮಾರೋಪ ನುಡಿಗಳನ್ನಾಡಿದರು | Kannada Prabha

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ 11ನೇ ವರ್ಷದ ಬಿ.ಗಣಪತಿ ಪೈ ರಂಗೋತ್ಸವ ‘ಮಾಗಿ-ಸುಗ್ಗಿ ನಾಟಕ ಹಬ್ಬ’ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಜೀವನವನ್ನು ಸಹಜವಾಗಿ ಆಸ್ವಾಧಿಸುವ ಬಗೆಯನ್ನು ತಿಳಿಸುವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವ ಕಲೆಯಾದ ನಾಟಕಗಳ ಮೂಲಕ ವಿಶ್ವ ಸಾಂಸ್ಕೃತಿಕ ಪರಂಪರೆಗೆ ರಂಗಭೂಮಿ ಕೊಟ್ಟ ಕೊಡುಗೆ ಶ್ರೇಷ್ಠವಾದುದು ಎಂದು ಯಕ್ಷಕಲಾರಂಗ ಕಾರ್ಕಳ ಅಧ್ಯಕ್ಷ ವಿಜಯ ಶೆಟ್ಟಿ ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಕಾರ್ಕಳ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿರುವ 11ನೇ ವರ್ಷದ ಬಿ.ಗಣಪತಿ ಪೈ ರಂಗೋತ್ಸವ ‘ಮಾಗಿ-ಸುಗ್ಗಿ ನಾಟಕ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರಂಗ ಸಂಸ್ಕೃತಿ ಕಾರ್ಕಳದ ಅಧ್ಯಕ್ಷ ನಿತ್ಯಾನಂದ ಪೈ, ನಾಟಕೋತ್ಸವಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು.

ಈ ಸಂದರ್ಭ ಪ್ರತಿದಿನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಗಾಯಕರಾದ ಶಿವಕುಮಾರ್ ಮತ್ತು ರಮ್ಯ ಸುಧೀಂದ್ರ ಅವರನ್ನು ಹಾಗೂ ಭೂಮಿಕಾ ಹಾರಾಡಿ ನಾಟಕ ತಂಡದ ನಿರ್ದೇಶಕ ರಾಮ್ ಶೆಟ್ಟಿ ಅವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ರಂಗ ಸಂಸ್ಕೃತಿಯ ಸ್ಥಾಪಕ ಕಾರ್ಯದರ್ಶಿ ಹಿರಿಯ ಸಾಹಿತಿ ಜಯಪ್ರಕಾಶ್ ಮಾವಿನಕುಳಿ, ನಾಟಕೋತ್ಸವದ ಸಂಚಾಲಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ರಂಗ ನಿರ್ದೇಶಕರಾದ ಚಂದ್ರನಾಥ ಬಜಗೋಳಿ ಉಪಸ್ಥಿತರಿದ್ದರು.ನಾಟಕೋತ್ಸವದ ಸಹಸಂಚಾಲಕ ನಾಗೇಶ್ ನಲ್ಲೂರು ಸ್ವಾಗತಿಸಿದರು. ಗಣೇಶ್ ಜಾಲ್ಸೂರು ನಿರ್ವಹಿಸಿದರು. ನಿವೃತ್ತ ಶಿಕ್ಷಕ ವಸಂತ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಭೂಮಿಕಾ ಹಾರಾಡಿ ತಂಡದ ರಾಮ್ ಶೆಟ್ಟಿ ಹಾರಾಡಿ ನಿರ್ದೇಶನದ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು
ಹಸಿರು ಮಾರ್ಗಕ್ಕೆ ಬರಲಿವೆ 21 ಹೊಸ ರೈಲುಗಳು