ಅನೇಕ ರೈತರ ತೋಟಗಳಲ್ಲಿ ರಾತ್ರಿ ವೇಳೆ ಕಳ್ಳರು ಕೇಬಲ್ ಹಾಗೂ ಸ್ಟಾರ್ಟರ್ ಕಳವು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರುತಾಲೂಕಿನ ವಿವಿಧ ಭಾಗಗಳಲ್ಲಿ ರೈತರ ಪಂಪ್‌ಸೆಟ್, ಮೋಟರ್, ಕೇಬಲ್, ಸ್ಟಾರ್ಟರ್‌ಗಳ ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಕಳ್ಳತನ ಹೆಚ್ಚಾಗುವ ಮುನ್ನ ಪೊಲೀಸರು ಅಗತ್ಯ ಕ್ರಮಕೈಗೊಂಡು ಕಳ್ಳರ ಎಡೆಮುರಿ ಕಟ್ಟಬೇಕೆಂದು ರೈತರು, ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ವೃತ್ತ ನಿರೀಕ್ಷಕ ರವಿಕುಮಾರ್‌ಗೆ ದೂರು ಸಲ್ಲಿಸಿದರು.ತಾಲೂಕಿನ ಕಸಬಾ ಹೋಬಳಿ ಕೆರಗೋಡಿ ರಂಗಾಪುರ, ಚಿಕ್ಕರಂಗಾಪುರ, ಕೆಂಕೆರೆ ಹಾಗೂ ತಡಸೂರು, ನಾಗರಘಟ್ಟ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ರಂಗಾಪುರ ಗ್ರಾಮದ ಚಂದ್ರಶೇಖರಯ್ಯ, ಮಂಜುನಾಥ್, ರೇಣುಕಾರಾಧ್ಯ, ರೂಪದೇವರಾಜು, ರಾಜಶೇಖರಯ್ಯ, ಶಂಕರಮೂರ್ತಿ ಸೇರಿದಂತೆ ನೊಣವಿನಕೆರೆ, ಕಸಬಾ, ಕಿಬ್ಬನಹಳ್ಳಿ, ಹೊನ್ನವಳ್ಳಿ ಹೋಬಳಿ ಭಾಗದ ರೈತರ ತೋಟಗಳಲ್ಲಿ ಪಂಪ್ ಸೆಟ್ ಕೇಬಲ್ ಹಾಗೂ ಮೋಟರ್ ಸ್ಟಾರ್ಟರ್ ಕಳ್ಳತನವಾಗಿದೆ.
ಇನ್ನೂ ಅನೇಕ ರೈತರ ತೋಟಗಳಲ್ಲಿ ರಾತ್ರಿ ವೇಳೆ ಕಳ್ಳರು ಕೇಬಲ್ ಹಾಗೂ ಸ್ಟಾರ್ಟರ್ ಕಳವು ಮಾಡಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ರೈತರ ತೋಟಗಳಲ್ಲಿ ಪಂಪ್ ಸೆಟ್, ಕೇಬಲ್ ಹಾಗೂ ಸ್ಟಾಟರ್‌ಗಳನ್ನು ಕಳವು ಮಾಡಲಾಗಿದ್ದು, 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಕೇಬಲ್ ಸ್ಟಾರ್ಟರ್ ಕಳ್ಳತವಾಗಿದೆ. ಇದರಿಂದ ರೈತರಲ್ಲಿ ತೀವ್ರ ಆತಂಕ ಉಂಟಾಗಿದೆ. ಬೇಸಿಗೆಯಾದ ಕಾರಣ ರೈತರು ವಿದ್ಯುತ್ ಸಮಸ್ಯೆ ಹಾಗೂ ನೀರಿನ ಅಭಾವಕ್ಕೆ ಸಿಲುಕಿದ್ದು, ಇದರ ಮಧ್ಯೆ ಕಳ್ಳರ ಹಾವಳಿಯಿಂದ ರೈತರು ಕಂಗೆಟ್ಟಿದ್ದಾರೆ.ಅಲ್ಲದೆ ತೋಟದ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಇಲ್ಲದಿರುವುದು ಕಳ್ಳರಿಗೆ ಈ ಕೃತ್ಯವೆಸಗಲು ಅನುಕೂಲವಾಗುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ, ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ರಂಗಾಪುರ, ಚಿಕ್ಕರಂಗಾಪುರ, ಕೆರಗೋಡಿ ಸುತ್ತಮುತ್ತಲ ರೈತರು ದೂರು ಸಲ್ಲಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.ಫೋಟೋ 19-ಟಿಪಿಟಿ5ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕುಮಾರ್‌ಗೆ ದೂರು ಸಲ್ಲಿಸಿದ ರೈತರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.