ಗ್ಯಾಸ್‌ ಕಟರ್‌ ಬಳಸಿ ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ ಕಳ್ಳತನ

KannadaprabhaNewsNetwork |  
Published : Jul 17, 2024, 12:47 AM IST
ಕಳ್ಳತನ | Kannada Prabha

ಸಾರಾಂಶ

ಗ್ಯಾಸ್‌ ಕ​ಟರ್‌ ಮೂ​ಲಕ ಅಂಗಡಿಯ ಬಾ​ಗಿಲು ಮು​ರಿದು ಒ​ಳ ನುಗ್ಗಿದ ಕ​ಳ್ಳರು, ಅಂಗ​ಡಿ​ಯ​ಲ್ಲಿನ ಸಿ​ಸಿ ಕ್ಯಾ​ಮೆ​ರಾ​ ಸ್ಥ​ಗಿ​ತ​ಗೊ​ಳಿಸಿದ್ದಾರೆ. ಬ​ಳಿ​ಕ ಅಂಗ​ಡಿ​ಯ​ಲ್ಲಿದ್ದ ₹ 22.65 ಲಕ್ಷ ಮೌ​ಲ್ಯದ 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ ಆ​ಭ​ರಣ ಕ​ಳ್ಳ​ತನ ಮಾಡಿ ಪ​ರಾ​ರಿ​ಯಾ​ಗಿ​ದ್ದಾರೆ.

ಹು​ಬ್ಬ​ಳ್ಳಿ:

ಇ​ಲ್ಲಿಯ ರ​ಮೇ​ಶ​ ಭ​ವನ ಬಳಿಯ ಭು​ವ​ನೇ​ಶ್ವರಿ ಜ್ಯು​ವೆ​ಲರ್ಸ್‌ ಮ​ಳಿಗೆಯ ಬೀಗ ಮು​ರಿದು ಲ​ಕ್ಷಾಂತರ ರುಪಾಯಿ ಮೌ​ಲ್ಯದ ಚಿ​ನ್ನಾ​ಭ​ರಣ ಕ​ಳ್ಳ​ತನ ಮಾ​ಡಿ​ರು​ವ​ ಘ​ಟನೆ ಮಂಗ​ಳ​ವಾರ ನ​ಡೆ​ದಿ​ದೆ.

ನ​ಗ​ರದ ಜ​ಗ​ದೀಶ ದೈ​ವಜ್ಞ ಎಂಬು​ವವರಿಗೆ ಸೇರಿರುವ ಜ್ಯು​ವೆ​ಲರ್ಸ್‌ ಅಂಗ​ಡಿ​ಯಲ್ಲಿ ಕ​ಳ್ಳ​ತ​ನ​ವಾ​ಗಿದೆ. ಗ್ಯಾಸ್‌ ಕ​ಟರ್‌ ಮೂ​ಲಕ ಅಂಗಡಿಯ ಬಾ​ಗಿಲು ಮು​ರಿದು ಒ​ಳ ನುಗ್ಗಿದ ಕ​ಳ್ಳರು, ಅಂಗ​ಡಿ​ಯ​ಲ್ಲಿನ ಸಿ​ಸಿ ಕ್ಯಾ​ಮೆ​ರಾ​ ಸ್ಥ​ಗಿ​ತ​ಗೊ​ಳಿಸಿದ್ದಾರೆ. ಬ​ಳಿ​ಕ ಅಂಗ​ಡಿ​ಯ​ಲ್ಲಿದ್ದ ₹ 22.65 ಲಕ್ಷ ಮೌ​ಲ್ಯದ 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ ಆ​ಭ​ರಣ ಕ​ಳ್ಳ​ತನ ಮಾಡಿ ಪ​ರಾ​ರಿ​ಯಾ​ಗಿ​ದ್ದಾರೆ ಎಂದು ಪೊ​ಲೀ​ಸರು ತಿ​ಳಿ​ಸಿ​ದ್ದಾರೆ.ಬೆ​ಳಗ್ಗೆ ಎಂದಿ​ನಂತೆ ಸಿ​ಬ್ಬಂದಿ ಅಂಗ​ಡಿಗೆ ಬಂದಾಗ ಕ​ಳ್ಳ​ತ​ನ​ವಾ​ಗಿ​ರು​ವುದು ಗೊ​ತ್ತಾಗಿ ಪೊ​ಲೀ​ಸ​ರಿಗೆ ಮಾ​ಹಿತಿ ತಿ​ಳಿ​ಸಿ​ದ್ದಾರೆ. ತ​ಕ್ಷ​ಣವೇ ಸ್ಥ​ಳಕ್ಕೆ ಧಾ​ವಿ​ಸಿದ ಎ​ಸಿಪಿ ಶಿ​ವ​ಪ್ರ​ಕಾಶ ನಾಯ್ಕ ಹಾಗೂ ಕೇ​ಶ್ವಾ​ಪೂರ ಠಾಣೆ ಪಿಐ ಸ್ಥ​ಳಕ್ಕೆ ಭೇಟಿ ನೀ​ಡಿ​ದರು. ನಂತರ ಪೊ​ಲೀಸ್‌ ಕ​ಮಿ​ಷ​ನರ್‌ ಎನ್‌. ಶ​ಶಿ​ಕು​ಮಾರ ಭೇಟಿ ನೀಡಿ ಪ​ರಿ​ಶೀ​ಲನೆ ನ​ಡೆ​ಸಿ​ದರು. ಈ ಬಗ್ಗೆ ​ಕೇಶ್ವಾ​ಪೂರ ಪೊ​ಲೀಸ್‌ ಠಾ​ಣೆ​ಯಲ್ಲಿ ಪ್ರ​ಕ​ರಣ ದಾ​ಖ​ಲಾ​ಗಿದೆ.

ಭು​ವ​ನೇ​ಶ್ವರಿ ಅಂಗ​ಡಿ​ಯಲ್ಲಿ ಹೆ​ಚ್ಚಿನ ಪ್ರ​ಮಾ​ಣದ ಚಿ​ನ್ನಾ​ಭ​ರ​ಣ ಕ​ಳ್ಳ​ತ​ನ​ವಾ​ಗಿದೆ ಎ​ನ್ನ​ಲಾ​ಗು​ತ್ತಿದ್ದು, ಸದ್ಯ ಅಂಗ​ಡಿಯ ಮಾ​ಲೀ​ಕ​ರು ಮಾಹಿತಿ ದೊ​ರೆತ ಚಿ​ನ್ನಾ​ಭ​ರ​ಣ​ಗಳ ಕ​ಳ್ಳ​ತನ ಬಗ್ಗೆ ಮಾತ್ರ ದೂರು ನೀ​ಡಿದ್ದಾರೆ. ಉ​ಳಿ​ದಂತೆ ಅಂಗ​ಡಿ​ಯ​ಲ್ಲಿನ ಸಾ​ಮಗ್ರಿ ಬಗ್ಗೆ ಲೆ​ಕ್ಕಾ​ಚಾರ ಮಾಡಿ ದೂರು ನೀ​ಡು​ವು​ದಾಗಿ ಮಾ​ಲೀ​ಕರು ತಿ​ಳಿ​ಸಿ​ದ್ದಾರೆ ಎಂದು ಪೊ​ಲೀ​ಸರು ಮಾ​ಹಿತಿ ನೀ​ಡಿ​ದ್ದಾರೆ.

ಮೊದಲ ಪ್ರಕರಣ:

ಹು-ಧಾ ನೂ​ತ​ನ ಪೊ​ಲೀಸ್‌ ಕ​ಮಿ​ಷ​ನರ್‌ ಆಗಿ ಎ​ನ್‌. ​ಶ​ಶಿ​ಕು​ಮಾರ ಅ​ಧಿ​ಕಾರ ವ​ಹಿಸಿಕೊಂಡ ನಂತ​ರ​ದಲ್ಲಿ ದಾ​ಖ​ಲಾದ ಮೊ​ದಲ ಮ​ತ್ತು ದೊಡ್ಡ ಪ್ರ​ಮಾ​ಣದ ಕ​ಳ್ಳ​ತನ ಪ್ರ​ಕ​ರ​ಣ ಇ​ದಾ​ಗಿದೆ. ಹೀ​ಗಾ​ಗಿ ಈ ಪ್ರ​ಕ​ರ​ಣ​ವನ್ನು ಪೊ​ಲೀ​ಸ​ರು ಗಂಭೀ​ರ​ವಾಗಿ ಪ​ರಿ​ಗ​ಣಿಸಿ ಚು​ರು​ಕಿ​ನಿಂದ ತ​ನಿಖೆ ಆ​ರಂಭಿ​ಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

15 ದಿನದ ಹಿಂದೆ ಮದುವೆ ಆಗಿದ್ದ ಜೋಡಿ ಭೀಕರ ಅಪಘಾತಕ್ಕೆ ಬಲಿ
ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌