ಮಾಗಡಿ: ಇತಿಹಾಸ ಪ್ರಸಿದ್ಧ ಕೆಂಪೇಗೌಡರ ಕಾಲದ ಕೆಂಪಸಾಗರ ಕೆರೆಯ ತೆಪ್ಪೋತ್ಸವಕ್ಕೆ ಶಾಸಕ ಬಾಲಕೃಷ್ಣ ಚಾಲನೆ ನೀಡಿದರು
ಮಾಗಡಿ: ಇತಿಹಾಸ ಪ್ರಸಿದ್ಧ ಕೆಂಪೇಗೌಡರ ಕಾಲದ ಕೆಂಪಸಾಗರ ಕೆರೆಯ ತೆಪ್ಪೋತ್ಸವಕ್ಕೆ ಶಾಸಕ ಬಾಲಕೃಷ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ತಾಯಿಗಾಗಿ ಕೆಂಪಸಾಗರ ಕೆರೆಯನ್ನು ನಿರ್ಮಿಸಿದ್ದರೆಂಬ ಪ್ರತೀತಿ ಇದೆ. ಈ ಭಾಗದ ಗ್ರಾಮಸ್ಥರು ಹಿಂದಿನಿಂದಲು ಕೆರೆ ಕೋಡಿ ಬಿದ್ದ ಬಳಿ ತೆಪ್ಪೋತ್ಸವ ಮಾಡುವುದು ವಾಡಿಕೆ, ಅದರಂತೆ ಈ ಬಾರಿಯೂ ತೆಪ್ಪೋತ್ಸವ ಪೂಜೆ ಮಾಡಲಾಗಿದೆ ಎಂದು ಹೇಳಿದರು.ಗ್ರಾಮಸ್ಥರ ಬೇಡಿಕೆಯಂತೆ ಕೆರೆಯ ಏರಿ ಅಗಲ ಮಾಡಿ ಹುಲಿಯೂರುದುರ್ಗಾ ಮುಖ್ಯ ರಸ್ತೆಯಿಂದ ಹಾಲಸಿಂಗನಹಳ್ಳಿವರೆಗೆ ಡಾಂಬರು ರಸ್ತೆ ಮಾಡುವಂತೆ ಈಗಾಗಲೇ ರಸ್ತೆ ಮತ್ತು ಕೆರೆ ಏರಿ ಅಭಿವೃದ್ಧಿಗೆ ಕ್ರಮ ವಹಿಸಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯೆ ಸುಮಾ ರಮೇಶ್ ಮಾತನಾಡಿ, ಕೆಂಪಸಾಗರ ಕೆರೆಗೆ ಗಂಗೆಪೂಜೆ ಮಾಡಿದರೆ ಮಕ್ಕಳು ಇಲ್ಲದವರಿಗೆ ಮಕ್ಕಳು ಆಗುತ್ತದೆ ಎಂಬ ನಂಬಿಕೆ ಇದೆ. ಹಲವರ ಹರಕೆಗಳು ಈಡೇರಿ, ಮರಳಿ ಕೆಂಪಸಾಗರ ಕೆರೆಗೆ ಪೂಜೆ ಸಲ್ಲಿಸಿ ಹರಕೆ ತೀರಿಸುವವರ ಸಂಖ್ಯೆ ಹೆಚ್ಚೆ ಇದೆ ಎಂದು ತಿಳಿಸಿದರು.
ಇದೇ ವೇಳೆ ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಕಲ್ಕೆರೆ ಶಿವಣ್ಣ ಸೇರಿದಂತೆ ಕೆಂಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಷನ್)
ಮಾಗಡಿ ತಾಲೂಕಿನ ಕೆಂಪಸಾಗರ ಕೆರೆಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.