ಯುವಜನತೆಗೆ ಮುಂದೆ ಸವಾಲು, ಅವಕಾಶ ಇದೆ: ಸಂತೋಷ ಕೆಂಚಪ್ಪ

KannadaprabhaNewsNetwork |  
Published : Jun 08, 2026, 01:30 AM IST
ನರಸಿಂಹರಾಜಪುರ ತಾಲೂಕಿನ ಮಡಬೂರು ಡಿ.ಎನ್.ಎ.ಸಭಾ ಭವನದಲ್ಲಿ ನಡೆದ ಜೇಸಿ ವಲಯ 14 ರ ಮದ್ಯ ವಾರ್ಷಿಕ ಸಮ್ಮೇಳನ - ಪರ್ವ -2026 ನ್ನು ಜೇಸಿ 14 ರ ವಲಯ ಅಧ್ಯಕ್ಷ ಪ್ಜಜ್ವಲ್ ಎಸ್ ಜೈನ್  ಉದ್ಘಾಟಿಸಿದರು. | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಯುವ ಜನರಿಗೆ ಸವಾಲುಗಳು ಎದುರಾಗಲಿದೆ. ಅದೇ ರೀತಿ ಅವಕಾಶಗಳು ಸಹ ಲಭ್ಯವಾಗಲಿದೆ ಎಂದು ಜೇಸಿ ಸಂಸ್ಥೆ ಬೆಂಗಳೂರು ವಲಯದ ಸಂತೋಷ್ ಕೆಂಚಾಂಬ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮುಂದಿನ ದಿನಗಳಲ್ಲಿ ಯುವ ಜನರಿಗೆ ಸವಾಲುಗಳು ಎದುರಾಗಲಿದೆ. ಅದೇ ರೀತಿ ಅವಕಾಶಗಳು ಸಹ ಲಭ್ಯವಾಗಲಿದೆ ಎಂದು ಜೇಸಿ ಸಂಸ್ಥೆ ಬೆಂಗಳೂರು ವಲಯದ ಸಂತೋಷ್ ಕೆಂಚಾಂಬ ತಿಳಿಸಿದರು.

ತಾಲೂಕಿನ ಮಡಬೂರಿನ ಡಿ.ನ್.ವಿ.ಸಮುದಾಯ ಭವನದಲ್ಲಿ ಭಾನುವಾರ ಜೇಸಿ ಎನ್‌.ಆರ್.ಪುರ ಜ್ವಾಲಾಮಾಲಿನಿ ಆಶ್ರಯದಲ್ಲಿ ನಡೆದ ಮಧ್ಯವಾರ್ಷಿಕ ಸಮ್ಮೇಳನ- ಪರ್ವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಇತಿಹಾಸ ಅರಿಯದಿದ್ದರೆ ಇತಿಹಾಸ ಸೃಷ್ಠಿ ಮಾಡಲು ಸಾದ್ಯವಿಲ್ಲ. ಭಾರತ ದೇಶದಲ್ಲಿ ಪ್ರತಿ ವರ್ಷ 1 ಕೋಟಿ ಜನರು ಪದವಿ ಪಡೆದು ಹೊರ ಬರುತ್ತಾರೆ.ಇವರಲ್ಲಿ ಶೇಕಡ 10 ರಷ್ಟು ಯುವ ಜನರಿಗೂ ಉದ್ಯೋಗ ಸಿಗುತ್ತಿಲ್ಲ. ನೈಪುಣ್ಯತೆ ಇದ್ದವರಿಗೆ ಜೀವನ ರೂಪಿಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ನಮ್ಮ ದೇಶದಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ . ಅದನ್ನು ಯುವ ಜನರು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸ್ವಾಭಿಮಾನಿಯಾಗಿ, ಸ್ವಾವಲಂಭಿಯಾಗಿ ಬದುಕಬೇಕು ಎಂದು ಕರೆ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ಜೇಸಿ ವಲಯ 14ರ ಅಧ್ಯಕ್ಷ ಪ್ರಜ್ವಲ್ ಎಸ್ ಜೈನ್ ಮಾತನಾಡಿ, ಜೇಸಿ ಸಂಸ್ಥೆಯಿಂದ ಸಮಾಜದಲ್ಲಿ ಬದಲಾವಣೆಯಾಗಲಿದೆ.ಜೇಸಿ ಸಂಸ್ಥೆಯಿಂದ ಸಾಕಷ್ಟು ಸ್ವೇಹಿತರನ್ನು ಗಳಿಸಿದ್ದೇವೆ. ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ, ರಾಜ್ಯ ಸಾಂಸ್ಕೃತಿಕ ರಾಯಭಾರಿ ಕಣಿವೆ ವಿನಯ ಮಾತನಾಡಿ, ಜೇಸಿ ಸಂಸ್ಥೆಯು ನಾಯಕತ್ವ ಗುಣ ಕಲಿಸುತ್ತದೆ.ನಾಯಕರಾಗಿ ಬೆಳೆದವರು ಇನ್ನಷ್ಟು ನಾಯಕರನ್ನು ಬೆಳೆಯಬೇಕು. ಈ ದೇಶದ ರಾಜಕಾರಣಿಗಳು ಜೇಸಿ ಸಂಸ್ಥೆಯ ಶಿಸ್ತು,ಸಮಯಪಾಲನೆ ಹಾಗೂ ತರಬೇತಿಗಳಲ್ಲಿ ಕಲಿಯಬೇಕು ಎಂದು ಸಲಹೆ ನೀಡಿದರು.

ಪ್ರಕೃತಿ ಹಸಿದವರಿಗೆ ಅನ್ನ ನೀಡುತ್ತದೆ. ಅನ್ನ ಕಸಿಯುವುದು ವಿಕೃತಿ. ಮಲೆನಾಡಿನ ಆತಿಥ್ಯ ನಮ್ಮ ಸಂಸ್ಕೃತಿಯಾಗಿದೆ ಎಂದರು.

ಜೇಸಿ ವಲಯ 14ರ ಪೂರ್ವ ವಲಯ ಅಧ್ಯಕ್ಷ ಭದ್ರೇಶ್ ಮಾತನಾಡಿ, 2009ರಲ್ಲಿ ಎನ್‌.ಆರ್.ಪುರದಲ್ಲಿ ಮಧ್ಯವಾರ್ಷಿಕ ಸಮ್ಮೇಳನ ನಡೆದಿತ್ತು. 17 ವರ್ಷದ ನಂತರ ಮತ್ತೆ ಮಧ್ಯವಾರ್ಷಿಕ ಸಮ್ಮೇಳನ ನಡೆದಿದೆ. ನಮ್ಮ ಶಕ್ತಿ ನಮಗೆ ಗೊತ್ತಾಗಬೇಕಾದರೆ ಸೂಕ್ತ ವೇದಿಕೆ ಸಿಗಬೇಕು. ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೀನಿಯರ್ ಚೇಸಿ ಛೇರ್ಮನ್ ಆನಂದ್ ಮಾತನಾಡಿ, ಜೇಸಿ ಸಂಸ್ಥೆಯ ಎರಡನೇ ಜೀವನ ಸೀನಿಯರ್ ಜೇಸಿ ಆಗಿದೆ. ಮದ್ಯ ವಾರ್ಷಿಕ ಸಮ್ಮೇಳನದಲ್ಲಿ ಎಲ್ಲಾ ಘಟಕಗಳಿಗೂ ಪ್ರಶಸ್ತಿ ಸಿಗಲಿದೆ. ಇಲ್ಲಿ ಪ್ರಶಸ್ತಿ ಸಿಗದೆ ಇದ್ದವರು ವಲಯ ಸಮ್ಮೇಳನದಲ್ಲಿ ಪ್ರಶಸ್ತಿಗಾಗಿ ಪ್ರಯತ್ನ ನಡೆಸಬಹುದು ಎಂದರು.

ಸಭೆಯ ಅಧ್ಯಕ್ಷತೆಯನ್ನು ಜೇಸಿ ವಲಯ 14 ರೀಜನ್ ಸಿ ವಲಯದ ಉಪಾಧ್ಯಕ್ಷ ಎಸ್.ಜಗದೀಶ್ ವಹಿಸಿದ್ದರು. ವೇದಿಕೆಯಲ್ಲಿ ಜೇಸಿ ವಲಯ 14ರ ಉಪಾಧ್ಯಕ್ಷ ಅಶೋಕ್, ವಲಯ ಕಾರ್ಯದರ್ಶಿ ಶೃತಿ ರೋಹಿತ್,ಎನ್.ಆರ್.ಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಆದರ್ಶ ಬಿ ಗೌಡ, ಕಾರ್ಯದರ್ಶಿ ರಜಿತ್ ವಗಡೆ, ಸಮ್ಮೇಳನ ನಿರ್ದೇಶಕ ಪ್ರೀತಂ , ಜೇಸಿ ವಲಯ 14ರ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು. ಅಭಿನವ ಗಿರಿರಾಜ್ ಹಾಗೂ ಅಬ್ದುಲ್ ವಹಾಬ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ 6 ತಿಂಗಳಲ್ಲಿ ಸಾಧನೆ ಮಾಡಿದ ವಿವಿಧ ಜೇಸಿ ಘಟಕಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಸಬಾ ಕಾರ್ಯಕ್ರಮಕ್ಕೂ ಮೊದಲು ಮಡಬೂರು ಮುಖ್ಯ ರಸ್ತೆಯಿಂದ ಮೆರವಣಿಗೆ ಮೂಲಕ ಬರಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಲಾಶಯ ಹಿನ್ನೀರಿನ ಗ್ರಾಮಗಳಿಗೆ ಆದ್ಯತೆ
ಕಾಡಲ್ಲಿ ರೌಡಿಪಾರ್ಟಿ, ತಲೆ ತಗ್ಗಿಸುವ ವಿಷಯ: ರೈತಸಂಘ