ಬಿ.ಶೇಖರ್ ಗೋಪಿನಾಥಂ
ನಗರದ ನಜರ್ ಬಾದ್ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯು ಅವ್ಯವಸ್ಥೆಯ ಆಗರವಾಗಿದೆ. ಈ ಕಚೇರಿಯಲ್ಲಿ 70 ರಿಂದ 80 ಮಂದಿ ನೌಕರರು ಕೆಲಸ ಮಾಡುತ್ತಿದ್ದು, ಇವರಿಗಾಗಿ ಇರುವುದು ಮಾತ್ರ 2 ಕೊಠಡಿ. ಹೀಗಾಗಿ, ನೌಕರರು ಕುಳಿತುಕೊಂಡು ಕೆಲಸ ಮಾಡಲು ಜಾಗವೇ ಇಲ್ಲ. ಒಬ್ಬರು ಕುಳಿತರೆ ಮತ್ತೊಬ್ಬರು ನಿಂತುಕೊಂಡೇ ವ್ಯವಹರಿಸಬೇಕಾದ ಪರಿಸ್ಥಿತಿಯಿದೆ.
ಇರುವ 2 ಕೊಠಡಿಗಳಲ್ಲಿ ಒಂದು ಕೊಠಡಿ ಮಳೆ ಬಂದರೆ ಸೋರುತ್ತದೆ. ಈ ಕೊಠಡಿಯಲ್ಲಿರುವ ಕಂಪ್ಯೂಟರ್ ಗಳನ್ನು ಸೋರುವ ಮಳೆ ನೀರಿನಿಂದ ರಕ್ಷಿಸಲು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿಡಲಾಗುತ್ತಿದೆ. ಮಳೆ ನೀರಿನಿಂದಾಗಿ ಮೇಲಿಂದ ಮೇಲೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಿದೆ. ಹಲವಾರು ನೌಕರರಿಗೆ ಮೇಲಿಂದ ಮೇಲೆ ಕರೆಂಟ್ ಶಾಕ್ ಅನುಭವವಾಗಿದೆ. ಹೀಗಾಗಿ, ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕಾರಣಗಳಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಲು ಕಷ್ಟವಾಗಿದೆ.ಪ್ರತ್ಯೇಕ ಕಟ್ಟಡದ ಅಗತ್ಯ:
ಹೀಗಾಗಿ, ಪ್ರತ್ಯೇಕವಾಗಿ ಸುಸಜ್ಜಿತವಾದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಿಸಿಕೊಡಬೇಕು. ಅಥವಾ ಸಾಕಷ್ಟ ಸ್ಥಳಾವಕಾಶ ಇರುವ ಕಡೆಗೆ ಕಚೇರಿಯನ್ನು ಸ್ಥಳಾಂತರಿಸಬೇಕು. ಈ ಮೂಲಕ ನೌಕರರು ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.ಮೇಲ್ಛಾವಣಿ ಪರಿಶೀಲಿಸಿದ ಡಿಸಿ