ಹೊಸಹುಡ್ಯ ಗ್ರಾಮದ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

KannadaprabhaNewsNetwork |  
Published : Nov 22, 2024, 01:16 AM IST
20ಬಿಜಿಪಿ-2ಅ | Kannada Prabha

ಸಾರಾಂಶ

ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದ ರಸ್ತೆ ಮೂಲಕ ಹೊಸಹುಡ್ಯ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಮುಖ್ಯ ರಸ್ತೆ ಹಳಾಗಿದೆ.

ಬಿ.ಟಿ.ಚಂದ್ರಶೇಖರರೆಡ್ಡಿ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಪಟ್ಟಣಕ್ಕೆ ಹೊಂದಿಕೊಂಡಿರುವ ಘಂಟಂವಾರಿಪಲ್ಲಿ ಗ್ರಾ.ಪಂ ವ್ಯಾಪ್ತಿಯ ಹೊಸಹುಡ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ಉದ್ದಕ್ಕೂ ಕಂಡಕಂಡಲ್ಲಿ ಮೊಣಕಾಲು ಆಳದ ಗುಂಡಿಗಳು ಬಿದ್ದಿವೆ. ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ, ಆಟೋ ಸೇರಿದಂತೆ ವಿವಿಧ ವಾಹನಗಳ ಸವಾರರು ರಸ್ತೆ ಯಾವುದೋ ಗುಂಡಿಗಳು ಯಾವುದೇ ತಿಳಿಯದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಿಂದ ಕೂಗಳತೆಯ ದೂರದಲ್ಲಿರುವ ಹಾಗೂ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದ ರಸ್ತೆ ಮೂಲಕ ಹೊಸಹುಡ್ಯ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.

ಅಲ್ಲದೆ ಎಲ್ಲಿ ನೋಡಿದರೂ ಸಹ 2-3 ಅಡಿಯಷ್ಟು ಉದ್ದ ಗುಂಡಿಗಳ ದರ್ಶನವಾಗುತ್ತೆ. ಈ ರಸ್ತೆ ಹಾಳಾಗಿ ಹಲವು ತಿಂಗಳು ಕಳೆದರೂ ನಮಗೂ ಈ ರಸ್ತೆಯ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತನಿಧಿಗಳು ವರ್ತಿಸುತ್ತಿದ್ದಾರೆ ಅಲ್ಲದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ದುರಸ್ತಿ ಎಂಬುದು ಮರೀಚಿಕೆಯಾಗಿದೆ.

ಇದೇ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಗೆ ಸೇರಿದ ಬಸ್ ಡಿಪೋ ಇದೆ. ಪಟ್ಟಣದಿಂದ ಬಸ್ ಡಿಪೋಗೆ ಹಲವಾರು ಬಸ್‍ಗಳು ಪ್ರತಿನಿತ್ಯ ಓಡಾಡುತ್ತವೆ, ಸಂಪೂರ್ಣವಾಗಿ ಹದೆಗಟ್ಟಿರುವ ಈ ರಸ್ತೆಯಲ್ಲಿ ಪಟ್ಟಣದಿಂದ ಹೊಸಹುಡ್ಯ ಗ್ರಾಮಕ್ಕೆ ಹೋಗುವ ಹಾಗೂ ಪಟ್ಟಣದಿಂದ ಗ್ರಾಮಕ್ಕೆ ಬರುವ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಮತ್ತು ಈ ಭಾಗದ ಸಾರ್ವಜನಿಕರು ತೊಂದರೆ ಅನುಭವಿಸುವುದಲ್ಲದೆ ರಸ್ತೆ ಹಾಳಾಗಿದೆ.

ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅನೇಕ ಸಲ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಿವಿಧ ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-----------------------ಕೋಟ್‌ಗಳುಪಟ್ಟಣದಿಂದ ಹೊಸಹುಡ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು 2-3 ಅಡಿಗಳಷ್ಟು ಆಅಳದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸಲು ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿಸಿ.

ಗೋವಿಂದಯ್ಯ ಶೆಟ್ಟಿ, ಬೈಕ್‌ ಸವಾರ

ಪಟ್ಟಣದಿಂದ ಹೊಸಹುಡ್ಯ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ರಸ್ತೆ ಹಾಳಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆದರೆ ಈ ರಸ್ತೆ ಪ್ರಧಾನ ಮಂತ್ರಿ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣವಾಗಿದೆ. ಇನ್ನೂ ನಮ್ಮ ಇಲಾಖೆಗೆ ಹಸ್ತಾಂತರವಾಗಿಲ್ಲ.

ಮಧು, ಜಿ.ಪಂ ತಾಂತ್ರಿಕ ಉಪವಿಭಾಗ, ಬಾಗೇಪಲ್ಲಿ.

20ಬಿಜಿಪಿ-2: ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಹೊಸಹುಡ್ಯ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಹಾಳಾಗಿರುವ ರಸ್ತೆಯಲ್ಲಿನ ಹದಗೆಟ್ಟ ಮತ್ತು ಗುಂಡಿಗಳಲ್ಲಿ ಸಂಚರಿಸುತ್ತಿರುವ ಕೆಎಎಸ್‌ಆರ್‌ಟಿಸಿ ಬಸ್ ಮತ್ತು ಟೆಂಪೋ.

20ಬಿಜಿಪಿ-2ಬಿ: ಹಾಳಾಗಿರುವ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸುವ ಸರ್ಕಸ್ ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರು.

20ಬಿಜಿಪಿ-2ಸಿ: ಗೋವಿಂದಯ್ಯ ಶೆಟ್ಟಿ, ವಾಹನ ಸವಾರರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ