ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೆಲ ಯುವಕರ ಪುಂಡಾಡಕ್ಕೆ ಪೊಲೀಸರು ಬ್ರೇಕ್ ಹಾಕಲು ರೌಡಿ ಪಟ್ಟ ಕಟ್ಟುವುದನ್ನು ತುರ್ತಾಗಿ ಮಾಡಲು ಮನಸ್ಸು ಮಾಡಲಿ ಎಂಬ ಸಲಹೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಿದೆ. ಯುವಕರಿಂದ ಆನ್‌ಲೈನ್ ಗೇಮ್ ಹಾವಳಿ ಹೆಚ್ಚಿದೆ. ಐಪಿಎಫ್ ಬೆಟ್ಟಿಂಗ್ ದಂಧೆ ಸದ್ದು ಮಾಡುತ್ತಿದೆ. ಕೇರಳ ಲಾಟರಿ ಟಿಕೆಟ್ ಮಾರಾಟ ಹೆಚ್ಚಿದೆ. ಇಂಥ ಅಕ್ರಮಕ್ಕೆ ಪೊಲೀಸರು ಮೊದಲು ಕಡಿವಾಣ ಹಾಕುವ ಕೆಲಸ ಆಗಬೇಕಿದೆ.
ಪಟ್ಟಣದಲ್ಲಿ ಯುವಕರ ಪುಂಡಾಟಕ್ಕೆ ನೂತನ ಪೊಲೀಸ್ ಇನ್ಸ್‌ಪೆಕ್ಟರ್ ಜಯಕುಮಾರ್‌ರಿಂದ ಬ್ರೇಕ್ ಹಾಕುವ ಕೆಲಸ ಆಗಬೇಕು. ಸ್ಥಳೀಯ ಪೊಲೀಸರ ಕೆಲಸಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾಥ್ ನೀಡಲಿ.ಪುಂಡರನ್ನು ಬೇಗ ಬಂಧಿಸಲಿ:
ದರೋಡೆಗೆ ಯತ್ನಿಸಿ ಪರಾರಿಯಾದ ೮ ಮಂದಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 6 ಮಂದಿಯ ಜೊತೆಗೆ ಇನ್ನಿಬ್ಬರ ಹೆಸರು ಸೇರ್ಪಡೆಯಾಗಿದೆ. ನಾಳೆಯೊಳಗೆ ಬಂಧಿಸಲು ಪ್ರಯತ್ನ ನಡೆದಿದೆ.-ಜಯಕುಮಾರ್, ಇನ್ಸ್‌ಪೆಕ್ಟರ್, ಗುಂಡ್ಲುಪೇಟೆ